ಕರ್ನಾಟಕ

karnataka

ETV Bharat / state

ಮುಂದಿನ ಮಾರ್ಚ್​ ವೇಳೆಗೆ 5,500 ಹೊಸ ಬಸ್​ ಖರೀದಿ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೇಲ್ದರ್ಜೆಗೇರಿಸಿದ ಮುದ್ರಣಾಲಯ, ಕ್ರೀಡಾ ಸಂಕೀರ್ಣವನ್ನು ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು.

Minister Ramalinga Reddy
ಕ್ರೀಡಾ ಸಂಕೀರ್ಣ ಉದ್ಘಾಟಿಸಿ ಸಚಿವ ರಾಮಲಿಂಗಾರೆಡ್ಡಿ ಟೇಬಲ್ ಟೆನ್ನಿಸ್ ಆಟ ಆಡಿದರು.

By ETV Bharat Karnataka Team

Published : Dec 20, 2023, 8:22 PM IST

ಬೆಂಗಳೂರು:ಶಾಂತಿನಗರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೇಲ್ದರ್ಜೆಗೇರಿಸಿದ ಮುದ್ರಣಾಲಯ, ಕ್ರೀಡಾ ಸಂಕೀರ್ಣವನ್ನು ಸಾರಿಗೆ ಮಾತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಉದ್ಗಾಟಿಸಿದರು. ಇದೇ ಸಂದರ್ಭದಲ್ಲಿ ನೂತನ 15 ಬೊಲೆರೋ ಜೀಪುಗಳಿಗೂ ಅವರು ಚಾಲನೆ ನೀಡಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ವಿಭಾಗೀಯ ನಿಯಂತ್ರಕರಿಗೆ ಬಹಳ ಹಳೆಯ ವಾಹನಗಳಿದ್ದವು. ಈಗ ಹೊಸ ವಾಹನ ಕೊಡಲಾಗುತ್ತಿದೆ. ಡಿಪೋ ಮ್ಯಾನೇಜರ್​ಗೆ ಹೊಸ ವಾಹನ ಕೊಟ್ಟ ನಂತರ ಅವರ ಮಟ್ಟದಲ್ಲಿ ಆಡಳಿತದಲ್ಲಿ ಚುರುಕುಗೊಂಡಿದೆ. ಹಾಗಾಗಿ ಈಗಿನ ಹೊಸ ವಾಹನದಿಂದ ಆಡಳಿತ ಮತ್ತಷ್ಟು ಚುರುಕಾಗಲಿದೆ ಎಂದರು.

500 ಇವಿ ಬಸ್ ಖರೀದಿಗೆ ಟೆಂಡರ್:ಜನವರಿಯಲ್ಲಿ ಡ್ರೈವರ್ ಕಂ ಕಂಡಕ್ಟರ್ ನೇಮಕಾತಿ ಆಗಲಿದೆ. ಕೆಎಸ್ಆರ್ಟಿಸಿಯಿಂದ ಸದ್ಯದಲ್ಲೇ 500 ಇವಿ ಬಸ್ ಖರೀದಿಗೆ ಟೆಂಡರ್ ಕರೆಯಲಾಗುತ್ತದೆ. ಎಲ್ಲಾ ನಿಗಮಗಳು ಸೇರಿದಂತೆ 5500 ಬಸ್ ಮಾರ್ಚ್‌ನೊಳಗೆ ಬರಲಿವೆ.

1952ರಲ್ಲಿ ಆರಂಭವಾಗಿದ್ದ ಕೆಎಸ್ಆರ್ಟಿಸಿ ಪ್ರೆಸ್‌ನಲ್ಲಿ ಈಗಲೂ 52 ಜನ ಕೆಲಸ ಮಾಡುತ್ತಿದ್ದಾರೆ, ನಾಲ್ಕು ನಿಗಮಕ್ಕೂ ವಿವಿಧ ಬಗೆಯ ಪರಿಕರ ಮುದ್ರಿಸಿ ಕೊಡಲಾಗುತ್ತಿದೆ, 76 ಬಗೆಯ ದಾಖಲಾತಿಗಳ ಮುದ್ರಣ ಆಗುತ್ತಿದೆ. ವರ್ಷಕ್ಕೆ 5 ಕೋಟಿ ಲಾಭ ಬರುತ್ತಿದೆ. ಈ ಮುದ್ರಣ ಘಟಕವನ್ನು ಕೆಂಗೇರಿಗೆ ಸ್ಥಳಾಂತರ ಮಾಡಬೇಕು ಎನ್ನುವ ಪ್ರಸ್ತಾಪ ಇತ್ತು.

ಆದರೆ ನಿಗಮದ ಎಂಡಿ ಅನ್ಬುಕುಮಾರ್ ಈ ಸ್ಥಳದ ಸದುಪಯೋಗಕ್ಕಾಗಿ ಇಲ್ಲಿನ ಮುದ್ರಣ ಘಟಕವನ್ನು ನವೀಕರಿಸಲಿದ್ದಾರೆ. ಕೆಲವೊಂದು ಹಳೆಯ ಯಂತ್ರಗಳ ಬಳಕೆ ಇನ್ನೂ ನಡೆಯುತ್ತಿದೆ. ಅವುಗಳ ಬದಲಿಸಿ ಹೊಸ ಯಂತ್ರಗಳ ಅಳವಡಿಕೆಗೆ ಸೂಚಿಸಿದ್ದೇನೆ. ಹೊಸ ತಂತ್ರಜ್ಞಾನ ಮಷಿನ್ ಬಂದರೆ ಇನ್ನಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.

ಸಾರಿಗೆ ನಿಗಮದ ಸಿಬ್ಬಂದಿ ಕ್ರೀಡಾ ಸಂಕೀರ್ಣ ನವೀಕರಿಸಲಾಗಿದೆ. ನಮ್ಮ ನಿಗಮದಲ್ಲಿ ಟೇಬಲ್ ಟೆನ್ನಿಸ್, ಶೆಟಲ್, ಕೇರಂ, ಚೆಸ್ ಆಡುವ ಸಿಬ್ಬಂದಿ ಸಾಕಷ್ಟು ಇದ್ದಾರೆ. ಅವರ ಅನುಕೂಲಕ್ಕೆ ಕ್ರೀಡಾ ಸಂಕೀರ್ಣ ಮೇಲ್ದರ್ಜೆಗೇರಿಸಲಾಗಿದೆ, ಕೆಎಸ್ಆರ್ಟಿಸಿ, ಬಿಎಂಟಿಸಿ ಎರಡೂ ನಿಗಮದ ಸಿಬ್ಬಂದಿ ಬಿಡುವಿನ ಸಮಯದಲ್ಲಿ ಬಂದು ಇಲ್ಲಿ ಆಟವಾಡಬಹುದು. ಪ್ರೆಸ್ 29 ಲಕ್ಷ ರೂ ವೆಚ್ಚದಲ್ಲಿ ಮುದ್ರಣಾಲಯ ಹಾಗೂ 59 ಲಕ್ಷ ವೆಚ್ಚದಲ್ಲಿ ಕ್ರೀಡಾ ಸಂಕೀರ್ಣ ನವೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮೊದಲು ಶಾಂತಿ ನಗರದಲ್ಲಿ ಮಳೆ ಬಂದಾಗ ಮುದ್ರಣಾಲಯದ ಜಾಗದಲ್ಲಿ ನೀರು ಬರುತ್ತಿತ್ತು. ಈಗ ನಾವೇ ಜಾಗ ಕೊಟ್ಟು ರಾಜಕಾಲುವೆಗೆ ಅವಕಾಶ ಕೊಟ್ಟಿದ್ದೇವೆ. ಹಾಗಾಗಿ ಎರಡು ವರ್ಷದಿಂದ ನೀರು ನುಗ್ಗಿಲ್ಲ ಆದರೂ ಓವರ್ ಫ್ಲೋ ಆದರೆ ಈಗಲೂ ನೀರು ನುಗ್ಗಲಿದೆ. ಇದು ಕೆಳಹಂತದ ಪ್ರದೇಶ ಹಾಗಾಗಿ ನೀರು ನುಗ್ಗಲಿದೆ, ನೀರು ನುಗ್ಗುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಕಾರ್ಗೋ ಸೇವೆ: ನಮ್ಮ ಕಾರ್ಗೋ ಸೇವೆಯನ್ನು ಡಿಸೆಂಬರ್ 23ರಂದು ಆರಂಭಿಸಲಾಗುತ್ತದೆ. ಅದರ ಜೊತೆ ಡಿಸೆಂಬರ್ 26ರಂದು ಬಿಎಂಟಿಸಿಯ 100 ಇವಿ ಬಸ್ ಗೆ ಚಾಲನೆ ನೀಡಲಾಗುತ್ತದೆ 2024 ರ ಮಾರ್ಚ್ ಒಳಗೆ ಬಿಎಂಟಿಸಿಗೆ ಬರಬೇಕಿರುವ ಎಲ್ಲ ಬಸ್ ಸೇರ್ಪಡೆ ಆಗಲಿವೆ, 1550ಕ್ಕೂ ಹೆಚ್ಚು ಇವಿ ಬಸ್ ಗಳು ಬಿಎಂಟಿಸಿಗೆ ಸೇರುವ ಮೂಲಕ ನಿಗಮದ ಶೇ.25 ರಷ್ಟು ಬಸ್ ಇವಿ ಬಸ್ ಗಳಾಗಲಿವೆ ಎಂದರು.

ನಗರ ಸಾರಿಗೆಗೆ ಮಾತ್ರ ಕೇಂದ್ರ ಒತ್ತು ನೀಡುತ್ತಿದೆ. ಗ್ರಾಮಾಂತರಕ್ಕೆ ಸಬ್ಸಿಡಿ ಕೊಟ್ಟರೆ ಇತರ ನಿಗಮಗಳೂ ಇವಿ ಖರೀದಿ ಮಾಡಲಿದ್ದಾರೆ. ಆದರೆ ನಮಗೆ ಆ ಅವಕಾಶ ಇಲ್ಲದ ಕಾರಣ ಜಿಸಿಸಿ ಮಾದರಿಯಲ್ಲಿ ಈಗ ಇವಿ ಬಸ್ ಸೇರಿಸಿಕೊಳ್ಳಲಾಗುತ್ತಿದೆ, ಜಿಸಿಸಿ ಮಾರ್ಗಸೂಚಿಯಂತೆ ನಾವು ಇವಿ ಬಸ್ ವ್ಯವಸ್ಥೆ ಮಾಡಿಕೊಳ್ಳಬೇಕು.ಇವಿ ಬಸ್ ಗೆ ಪ್ರತಿ ಕಿಲೋಮೀಟರ್ ಗೆ ನಾವು 41-51 ರೂ. ಕೊಡಲಿದ್ದೇವೆ.ಆದರೂ ನಮಗೆ ಪ್ರತಿ ಕಿಲೋ ಮಿಟರ್‌ಗೆ 10 ರೂ. ಉಳಿತಾಯವಾಗುತ್ತಿದೆ ಎಂದು ತಿಳಿಸಿದರು.

ಕ್ರೀಡಾ ಸಂಕೀರ್ಣ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ಕಾರ್ಮಿಕರ ಆರೋಗ್ಯ ನಿರ್ವಹಣೆ, ಒತ್ತಡ ನಿವಾರಣೆಗಾಗಿ ಶಾಂತಿನಗರದಲ್ಲಿ ಕ್ರೀಡಾ ಸಂಕೀರ್ಣವನ್ನು ಆರಂಭಿಸಿದೆ. ಇಲ್ಲಿ ಶೆಟಲ್, ಟೇಬಲ್ ಟೆನ್ನಿಸ್, ಕೇರಂ, ಚೆಸ್ ಇತ್ಯಾದಿ ಕ್ರೀಡೆ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ನಿಗಮವು ಈ ಕ್ರೀಡಾ ಸಂಕೀರ್ಣವನ್ನು ರೂ 69.07 ಲಕ್ಷದಲ್ಲಿ ಅಭಿವೃದ್ದಿಪಡಿಸಿ ಮೇಲ್ದರ್ಜೆಗೇರಿಸಲಾಗಿದೆ.

ಕ್ರೀಡಾ ಅಂಕಣದ 2 ಆಟದ ಅಂಕಣಗಳಿಗೆ ನೂತನವಾಗಿ ಮರದ ನೆಲಹಾಸು ಒದಗಿಸಲಾಗಿದೆ. ನೆಲಹಾಸು ಕಾಂಕ್ರೀಟು ಒದಗಿಸಿದೆ. ಕ್ರೀಡಾ ಸಂಕೀರ್ಣದ ಕಟ್ಟಡದ ಚಾವಣಿ ದುರಸ್ತಿ ಮಾಡಲಾಗಿದೆ. ಕಟ್ಟಡ ಮುಂಭಾಗದ ಅಭಿವೃದ್ಧಿ ಕೆಲಸ ಮಾಡಲಾಗಿದೆ.

ಮುದ್ರಣಾಲಯ: ಕೆಎಸ್ಆರ್ಟಿಸಿ 1952 ರಲ್ಲಿ ಮುದ್ರಣಾಲಯವನ್ನು ಟಿಕೆಟ್‌ಗಳು, ಪಾಸ್‌ಗಳು ಹಾಗೂ ಲೇಖನ ಸಾಮಗ್ರಿಗಳ ಮುದ್ರಣ ಹಾಗೂ ಸರಬರಾಜು ಕಾರ್ಯಕ್ಕಾಗಿ ಪ್ರಾರಂಭಿಸಲಾಗಿತ್ತು. ಪ್ರಸ್ತುತ ಮುದ್ರಣಾಲಯದಲ್ಲಿ ಟಿಕೆಟ್‌, ಇಟಿಎಂ ರೋಲ್‌ಗಳು ಗಣಕ ಯಂತ್ರ ಲೇಖನ ಸಾಮಗ್ರಿ, 176 ಬಗೆಯ ಮುದ್ರಣ ಸಾಮಗ್ರಿಗಳು, ವಾರ್ಷಿಕ ಆಡಳಿತ ಮತ್ತು ಲೆಕ್ಕ ಪತ್ರ ಪುಸ್ತಕಗಳು, ಲೆಟರ್‌ ಹೆಡ್‌, ವಿಸಿಟಿಂಗ್‌ ಕಾರ್ಡ್‌, ಕರ ಪತ್ರಗಳು ಇತ್ಯಾದಿ ಮುದ್ರಣ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.

ಮುದ್ರಣಾಲಯವು ಪ್ರತಿ ವರ್ಷ ರೂ 75 ಲಕ್ಷ ಮೌಲ್ಯದ ಇಟಿಎಂ ಟಿಕೆಟ್‌ ರೋಲ್‌ಗಳನ್ನು ಮುದ್ರಿಸಿ ವಿಭಾಗಗಳಿಗೆ ಸರಬರಾಜು ಮಾಡುತ್ತಿದೆ. ಮುದ್ರಣಾಲಯವು ಪ್ರತಿ ವರ್ಷ 15 ಕೋಟಿ ರೂ ವಹಿವಾಟನ್ನು ನಿರ್ವಹಿಸುತ್ತಿದೆ. ಪ್ರಸ್ತುತ ಮುದ್ರಣಾಲಯದ ಕಟ್ಟಡದಲ್ಲಿ ಹಲವು ಕಾಮಗಾರಿಗಳನ್ನು ನಿರ್ವಹಿಸಿ ರೂ.39.83 ಲಕ್ಷಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗಿದೆ.

15 ಬೊಲೆರೋ ಜೀಪು ಸೇರ್ಪಡೆ:ನಿಗಮದ ವಿಭಾಗಗಳಲ್ಲಿ ಕಾರ್ಯಚರಣೆ ಉತ್ತಮಗೊಳಿಸಲು, ಅಪಘಾತ ಪರಿಹಾರ ಸಂದರ್ಭದಲ್ಲಿ ಬಳಕೆಗಾಗಿ, ಮಾರ್ಗ ತನಿಖಾ ಕಾರ್ಯ, ಅವಘಡಗಳ ಸಂದರ್ಭದಲ್ಲಿ ತುರ್ತು ಬಳಕೆ ಹಾಗೂ ಘಟಕ/ವಿಭಾಗಗಳಲ್ಲಿ ಸುಸೂತ್ರ ಕಾರ್ಯಚರಣೆಗಾಗಿ ಇಂದು 15 ಬೊಲೆರೋ ಜೀಪುಗಳನ್ನು ಸೇರ್ಪಡೆ ಮಾಡಲಾಯಿತು. ಕೆಎಸ್‌ಆರ್‌ಟಿಸಿ ವ್ಯಾಪ್ತಿಯಲ್ಲಿ 83 ಘಟಕಗಳಿದ್ದು, ಈಗಾಗಲೇ 50 ಬೊಲೆರೋ ಜೀಪುಗಳನ್ನು ಒದಗಿಸಲಾಗಿದೆ.

ಇದನ್ನೂಓದಿ:ಬಸ್​, ಮೆಟ್ರೋ ಪ್ರಯಾಣ, ದೇಗುಲ ದರ್ಶನದ ವೇಳೆ ಕೋವಿಡ್ ಮಾರ್ಗಸೂಚಿ ಪಾಲಿಸಿ: ರಾಮಲಿಂಗಾರೆಡ್ಡಿ ಮನವಿ

ABOUT THE AUTHOR

...view details