ಕರ್ನಾಟಕ

karnataka

ETV Bharat / state

ನಮ್ಮನ್ನು ಜೈಲಿಗೆ ಕಳುಹಿಸುವುದರಲಿ, ಕಾಂಗ್ರೆಸ್ಸಿಗರು ಜೈಲಿಗೆ ಹೋಗುವುದರಿಂದ ಮೊದಲು ತಪ್ಪಿಸಿಕೊಳ್ಳಲಿ: ಸಿಎಂ - ETV Bharat kannada News

ಕಾಂಗ್ರೆಸ್​ ನಾಯಕರು ಮೊದಲು ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲಿ- ಅವರ ಕರ್ಮಕಾಂಡ ನೆನಪು ಮಾಡಿಕೊಂಡು ಮಾತನಾಡುತ್ತಿದ್ದಾರೆ- ಸಿಎಂ ಬೊಮ್ಮಾಯಿ ಟಾಂಗ್​

Chief Minister Basavaraja Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

By

Published : Feb 15, 2023, 1:08 PM IST

ಗಾಳಿಯಲ್ಲಿ ಗುಂಡು ಹೊಡೆದರೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಸಿಎಂ ಟಾಂಗ್​.

ಬೆಂಗಳೂರು :ಅಧಿಕಾರಕ್ಕೆ ಬಂದರೆ ಬಿಜೆಪಿಯವರನ್ನು ಜೈಲಿಗೆ ಹಾಕುತ್ತೇವೆ ಎನ್ನುವ ಕಾಂಗ್ರೆಸ್ ನಾಯಕರು ಮೊದಲು ಸ್ವತಃ ಜೈಲಿಗೆ ಹೋಗುವುದರಿಂದ ತಪ್ಪಿಸಿಕೊಳ್ಳಲಿ, ಅವರ ಬೇಲ್​ಗಳನ್ನು ರಕ್ಷಣೆ ಮಾಡುವ ಪ್ರಯತ್ನ ಮಾಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ನಗರದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸಿನವರು ಮಾಡಿರುವ ಅನುಭವದ ಆಧಾರದಲ್ಲಿ ಮಾತನಾಡುತ್ತಿದ್ದಾರೆ. ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಏನೆಲ್ಲಾ ಕರ್ಮಕಾಂಡ ಮಾಡಿದ್ದರೋ ಅದನ್ನು ನೆನಪು ಮಾಡಿಕೊಂಡು ಮಾತನಾಡುತ್ತಿದ್ದಾರೆ ಎಂದು ಟಾಂಗ್​ ಕೊಟ್ಟರು.

ಟೆಂಡರ್​ಗಳಿಗೆ ಯಾರು ಗುತ್ತಿಗೆದಾರರು ಅರ್ಜಿ ಹಾಕಬಾರದು ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಆಗ ಎಲ್ಲ ತನಿಖೆ ಮಾಡಿಸುತ್ತೇವೆ ಎಂದು ಧಮ್ಕಿ ಹಾಕುತ್ತಿದ್ದಾರೆ. ಇದರ ಅರ್ಥ ಅವರು ಅಧಿಕಾರಕ್ಕೆ ಬಂದರೆ ಮುಂದೆ ಸುಲಿಗೆ ಮಾಡಲು ಬರುತ್ತಿದ್ದಾರೆ ಎನ್ನುವುದು ಬಹಳ ಸ್ಪಷ್ಟವಾಗಿದೆ. ಅವರ ಅಜೆಂಡವನ್ನು ಅವರೇ ಹೇಳಿಕೊಂಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ಟೀಕಿಸಿದರು.

40% ಹಗರಣ ಆರೋಪ :ಇನ್ನೂ ರಾಜ್ಯದಲ್ಲಿ ಭಾರಿ ಸುದ್ದಿ ಮಾಡಿದ್ದ 40% ಹಗರಣ ಕುರಿತು ಮಾತನಾಡಿದ ಸಿಎಂ, ಈವರೆಗೂ ಒಂದೇ ಒಂದು ಪ್ರಕರಣವನ್ನು ಸಾಬೀತುಪಡಿಸಿಲ್ಲ. ನ್ಯಾಯಾಲಯಕ್ಕೆ ದಾಖಲೆ ಸಲ್ಲಿಕೆ ಮಾಡುತ್ತೇವೆ ಎಂದಿದ್ದರು ಅದನ್ನೂ ಮಾಡಿಲ್ಲ, ಅವರು ಎಲ್ಲಿ ಬೇಕಾದರೂ ದೂರು ಕೊಡಬಹುದು ತನಿಖೆಯಾಗಲಿದೆ. ಅದನ್ನು ಮಾಡುವುದು ಬಿಟ್ಟು ಬರೀ ಗಾಳಿಯಲ್ಲಿ ಗುಂಡು ಹೊಡೆದರೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಭ್ರಷ್ಟಾಚಾರದ ಆರೋಪಕ್ಕೆ ಟಾಂಗ್ ನೀಡಿದರು.

ಲೋಕಯುಕ್ತ ತನಿಖೆ :ಕಾಂಗ್ರೆಸ್ ನವರು ಹಿಂದೆ ಮಾಡಿರುವುದೆಲ್ಲಾ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದ್ದು ಅದಕ್ಕೆ ಉತ್ತರ ಕೊಡಲಿ. ಅವರ ಮೇಲೆ ಇರುವ ಆರೋಪಗಳ ಬಗ್ಗೆ ಹಾಗೂ ಅವರ ಕಾಲದಲ್ಲಿ ಆಗಿರುವ ಟೆಂಡರ್ ಹಗರಣಗಳ ಬಗ್ಗೆ ಮೊದಲು ಉತ್ತರ ಕೊಡಲಿ ಎಂದರು.

ಗೂಳಿಹಟ್ಟಿ ಶೇಖರ್ ಪತ್ರ :ಗೂಳಿಹಟ್ಟಿ ಶೇಖರ್ ಜನರಲ್ ಆಗಿ ಪತ್ರ ಬರೆದಿದ್ದಾರೆ. ಅವರಿಗೆ ವಾಪಸ್ ಪತ್ರ ಬರೆದು ಸ್ಪೆಸಿಫಿಕ್ ಮಾಹಿತಿ ಕೇಳುತ್ತಿದ್ದೇವೆ. ಅವರು ಕೂಡ ನಿಖರವಾಗಿ ಮಾಹಿತಿ ಕೊಟ್ಟರೆ ತನಿಖೆ ಮಾಡಿಸುತ್ತೇವೆ. ಯಾವುದಾದರೂ ಅಧಿಕಾರಿ ಯಾವುದಾದರೂ ಹಂತದಲ್ಲಿ ಏನಾದರೂ ಮಾಡಿದ್ದರೆ ತನಿಖೆ ಮಾಡುತ್ತೇವೆ. ಮೊದಲಿಂದಲೂ ನಮ್ಮ ನಿಲುವು ಇದೇ ಆಗಿದೆ. ಆದರೆ ತನಿಖೆಗೆ ಈ ರೀತಿ ಸುಮ್ಮನೆ ದಾಖಲೆ ನೀಡದೆ, ಖಚಿತವಾಗಿ ಏನೂ ಹೇಳದೆ ಜನರಲ್ ಆಗಿ ಆರೋಪ ಮಾಡುತ್ತಾ ಹೋದರೆ ಸರಿಯಲ್ಲ ಎಂದು ಸಿಎಂ ತಿಳಿಸಿದರು.

ಟೆಂಡರ್ ಪ್ರಕ್ರಿಯೆ ಸಮರ್ಥನೆ :ಕಾಂಗ್ರೆಸ್ ಐದು ವರ್ಷ ಆಡಳಿತ ಮಾಡಿದ್ದು ಅವರು ಕೂಡ ಟೆಂಡರ್ ಕರೆದಿದ್ದಾರೆ. ಆದರೆ ನಾವು ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಿ ಟೆಂಡರ್ ಕರೆಯುತ್ತಿದ್ದೇವೆ ಅಲ್ಲಿ ಟೆಂಡರ್ ಅರ್ಜಿಗಳ ಪರಿಶೀಲನೆಯಾಗಲಿದೆ. ನಂತರ ಟೆಂಡರ್ ಷರತ್ತುಗಳು ಸೇರಿದಂತೆ ಎಲ್ಲವೂ ಅಲ್ಲಿ ಪರಿಶೀಲನೆ ಆಗಲಿದೆ. ಎಲ್ಲವೂ ಪಾರದರ್ಶಕವಾಗಿ ನಡೆದು ಅಕ್ರಮದ ಮಾಹಿತಿ ಇದ್ದರೆ ಯಾರು ಬೇಕಾದರೂ ದೂರು ಕೊಡಬಹುದು. ಈಗಾಗಲೇ ಟೆಂಡರ್​ನಲ್ಲಿ ಎಲ್ಲಿ ಹೆಚ್ಚು ನಮೂವುದಾಗಿದೆಯೋ ಅದನ್ನು ವಾಪಸ್ ಕಳಿಸಿದ್ದೇವೆ. ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿದೆ ಎಂದು ಟೆಂಡರ್ ಪ್ರಕ್ರಿಯೆಯನ್ನು ಸಿಎಂ ಬೊಮ್ಮಾಯಿ ಸಮರ್ಥಿಸಿಕೊಂಡರು.

ಪರಿಶೀಲನಾ ಸಮಿತಿ ರಚಿಸಿದ್ದೇವೆ :ಕೆಪಿಸಿಸಿ ಅಧ್ಯಕ್ಷಡಿ.ಕೆ ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದಾಗ ಟೆಂಡರ್ ಸ್ಕ್ರೂಟನಿಂಗ್ ಕಮಿಟಿಯನ್ನು ತೆಗೆದು ಹಾಕಿದ್ದರು. ಯಾಕೆ ತೆಗೆದುಹಾಕಿದರು? ಎಂದು ಸಿಎಂ ಪ್ರಶ್ನಿಸಿದರು. ಎರಡು ಹಂತದ ಪರಿಶೀಲನೆ ಇರುತ್ತದೆ. ಅದನ್ನು ತೆಗೆದು ಹಾಕಿ ಇವರು ಭ್ರಷ್ಟಾಚಾರಕ್ಕೆ ರಹದಾರಿ ಮಾಡಿಕೊಂಡಿದ್ದರು. ಆದರೆ ನಾವು ಅದನ್ನು ತಡೆದಿದ್ದೇವೆ, ಗುತ್ತಿಗೆಗೆ ಪರಿಶೀಲನಾ ಸಮಿತಿ ರಚಿಸಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ :ಬೆಂಗಳೂರಿನಲ್ಲಿ ಅಮೆರಿಕ ವೀಸಾ ಕಚೇರಿ ತೆರೆಯುವ ಅಗತ್ಯವಿದೆ: ಸಿಎಂ ಬೊಮ್ಮಾಯಿ

ABOUT THE AUTHOR

...view details