ಕರ್ನಾಟಕ

karnataka

ETV Bharat / state

ಕುಂಬಳಕಾಯಿ ಒಡೆದು ಬಸ್ ಸಂಚಾರ ಆರಂಭಿಸಿದ ಕೆಎಸ್​ಆರ್​ಟಿಸಿ - ಕೆಎಸ್​ಆರ್​ಟಿಸಿ ಲೇಟೆಸ್ಟ್ ನ್ಯೂಸ್​

ಕಳೆದ ಮೂರು ತಿಂಗಳಿಂದ ಯಾವುದೇ ಓಡಾಟವಿಲ್ಲದೆ ಬಿಕೋ ಎನ್ನುತ್ತಿದ್ದ ಮೆಜೆಸ್ಟಿಕ್​ ಬಸ್​ ನಿಲ್ದಾಣದಿಂದ ಇಂದು ಸಾವಿರಾರು ಬಸ್​​ಗಳು ಪ್ರಯಾಣ ಬೆಳೆಸಿವೆ.

KSRTC Started a service with a pooja in bus stop
ಕುಂಬಳಕಾಯಿ ಒಡೆದು ಬಸ್ ಸಂಚಾರ ಆರಂಭಿಸಿದ ಕೆಎಸ್​ಆರ್​ಟಿಸಿ

By

Published : May 19, 2020, 10:39 AM IST

Updated : May 19, 2020, 10:48 AM IST

ಬೆಂಗಳೂರು:ಕೊರೊನಾ, ಲಾಕ್​ಡೌನ್​​ನಿಂದಾಗಿ ಡಿಪೋ ಸೇರಿದ್ದ ಸಾವಿರಾರು ಕೆಎಸ್​​ಆರ್‌ಟಿಸಿ ಬಸ್​​ಗಳು ಇಂದು ರಸ್ತೆಗಿಳಿದಿದ್ದು, ಆರಂಭಕ್ಕೂ ಮೊದಲು ಬಸ್​ ನಿಲ್ದಾಣದಲ್ಲಿ ಚಾಲಕರು, ನಿರ್ವಾಹಕರು ಪೂಜೆ ಸಲ್ಲಿಸಿದರು.

ಬಸ್ ಸಂಚಾರ ಆರಂಭಿಸಿದ ಕೆಎಸ್​ಆರ್​ಟಿಸಿ

ಕಳೆದ ಮೂರು ತಿಂಗಳಿಂದ ಯಾವುದೇ ಓಡಾಟವಿಲ್ಲದೆ ಬಿಕೋ ಎನ್ನುತ್ತಿದ್ದ ಮೆಜಸ್ಟಿಕ್​ ಬಸ್​ ನಿಲ್ದಾಣದಲ್ಲಿ ಇಂದು ಸಾವಿರಾರು ಬಸ್​​ಗಳು ಪ್ರಯಾಣಕ್ಕೆ ಸಜ್ಜಾಗಿದ್ದು, ಇದಕ್ಕೂ ಮೊದಲು ಚಾಲಕರು, ನಿರ್ವಾಹಕರು ಅರ್ಚಕರನ್ನು ಕರೆಸಿ ಪೂಜೆ ಮಾಡಿಸಿದರು. ಬಳಿಕ ಕುಂಬಳಕಾಯಿ ಒಡೆದು ಬಸ್​​ಗಳನ್ನು ಚಾಲನೆ ಮಾಡಿದರು. ತಮ್ಮ ತಮ್ಮ ಊರುಗಳಿಗೆ ತೆರಳಲು ಕಾಯುತ್ತಿದ್ದ ಸಾವಿರಾರು ಜನರು ಖುಷಿಯಿಂದ ಪ್ರಯಾಣ ಬೆಳೆಸಿದರು.

ಪ್ರಯಾಣಿಕರಲ್ಲಿ ಮುಂಗಡ ಟಿಕೆಟ್​ ಕಾಯ್ದಿರಿಸುವ ( online ticketing ) ಮೂಲಕ ಪ್ರಯಾಣಿಸಲು ಕೆಎಸ್​ಆರ್​​ಟಿ‌ಸಿ ಕೋರಿದ್ದು, ಇದರಿಂದ ಬಸ್ ನಿಲ್ದಾಣದಲ್ಲಿ ಜನ ಸಂದಣಿ‌ ಮತ್ತು ಸರತಿ ಸಾಲುಗಳಲ್ಲಿ ಕಾಯುವುದನ್ನು ತಪ್ಪಿಸಲು ಮನವಿ ಮಾಡಿಕೊಂಡಿದೆ.

ಬಸ್​​ಗಳಲ್ಲಿ ಶೇ. 50% ಆಸನಗಳ ಪ್ರಮಾಣದಲ್ಲಿ‌ ಕಾರ್ಯ ನಿರ್ವಹಣೆ ಮಾಡುತ್ತಿರುವುದರಿಂದ ಅತ್ಯಧಿಕ ಬಸ್​​ಗಳ‌ ಕಾರ್ಯಾಚರಣೆ ಅವಶ್ಯಕವಿದ್ದು, ಈ ಸಂಬಂಧ ಪ್ರಯಾಣಿಕರು ಮುಂಗಡ ಟಿಕೆಟ್​​ ಕಾಯ್ದಿರಿಸಿದ್ದಲ್ಲಿ ಅವರ ಪ್ರಯಾಣವು ಸುಗಮವಾಗಿರಲಿದೆ. ಹಾಗಾಗಿ ಜನರು ಮುಂಗಡ ಟಿಕೆಟ್​‌ ಬುಕ್ ಮಾಡಲು www.ksrtc.in ಸಂಪರ್ಕಿಸಬಹುದಾಗಿದೆ.

Last Updated : May 19, 2020, 10:48 AM IST

ABOUT THE AUTHOR

...view details