ಕರ್ನಾಟಕ

karnataka

ETV Bharat / state

ಕೆಪಿಎಲ್​ ಮ್ಯಾಚ್ ಫಿಕ್ಸಿಂಗ್ ಪ್ರಕರಣ : ಟೀಂ ಅಡ್ವೈಸರ್ ಸಿಸಿಬಿ ವಿಚಾರಣೆಗೆ ಹಾಜರು

ಮೈಸೂರು ವಾರಿಯರ್ಸ್ ತಂಡದ ಟೀಂ ಅಡ್ವೈಸರ್, ಬೆಂಗಳೂರು ಬ್ಲಾಸ್ಟರ್ಸ್ ತಂಡದ ಟೀಂ ಅಡ್ವೈಸರ್ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡಿದ್ದಾರೆ.

ಟೀಂ ಅಡ್ವೈಸರ್ ಸಿಸಿಬಿ ವಿಚಾರಣೆಗೆ ಹಾಜರು

By

Published : Nov 20, 2019, 3:41 PM IST

ಬೆಂಗಳೂರು: ಕೆಪಿಎಲ್ ಬಹುಕೋಟಿ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ವೇಳೆ ಕೆಲ ಮಾಹಿತಿಗಳು ಬಹಿರಂಗವಾಗಿದ್ದು, ಸದ್ಯ ಕೆಎಸ್​ಸಿಎ ಹಾಗೂ ಎಲ್ಲ ಕೆಪಿಎಲ್ ತಂಡದ ಮಾಲೀಕರು ಹಾಗೂ ನಿರ್ವಾಹಕರಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು.

ಟೀಂ ಅಡ್ವೈಸರ್ ಸಿಸಿಬಿ ವಿಚಾರಣೆಗೆ ಹಾಜರು

ಮೈಸೂರು ವಾರಿಯರ್ಸ್ ತಂಡದ ಟೀಂ ಅಡ್ವೈಸರ್, ಬೆಂಗಳೂರು ಬ್ಲಾಸ್ಟರ್ಸ್ ತಂಡದ ಟೀಂ ಅಡ್ವೈಸರ್ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡಿದ್ದಾರೆ. ಮೈಸೂರು ವಾರಿಯರ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಮಾಲೀಕರು ಹಾಜರಾಗಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಅಡ್ವೈಸರ್ ಕಳುಹಿಸಿ ಕೊಟ್ಟಿದ್ದಾರೆ.

ಅಡ್ವೈಸರ್ ಗಳನ್ನ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರು ವಿಚಾರಣೆ ನಡೆಸಿ ನಿಮ್ಮ ಪಂದ್ಯಾವಳಿಯಲ್ಲಿರುವ ತಂಡಗಳು ಯಾವುದು. ಮಾಲೀಕರು ಹಾಗೂ ಮ್ಯಾನೇಜ್ಮೆಂಟ್ ಸದಸ್ಯರು ಯಾರು? ತಂಡದಲ್ಲಿ ಆಟಗಾರರು ಯಾರು? ಎಂಬೆಲ್ಲ ಮಾಹಿತಿ ಕಲೆ ಹಾಕಿದ್ದಾರೆ. ಆದರೆ, ಸಿಸಿಬಿ‌ ಪೊಲೀಸರಿಗೆ ತಂಡದ ಮಾಲೀಕರು ಹಾಗೂ ಮ್ಯಾನೇಜ್ಮೆಂಟ್ ಅವಶ್ಯಕತೆ ಇರುವ ಹಿನ್ನೆಲೆ ಅಡ್ವೈಸರ್ ವಿಚಾರಣೆ ಮುಕ್ತಾಯ ಮಾಡಿ ಟೀಂ ಮಾಲೀಕರಿಗೆ ಬುಲಾವ್ ನೀಡಿದ್ದಾರೆ.

ABOUT THE AUTHOR

...view details