ಬೆಂಗಳೂರು:ರಾಜ್ಯ ಸರ್ಕಾರ ಸಂಪುಟ ವಿಸ್ತರಣೆ ಬೇಗ ಮಾಡಲಿ. ಹೆಚ್ಚು ದಿನ ದೂಡುವುದರಿಂದ ರಾಜ್ಯದ ಅಭಿವೃದ್ಧಿಗೆ ತೊಂದರೆ ಆಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನೂತನ ಶಾಸಕರಿಗೆ ಯಡಿಯೂರಪ್ಪ ಏನು ಹೇಳಿದ್ದಾರೋ ಗೊತ್ತಿಲ್ಲ. ಅವರು ವೈಯಕ್ತಿಕವಾಗಿ ಭರವಸೆ ನೀಡಿದ್ದರಾ..? ಪಕ್ಷದ ಪರವಾಗಿ ಭರವಸೆ ನೀಡಿದ್ದರಾ? ಅನ್ನೋದು ಗೊತ್ತಿಲ್ಲ ಎಂದರು.
'ಸಂವಿಧಾನಕ್ಕೆ ಅಪಚಾರ'
ಸಂವಿಧಾನಕ್ಕೆ ಅಪಚಾರ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡ್ತಿದೆ. ಇಡೀ ದೇಶದಲ್ಲಿ ಜನ ತಿರುಗಿ ಬಿದ್ದಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಕುಲಗೆಟ್ಟೋಗಿದೆ. ಮೋದಿ ಜನ ವಿರೋಧಿ ಕೆಲಸ ಮಾಡಿ ದೇಶ ವಿಭಜನೆ ಮಾಡುತ್ತಿದ್ದಾರೆ. ನೈಜ ಸಮಸ್ಯೆಗಳನ್ನು ಮರೆ ಮಾಚಲು ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ 'ರೈತರಿಗೆ ಸರ್ಕಾರ ಶಾಪವಾಗಿದೆ'
ರೈತರಿಗೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಹಾಗು ಕೇಂದ್ರ ಸರ್ಕಾರ ಶಾಪವಾಗಿದೆ. ಈಗಾಗಲೇ ಸಾಲ ಮನ್ನಾದ ಯೋಜನೆ ಜಾರಿಯಾಗಿದೆ. ಅದರ ಪೂರ್ಣ ಪ್ರಮಾಣದ ಅನುಷ್ಠಾನ ಮಾಡಬೇಕು. ಅದರಲ್ಲಿ ಸಹಕಾರಿ ಬ್ಯಾಂಕ್, ಖಾಸಗಿ ಬ್ಯಾಂಕ್ಗಳೂ ಇವೆ. ಇದರಲ್ಲಿ ಹೊಸದ್ಯಾವುದೂ ನನಗೆ ಅರ್ಥ ಆಗುತ್ತಿಲ್ಲ. 1 ಲಕ್ಷ ರೂ ಸಾಲ ಮನ್ನಾ ಮಾಡಬೇಕು ಅಂತ ಈ ಹಿಂದೆನೇ ನಿರ್ಧಾರವಾಗಿತ್ತು. ಕೇಂದ್ರ, ರಾಜ್ಯ ಸರ್ಕಾರದವರು ಯಾವ ರೈತರ ಸಾಲ ಮನ್ನಾ ಮಾಡಿಲ್ಲ. ಆದ್ರೆ, ಅವರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಹಾಗಾದ್ರೆ, ಇವರು ಎಲ್ಲಿ ರೈತರ ಪರ ಇದ್ದಾರೆ? ರೈತರ ಒಡವೆ, ಚಿನ್ನಗಳನ್ನು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿಟ್ಟು ಸಾಲ ತೆಗೆದುಕೊಳ್ಳುತ್ತಿದ್ರು. ಈಗ ಕೇಂದ್ರ ಸರ್ಕಾರ ಅದನ್ನು ತೆಗೆದುಹಾಕಿದೆ ಎಂದರು.
ರೈತರಿಗೆ ಕೇವಲ ಶೇ.4 ರಷ್ಟು ಬಡ್ಡಿ ದರದಲ್ಲಿ ಸಾಲ ಸಿಗುತ್ತಿತ್ತು. ಈಗ ಅದು ಶೇ. 9-1 ರಷ್ಟು ಆಗಿದೆ. ಎಷ್ಟೋ ರೈತರಿಗೆ ಇಟ್ಟ ಒಡವೆ, ಆಸ್ತಿ ಪತ್ರಗಳನ್ನು ವಾಪಾಸ್ ತೆಗೆದುಕೊಳ್ಳುವುದಕ್ಕೆ ಆಗುತ್ತಿಲ್ಲ. ರೈತ ವಿರೋಧಿ ಕಾನೂನುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಲೆರಡೂ ಮಾಡಿದೆ ಎಂದು ದೂರಿದ್ದಾರೆ.