ಬೆಂಗಳೂರು:ಯಾದಗಿರಿ ರೈತರ ಅಕೌಂಟ್ನಿಂದ ಸಾಲಮನ್ನಾ ಹಣ ವಾಪಸ್ ಹೋಗಿರುವ ವಿಚಾರವಾಗಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ, ರೈತರಿಗೆ ಸಂಕಷ್ಟ, ಬರಗಾಲ ಇದೆ. ಈ ಸಂದರ್ಭದಲ್ಲಿ ಸಾಲಮನ್ನಾ ಹಣ ವಾಪಸ್ ಹೋಗಿರೋದಕ್ಕೆ ರಾಜ್ಯ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ. ರಾಷ್ಟ್ರೀಯ ಬ್ಯಾಂಕ್ಗಳ ಮೇಲೆ ಗೂಬೆ ಕೂರಿಸೋದು ಸರಿಯಲ್ಲ. ಇದರ ಬದಲು ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ ಎಂದರು.
ಸಾಲಮನ್ನಾ ಹಣ ರೈತರ ಅಕೌಂಟ್ನಿಂದ ವಾಪಸ್... ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ - undefined
ರೈತರ ಸಾಲಮನ್ನಾ ಹಣ ವಾಪಸ್ ಹೋಗಿರುವುದಕ್ಕೆ ರಾಜ್ಯ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ. ರಾಷ್ಟ್ರೀಯ ಬ್ಯಾಂಕ್ಗಳ ಮೇಲೆ ಗೂಬೆ ಕೂರಿಸೋದು ಸರಿಯಲ್ಲ. ಇದರ ಬದಲು ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬಿ ವೈ ವಿಜಯೇಂದ್ರ
ವಾಪಸ್ ಪಡೆದ ಹಣವನ್ನು ರೈತರ ಅಕೌಂಟ್ಗಳಿಗೆ ಹಾಕಲಿ. ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ಬಿಜೆಪಿ ನಾಯಕರ ಮೇಲೆ ಗೂಬೆ ಕೂರಿಸೋದು ಸರಿಯಲ್ಲ. ಇದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಇದು ರಾಷ್ಟ್ರೀಕೃತ ಬ್ಯಾಂಕುಗಳ ಸಮಸ್ಯೆಯೋ ಅಥವಾ ಸರ್ಕಾರದ ಸಮಸ್ಯೆಯೋ ಒಟ್ಟಾರೆಯಾಗಿ ಸಮಸ್ಯೆ ಬಗೆಹರಿಸಿ.
ರಾಜ್ಯದ ರೈತರಿಗೆ ಅನ್ಯಾಯ ಆಗಿದೆ. ಬೇರೆಯವರ ಮೇಲೆ ಗೂಬೆ ಕೂರಿಸುವ ಬದಲು ತಕ್ಷಣವೇ ಸಮಸ್ಯೆ ಬಗೆಹರಿಸಲಿ ಎಂದು ವಿಜಯೇಂದ್ರ ಒತ್ತಾಯಿಸಿದರು.