ಬೆಂಗಳೂರು:ಬೆಂಗಳೂರು ಸೈಬರ್ ಪೊಲೀಸ್ ಠಾಣೆಗೆ ದಿನಕ್ಕೆ ನೂರಾರು ದೂರುಗಳು ದಾಖಲಾಗುತ್ತಿವೆ. ಆದರೆ ಇವುಗಳ ಇತ್ಯರ್ಥಕ್ಕೆ ಬೇಕಾದ ಸಿಬ್ಬಂದಿ ಸೈಬರ್ ಪೊಲೀಸ್ ಠಾಣೆಯಲ್ಲಿಲ್ಲ. ಹೀಗಾಗಿ ನೂತನ ಕಮಿಷನರ್ ಭಾಸ್ಕರ್ ರಾವ್ ಪೊಲೀಸ್ ಇಲಾಖೆಯ ಸಿಬ್ಬಂದಿ ಸಮಸ್ಯೆಯನ್ನ ನಿವಾರಿಸಲು ಮುಂದಾಗಿದ್ದಾರೆ.
ಸೈಬರ್ ಠಾಣೆಯಲ್ಲಿ ಸಿಬ್ಬಂದಿ ಕೊರತೆ... ಸಮಸ್ಯೆ ನಿವಾರಣೆಗೆ ಮುಂದಾದ ನೂತನ ಕಮಿಷನರ್ - New Commissioner Bhaskar Rao
ಬೆಂಗಳೂರು ಸೈಬರ್ ಪೊಲೀಸ್ ಠಾಣೆಗೆ ದಿನಕ್ಕೆ ನೂರಾರು ದೂರುಗಳು ದಾಖಲಾಗುತ್ತಿವೆ. ಆದರೆ ಇವುಗಳ ಇತ್ಯರ್ಥಕ್ಕೆ ಬೇಕಾದ ಸಿಬ್ಬಂದಿಯೇ ಸೈಬರ್ ಪೊಲೀಸ್ ಠಾಣೆಯಲ್ಲಿಲ್ಲ. ಹೀಗಾಗಿ ನೂತನ ಕಮಿಷನರ್ ಭಾಸ್ಕರ್ ರಾವ್ ಪೊಲೀಸ್ ಇಲಾಖೆಯ ಸಿಬ್ಬಂದಿ ಸಮಸ್ಯೆಯನ್ನ ನಿವಾರಿಸಲು ಮುಂದಾಗಿದ್ದಾರೆ.
ಸೈಬರ್ ಅಪರಾಧಗಳ ತನಿಖೆಗೆಂದೇ ನಗರದ ಇನ್ಫ್ರೆಂಟಿ ರಸ್ತೆಯಲ್ಲಿರುವ ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲಿ 2015 ರ ಅಕ್ಟೋಬರ್ನಲ್ಲಿ ಪ್ರತ್ಯೇಕ ಠಾಣೆಯನ್ನ ತೆರೆಯಲಾಗಿತ್ತು. ಇಲ್ಲಿ ಸದ್ಯ ಇನ್ಸ್ಪೆಕ್ಟರ್, ಸಬ್ಇನ್ಸ್ಪೆಕ್ಟರ್, 10 ಮಹಿಳಾ ಸಿಬ್ಬಂದಿ ಸೇರಿ 36 ಸಿಬ್ಬಂದಿ ಇದ್ದಾರೆ. ಆದರೆ ಠಾಣೆಯಲ್ಲಿ ಪ್ರತಿದಿನ 40 ರಿಂದ 70 ದೂರು ದಾಖಲಾಗ್ತಿದೆ. ಈ ಠಾಣೆಗೆ ಒಂದೇ ವಾಹನವಿದ್ದು, ಪ್ರಕರಣದ ತನಿಖೆಗೆ ಹೋಗಬೇಕಾದರೆ ಖಾಸಗಿ ವಾಹನ ಅವಲಂಬಿಸಬೇಕು. ಹೀಗಾಗಿ ನೂತನ ಕಮಿಷನರ್ ಭಾಸ್ಕರ್ ರಾವ್ ಪೊಲೀಸ್ ಇಲಾಖೆಯ ಸಿಬ್ಬಂದಿ ಸಮಸ್ಯೆಯನ್ನ ನಿವಾರಿಸಲು ಮುಂದಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್, ಸೈಬರ್ ಕ್ರೈಂ ಪ್ರಕರಣ ದಿನೇ ದಿನೇ ಹೆಚ್ಚಾಗ್ತಿದೆ. ಹೀಗಾಗಿ ಸಿಬ್ಬಂದಿ ನೇಮಕ ಕುರಿತು ನಗರ ಪೊಲೀಸ್ ಆಯುಕ್ತರು ಕೂಡ ಗಮನ ಹರಿಸಿದ್ದು, ಸದ್ಯದಲ್ಲೇ ಈ ಸಮಸ್ಯೆ ನಿವಾರಣೆ ಮಾಡಲಾಗುವುದು ಎಂದರು.