ಕರ್ನಾಟಕ

karnataka

ETV Bharat / state

ಸಂಸದ ಪ್ರತಾಪ್ ಸಿಂಹ ವಿರುದ್ಧ ತನಿಖೆಯಾಗಲಿ: ಸಚಿವ ಮಹದೇವಪ್ಪ - ಸಂಸದ ಪ್ರತಾಪ್ ಸಿಂಹ

ಲೋಕಸಭೆ ಭದ್ರತಾ ವೈಫಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ತನಿಖೆಯಾಗಬೇಕೆಂದು ಸಚಿವ ಎಚ್​ ಸಿ ಮಹದೇವಪ್ಪ ಹೇಳಿದ್ದಾರೆ.

Minister HC Mahadevappa  MP Pratap Simha  investigation  ಪ್ರತಾಪ್ ಸಿಂಹ ಅವರ ವಿರುದ್ಧ ತನಿಖೆ  ಸಚಿವ ಮಹದೇವಪ್ಪ  ಲೋಕಸಭೆ ಭದ್ರತಾ ವೈಫಲ್ಯ ಪ್ರಕರಣ  ಸಂಸದ ಪ್ರತಾಪ್ ಸಿಂಹ  ಸಂಸದ ಸ್ಥಾನದಿಂದ ಉಚ್ಛಾಟನೆಗೆ ಟಿಎಂಸಿ ಆಗ್ರಹ
ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ತನಿಖೆಯಾಗಲಿ: ಸಚಿವ ಮಹದೇವಪ್ಪ

By ETV Bharat Karnataka Team

Published : Dec 14, 2023, 10:31 AM IST

ಮೈಸೂರು:2024 ರಲ್ಲಿ ನಡೆಯಲಿರುವಲೋಕಸಭಾ ಚುನಾವಣೆ ಅವಧಿ ಸಮೀಪಿಸುತ್ತಿದೆ. ಈ ವೇಳೆ ಭಾರಿ ಭದ್ರತಾ ವೈಫಲ್ಯ ಕಾಣಿಸಿಕೊಂಡಿದೆ. ಇದರಿಂದ ಲೋಕಸಭೆಯೊಳಗೆ ಆತಂಕ ಸೃಷ್ಟಿ ಆಗಿದ್ದು, ನಮ್ಮ ಮೈಸೂರಿನ ಸಂಸದರೇ ಆಗಂತುಕ ಆರೋಪಿಗೆ ಪಾಸ್ ನೀಡಿರುವುದು ಸ್ಪಷ್ಟವಾಗಿದೆ.

ಒಂದು ವೇಳೆ ಅಲ್ಲಿ ಏನಾದರೂ ದೊಡ್ಡ ಅನಾಹುತ ಘಟಿಸಿದ್ದರೆ ಅದಕ್ಕೆ ಯಾರು ಜವಾಬ್ದಾರಿ?. ಭದ್ರತಾ ದೃಷ್ಟಿಯಿಂದ ಸಂಸದ ಪ್ರತಾಪ್ ಅವರನ್ನು ತನಿಖೆಗೆ ಒಳಪಡಿಸಬೇಕು ಮತ್ತು ಇದರ ಹಿಂದಿನ ನೈಜ ಕಾರಣಗಳನ್ನು ಪತ್ತೆ ಹಚ್ಚಬೇಕೆಂದು ಈ ಮೂಲಕ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ಸಚಿವ ಡಾ. ಎಚ್‌ ಸಿ ಮಹದೇವಪ್ಪ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಸಂಸದ ಸ್ಥಾನದಿಂದ ಉಚ್ಛಾಟನೆಗೆ ಟಿಎಂಸಿ ಆಗ್ರಹ:ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಬುಧವಾರ ಸದನಕ್ಕೆ ಹಾರಿದ್ದ ಆರೋಪಿಗೆ ಪಾಸ್​ ನೀಡಿದ ಆರೋಪದ ಮೇಲೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ಲೋಕಸಭೆಯಿಂದ ಉಚ್ಛಾಟನೆ ಮಾಡುವಂತೆ ಟಿಎಂಸಿ ಒತ್ತಾಯಿಸಿದೆ. ಅಲ್ಲದೇ, ಹಲವು ಪ್ರಶ್ನೆಗಳನ್ನೂ ಟಿಎಂಸಿ ಎತ್ತಿದೆ. ತಮ್ಮ ಲಾಗಿನ್ ಸೌಲಭ್ಯಗಳನ್ನು ಹಂಚಿಕೊಳ್ಳುವ ಮೂಲಕ ರಾಷ್ಟ್ರೀಯ ಭದ್ರತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ನಮ್ಮ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಅನ್ಯಾಯವಾಗಿ ಹೊರಹಾಕಲಾಗಿದೆ. ಬುಧವಾರ ಕರ್ನಾಟಕದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಸಂಸತ್ತಿಗೆ ಒಳನುಗ್ಗುವವರಿಗೆ ವಿಸಿಟರ್ ಪಾಸ್ ನೀಡುವ ಮೂಲಕ ಇಡೀ ಸಂಸತ್ತಿನ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದೆ.

ಪ್ರತಾಪ್ ಸಿಂಹ ಅವರನ್ನು ಲೋಕಸಭೆಯಿಂದ ಹೊರಹಾಕುವುದನ್ನು ತಡೆಯುತ್ತಿರುವುದು ಯಾವುದು?, ಸಂಸದೆ ಮಹುವಾ ಮೊಯಿತ್ರಾ ಅದೇ ರೀತಿಯ ಚಿಕಿತ್ಸೆಯನ್ನು ಅವರಿಗೆ ಏಕೆ ನೀಡಬಾರದು?, ಸಹಪಾಠಿ ಸಂಸದರ ಸುರಕ್ಷತೆಯನ್ನು ಅಪಾಯಕ್ಕೆ ಒಳಪಡಿಸಿದ ನಂತರ ಸಂಸದರಾಗಿ ಮುಂದುವರಿಯಲು ಅವರಿಗೆ ಯಾವುದು ಹಕ್ಕನ್ನು ನೀಡುತ್ತದೆ? ಎಂದು ಟಿಎಂಸಿ ಪ್ರಶ್ನೆ ಮಾಡಿದೆ.

ಇನ್ನು ಭದ್ರತಾ ವೈಫಲ್ಯಗಳು ಉಂಟಾಗಿರುವುದನ್ನು ಇತಿಹಾಸ ನಮಗೆ ತಿಳಿಸಿಕೊಡುತ್ತದೆ. 2001 ರಲ್ಲಿ ಎಲ್​ಕೆ ಅಡ್ವಾಣಿ ಅವರು ಗೃಹ ಸಚಿವರಾಗಿದ್ದಾಗ ಸಂಸತ್ ಮೇಲೆ ದಾಳಿ ನಡೆದಿತ್ತು. ಕಳೆದ ಬಾರಿಯ ಚುನಾವಣೆ ಸಂದರ್ಭದಲ್ಲಿ ಭದ್ರತಾ ವೈಫಲ್ಯದ ಪರಿಣಾಮ ಪುಲ್ವಾಮ ಗಡಿಯ ಒಳಗೆ ಬರೋಬ್ಬರಿ 300 ಕೆಜಿಯಷ್ಟು RDX ಪ್ರವೇಶ ಪಡೆದು ಆದ ಸ್ಫೋಟದಿಂದ ನಮ್ಮ ಸೈನಿಕರ ಅಮೂಲ್ಯ ಜೀವವು ಹೋಗುವಂತಾಯಿತು. ಅಚ್ಚರಿ ಎಂದರೆ ಇಲ್ಲಿಯವರೆಗೂ ಕೂಡಾ ಪುಲ್ವಾಮ ಗಡಿಯಲ್ಲಿ RDX ಹೇಗೆ ಬಂತು ಎಂಬುದರ ಬಗ್ಗೆ ಯಾವ ತನಿಖೆಯೂ ಆಗದೇ ಇರುವುದು.

ಓದಿ:ಲೋಕಸಭೆ ಕಲಾಪಕ್ಕೆ ಯುವಕರಿಬ್ಬರು ನುಗ್ಗಿದ ಪ್ರಕರಣ; ಐವರು ಆರೋಪಿಗಳ ಬಂಧನ

ABOUT THE AUTHOR

...view details