ಕರ್ನಾಟಕ

karnataka

ETV Bharat / state

ರೆನಾಸನ್ಸ್​ ಹೋಟೆಲ್ ವಿರುದ್ಧ ಕಾನೂನು ಹೋರಾಟ: ಡಿ ಕೆ ಶಿವಕುಮಾರ್

ನನ್ನ ಪಕ್ಷದ ಸ್ನೇಹಿತರನ್ನು ಭೇಟಿ ಆಗದಂತೆ ತಡೆದ ಅಲ್ಲಿನ ಪೊಲೀಸರು ಬುಕ್​ ಮಾಡಿಕೊಂಡಿದ್ದ ರೂಮಿಗೂ ಹೋಗದಂತೆ ಮಾಡಿದರು. ಒಂದು ಗಂಟೆ ಬಳಿಕ ಹೋಟೆಲ್​ನವರು ಲೆಟರ್ ಕೊಟ್ರು, ತುರ್ತು ಪರಿಸ್ಥಿತಿ ಇದೆ, ರೂಂ ಬುಕಿಂಗ್ ಕ್ಯಾನ್ಸಲ್ ಆಗಿದೆ ಎಂದು ಹೇಳಿರುವುದು ಯಾವ ರೀತಿ ನಡೆ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

ಸಚಿವ ಡಿ ಕೆ ಶಿವಕುಮಾರ್

By

Published : Jul 11, 2019, 12:54 PM IST

ಬೆಂಗಳೂರು:ನಾನು ಮುಂಚಿತವಾಗಿಯೇ ಮುಂಬೈಯಲ್ಲಿ ಹೋಟೆಲ್​ ಬುಕ್​ ಮಾಡಿದ್ದೆ. ರಾಜಕೀಯ ಕಾರಣಕ್ಕಾಗಿ ನನ್ನ ಬುಕಿಂಗ್ ಕ್ಯಾನ್ಸಲ್ ಮಾಡಿ ವ್ಯವಹಾರಿಕ ನಿಯಮ ಉಲ್ಲಂಘಿಸಿದ್ದಾರೆ. ಇದಕ್ಕೆ ಕಾನೂನು ತಜ್ಞರನ್ನು ಸಂಪರ್ಕಿಸಿ ಹೋಟೆಲ್ ವಿರುದ್ಧ ಹೋರಾಟ ಮಾಡ್ತೇನೆ ಎಂದು ಸಚಿವ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಕೆಕೆ ಗೆಸ್ಟ್​​ಹೌಸ್​​ನಲ್ಲಿ ನಡೆದ ಸಭೆ ನಂತರ ಮಾತನಾಡಿದ ಅವರು, ಬುಧವಾರ ಮಧ್ಯರಾತ್ರಿ ಬೆಂಗಳೂರಿಗೆ ಬಂದೆ. ಮುಂಬೈಯಿಂದ ನನ್ನನ್ನು ಬಲವಂತವಾಗಿ ಹೊರಹಾಕಿದ್ರು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ನಡೆದುಕೊಳ್ಳುವ ರೀತಿಯಲ್ಲ ಎಂದು ನಿನ್ನೆಯ ಬೆಳವಣಿಗೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಸಚಿವ ಡಿ ಕೆ ಶಿವಕುಮಾರ್

ನಾನು ಅಫೀಷಿಯಲ್ ಆಗಿ ಪ್ರವಾಸಕ್ಕೆ ಹೋಗಿದ್ದೆ. ಅಲ್ಲಿನ ಸರ್ಕಾರಕ್ಕೂ ಈ ಬಗ್ಗೆ ತಿಳಿಸಿದ್ದೆ ಎಂದ ಶಿವಕುಮಾರ್​, ನನ್ನ ಪಕ್ಷದ ಸ್ನೇಹಿತರನ್ನು ಭೇಟಿ ಆಗದಂತೆ ತಡೆದ ಅಲ್ಲಿನ ಪೊಲೀಸರು ಬುಕ್​ ಮಾಡಿಕೊಂಡಿದ್ದ ರೂಮಿಗೂ ಹೋಗದಂತೆ ತಡೆದರು. ಒಂದು ಗಂಟೆ ಬಳಿಕ ಹೋಟೆಲ್ ನವರು ಲೆಟರ್ ಕೊಟ್ರು, ತುರ್ತು ಪರಿಸ್ಥಿತಿ ಇದೆ, ರೂಂ ಬುಕಿಂಗ್ ಕ್ಯಾನ್ಸಲ್ ಆಗಿದೆ ಅಂತ ತಿಳಿಸಿದರು. ಹಾಗಾದ್ರೆ ಇದು ಯಾವ ರೀತಿ ನಡೆ ಎಂದು ಟ್ರಬಲ್​ ಶೂಟರ್​ ಪ್ರಶ್ನಿಸಿದ್ದಾರೆ.

ABOUT THE AUTHOR

...view details