ಬೆಂಗಳೂರು: ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳ ಕಲಾಪಗಳ ಮಾಹಿತಿ ಒದಗಿಸಲು 'ಕರ್ನಾಟಕ ಹೈಕೋರ್ಟ್ ವರ್ಚುಯಲ್ ಕೇಸ್ ಇನ್ಫಾರ್ಮೇಷನ್ ಸರ್ವೀಸಸ್' ಹೆಸರಿನ ಟೆಲಿಗ್ರಾಮ್ ಚಾನೆಲ್ (HCKChatBot) ಪ್ರಾರಂಭಿಸಿದೆ.
ಇ-ಕೋರ್ಟ್ ವಿಚಾರಣೆಯ ನೈಜ ಸಮಯ, ಪ್ರಕರಣಗಳ ಪಟ್ಟಿ, ವಿಚಾರಣೆಯ ಸ್ಥಿತಿ ಹಾಗೂ ದೈನಂದಿನ ಆದೇಶಗಳು ಈ ಚಾನೆಲ್ ನಲ್ಲಿ ಲಭ್ಯವಾಗಲಿವೆ. ಹೈಕೋರ್ಟ್‌ನ ಈ ಚಾನೆಲ್‌ನಲ್ಲಿ ಈಗಾಗಲೇ 6500 ಸದಸ್ಯರಿದ್ದರೆ, ಜಿಲ್ಲಾ ನ್ಯಾಯಾಲಯಗಳ ಚಾನೆಲ್ ಗಳಲ್ಲಿ 5 ಸಾವಿರಕ್ಕೂ ಅಧಿಕ ಚಂದಾದಾರರಿದ್ದಾರೆ.