ಬೆಂಗಳೂರು: ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಡೆದ ಅತಿದೊಡ್ಡ ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ, ಕೇವಲ 62 ದಿನಗಳಲ್ಲಿ ಅತೀ ದೊಡ್ಡ ಭ್ರಷ್ಟಾಚಾರ ಕೇಸ್ ಬಯಲಿಗೆಳೆದು ತನಿಖೆಯಲ್ಲಿ 8 ಜನ ಭ್ರಷ್ಟರನ್ನು ಬಂಧಿಸಿದೆ. ಒಟ್ಟು ನಾಲ್ವರು ಪ್ರತಿಷ್ಠಿತ ಆಟಗಾರರು, ಒಬ್ಬ ಮಾಲೀಕ, ಒಬ್ಬ ಕೋಚ್, ಒಬ್ಬ ಡ್ರಮ್ಮರ್ ಹಾಗು ಓರ್ವ ಬುಕ್ಕಿ ಸೆರೆಯಾಗಿದ್ದು ಕೆಪಿಎಲ್ ಕರ್ಮಕಾಂಡದ ಫುಲ್ ಡಿಟೇಲ್ಸ್ ಇಲ್ಲಿದೆ.
ಮ್ಯಾಚ್ ಫಿಕ್ಸಿಂಗ್ ಭೂತ ಬೆಳಕಿಗೆ ಬಂದಿದ್ದು ಹೇಗೆ?
ಸೆಪ್ಟೆಂಬರ್-24: ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಲಿ ಅರೆಸ್ಟ್
ಕೆಪಿಎಲ್ ಪಂದ್ಯಾವಳಿಯಲ್ಲಿ ಬೆಟ್ಟಿಂಗ್, ಫಿಕ್ಸಿಂಗ್ ಗುಮಾನಿ ಮೇರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಸಿಸಿಬಿ, ಕ್ರಿಕೆಟ್ ಬುಕ್ಕಿಯೊಬ್ಬನ ಹಿಂದೆ ಬಿದ್ದು, ಸೂಕ್ತ ದಾಖಲೆ ಇಟ್ಟುಕೊಂಡು ಕೆಪಿಎಲ್ ತಂಡದ ಮಾಲೀಕರಿಗೆ ನೋಟಿಸ್ ನೀಡಿತ್ತು. ಹೀಗಾಗಿ ಮ್ಯಾಚ್ ಫಿಕ್ಸಿಂಗ್ ಸಂಬಂಧ ಮೊದಲು ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕಅಷ್ಫಕ್ ಅಲಿ ಬಂಧಿಸಿ ಬಳಿಕ 30ಕ್ಕೂ ಅಧಿಕ ಆಟಗಾರರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದ್ದಾರೆ.
ಅಕ್ಟೋಬರ್-2: ಡ್ರಮ್ಮರ್ ಭವೇಶ್ ಭಾಫ್ನಾ ಬಂಧನ
ಬೆಳಗಾವಿ ತಂಡದ ಮಾಲೀಕ ಅಷ್ಫಕ್ ಅಲಿ ನೀಡಿದ ಹೇಳಿಕೆ ಮೇರೆಗೆ ಸಿಸಿಬಿ ತನಿಖೆ ಮಾಡಿ ಬಳ್ಳಾರಿ ಟಸ್ಕರ್ಸ್ ತಂಡದ ಬೌಲರ್ ಭವೇಶ್ ಗುಳೆಚ್ಚಾ ವಿಚಾರಣೆ ನಡೆಸಲಾಗಿದೆ. ಈ ವೇಳೆ, ಬೌಲರ್ ಭವೇಶ್ ಸಿಸಿಬಿ ಎದುರು ಅಘಾತಕಾರಿ ಮಾಹಿತಿ ಬಾಯ್ಬಿಟ್ಟಿದ್ದ. ಬುಕ್ಕಿಯೊಬ್ಬ ನನಗೆ ಡ್ರಮ್ಮರ್ ಭವೇಶ್ ಭಾಫ್ನಾ ಪರಿಚಯ ಮಾಡಿಸಿದ್ದಾನೆ. ಈ ವೇಳೆ ಆತ ನನಗೆ ಓವರ್‌ವೊಂದರಲ್ಲಿ 10 ಕ್ಕೂ ಹೆಚ್ಚು ರನ್ ಮಾಡಿದರೆ ನಿನಗೆ 2 ಲಕ್ಷ ರೂ ಹೆಚ್ಚುವರಿ ಹಣ ನೀಡುವುದಾಗಿ ಬಿಗ್ ಡೀಲ್ ಮಾಡಿರುವ ವಿಚಾರ ತಿಳಿಸಿದ್ದ. ಹೀಗಾಗಿ ಪೊಲೀಸರು ಡ್ರಮ್ಮರ್ ಭವೇಶ್ ಭಾಫ್ನಾನನ್ನು ಅರೆಸ್ಟ್ ಮಾಡಿದ್ದರು.
ಅಕ್ಟೋಬರ್-25: ಬೌಲಿಂಗ್ ಕೋಚ್ & ಬೌಲರ್ ಅರೆಸ್ಟ್
ಡ್ರಮ್ಮರ್ ಭಾಫ್ನಾ ನೀಡಿದ ಮಾಹಿತಿಯಿಂದ ಫಿಕ್ಸಿಂಗ್ ಜಾಲ ವಿಸ್ತರಣೆಯಾಗಿ 2018ರ ಹುಬ್ಬಳ್ಳಿ ಟೈಗರ್ಸ್-ಬೆಂಗಳೂರು ನಡುವಿನ ಪಂದ್ಯ ಫಿಕ್ಸ್ ಆಗಿರುವ ವಿಚಾರ ತಿಳಿಯಿತು. ಹೀಗಾಗಿ ಕೋಚರ್ ವೀನು ಪ್ರಸಾದ್ ಹಾಗೂ ಬೌಲರ್ ವಿಶ್ವನಾಥನ್‌ಗೆ ಪೊಲೀಸರು ಬಲೆ ಬೀಸಿದ್ದಾರೆ.