ಕರ್ನಾಟಕ

karnataka

ETV Bharat / state

ಚಿನ್ನ ತಂದ ನೀರಜ್ ಚೋಪ್ರಾಗೆ ಲೈಫ್ ಟೈಂ ಗೋಲ್ಡನ್ ಬಸ್ ಪಾಸ್ ಘೋಷಿಸಿದ ಕೆಎಸ್ಆರ್​​​​ಟಿಸಿ - ಕೆಎಸ್ಆರ್​​​ಟಿಸಿ

ಟೋಕಿಯೊ ಒಲಿಂಪಿಕ್ಸ್​ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿರುವ ನೀರಜ್​ ಚೋಪ್ರಾ ಚಿನ್ನದ ಪದಕಕ್ಕೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಹೊಸದೊಂದು ಸಾಧನೆ ಮಾಡಿದ್ದಾರೆ. ಇದೀಗ ಸರ್ಕಾರಗಳ ಕಡೆಯಿಂದ ಭರಪೂರ ಬಹುಮಾನಗಳು ಹರಿದು ಬರುತ್ತಿವೆ. ಕೆಎಸ್ಆರ್​​​ಟಿಸಿ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ..

ಚಿನ್ನ ತಂದ ನೀರಜ್ ಚೋಪ್ರಾಗೆ ಲೈಫ್ ಟೈಂ ಗೋಲ್ಡನ್ ಬಸ್ ಘೋಷಿಸಿದ ಕೆಎಸ್ಆರ್​​​​ಟಿಸಿ
KSRTC announced to give Lifetime golden bus to Athlete Neeraj chopra

By

Published : Aug 7, 2021, 10:03 PM IST

Updated : Aug 7, 2021, 10:22 PM IST

ಬೆಂಗಳೂರು :ಟೋಕಿಯೊ ಒಲಿಂಪಿಕ್ಸ್​​​ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ನೀರಜ್ ಚೋಪ್ರಾಗೆ ಕೆಎಸ್ಆರ್​​​ಟಿಸಿ ಲೈಫ್ ಟೈಂ ಗೋಲ್ಡನ್ ಬಸ್ ಪಾಸ್ ಅನ್ನು ವಿತರಣೆ ಮಾಡಲು ನಿರ್ಧರಿಸಿದೆ.

ಚಿನ್ನದ ಹುಡುಗನ ಅತ್ಯುತ್ತಮ ಸಾಧನೆ ಸಂಭ್ರಮಿಸಿದ ಕೆಎಸ್​ಆರ್​ಟಿಸಿ 60 ವಸಂತಗಳನ್ನು ಪೂರೈಸುತ್ತಿದೆ. ಇದರ ಸವಿ ನೆನಪಿನಲ್ಲಿ ಅಥ್ಲೇಟ್​ ನೀರಜ್ ಚೋಪ್ರಾಗೆ ಗೋಲ್ಡನ್ ಬಸ್ ಪಾಸ್ ನೀಡಲು ನಿರ್ಧರಿಸಿದೆ.

ಓದಿ: ಪಾಣಿಪತ್​​ to ಟೋಕಿಯೋ.. ಚಿನ್ನದ ಪದಕ ಗೆದ್ದ ರೈತನ ಮಗನ ಸಾಧನೆಯ ಹಾದಿ ಹೀಗಿತ್ತು!

ಈ ಕುರಿತು ನಿಗಮ ಪ್ರಕಟಣೆ ಹೊರಡಿಸಿದ್ದು, ನಿಗಮದ ಯಾವುದೇ ಬಸ್ಸಿನಲ್ಲಿ ರಾಜ್ಯ ಹಾಗೂ ಅಂತಾರಾಜ್ಯಗಳಲ್ಲಿ ಜೀವಿತಾವಧಿವರೆಗೆ ಪ್ರಯಾಣಿಸಬಹುದಾಗಿದೆ. ಇದೇ ಮೊದಲ ಬಾರಿಗೆ ಕೆಎಸ್ಆರ್​​​ಟಿಸಿ ಗೋಲ್ಡನ್ ಬಸ್ ಪಾಸ್ ಅನ್ನು ವಿತರಣೆ ಮಾಡುತ್ತಿದೆ.

Last Updated : Aug 7, 2021, 10:22 PM IST

ABOUT THE AUTHOR

...view details