ಕರ್ನಾಟಕ

karnataka

ETV Bharat / state

ಡಿಕೆಶಿ ಬಳಿ ಕ್ಷಮೆಯಾಚಿಸುವಂತೆ ಸಿ ಪಿ ಯೋಗೇಶ್ವರ್​ಗೆ ಕೆಪಿಸಿಸಿ ಕಾನೂನು ಘಟಕ ಆಗ್ರಹ - Do shivkumar

ಬಹುಕೋಟಿ ಮೆಗಾ ಸಿಟಿ ಹಗರಣದಲ್ಲಿ ಆರೋಪಿಯಾಗಿರುವ ಸಿ ಪಿ ಯೋಗೇಶ್ವರ್ ಅವರು ಇಂದಿಗೂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಕಟಕಟೆಯಲ್ಲಿ ನಿಂತು ವಿಚಾರಣೆ ಎದುರಿಸುತ್ತಿದ್ದಾರೆ. ಅವರಿಗೆ ಮತ್ತೊಬ್ಬರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲವೆಂದು ಕೆಪಿಸಿಸಿ ಕಾನೂನು ಘಟಕ ಕಿಡಿಕಾರಿದೆ.

Congress
Congress

By

Published : Aug 25, 2020, 7:58 PM IST

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಹೇಳಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು‌ ಎಂದು ಕೆಪಿಸಿಸಿ ಕಾನೂನು ವಿಭಾಗ ಎಚ್ಚರಿಕೆ ನೀಡಿದೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೆಪಿಸಿಸಿ ಕಾನೂನು ವಿಭಾಗದ ಅಧ್ಯಕ್ಷ ಎ.ಎಸ್. ಪೊನ್ನಣ್ಣ, ರಾಜ್ಯ ಕಂಡ ಮೊದಲ ಬಹುಕೋಟಿ ಹಗರಣದ ರೂವಾರಿ ಸಿ.ಪಿ. ಯೋಗೇಶ್ವರ್ ಅವರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ವಿರುದ್ಧ ನೀಡಿರುವ ಬೇಜವಾಬ್ದಾರಿ ಹೇಳಿಕೆಯನ್ನು ಕೆಪಿಸಿಸಿ ಕಾನೂನು ವಿಭಾಗ ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.

ಸಿ.ಪಿ. ಯೋಗೇಶ್ವರ್ 1995 ರಲ್ಲೇ ಬಿಡದಿ ಬಳಿ ವಿಶ್ವದರ್ಜೆಯ ಟೌನ್‌ಶಿಪ್ ನಿರ್ಮಾಣ ಮಾಡುವುದಾಗಿ ಹತ್ತು ಸಾವಿರ ಜನರಿಂದ 64 ಕೋಟಿ ರೂ. ಹಣ ಪಡೆದು ವಂಚನೆ ನಡೆಸಿದ್ದು ರಾಜ್ಯ ಮರೆಯುವಂತಿಲ್ಲ. ಯೋಗೇಶ್ವರ್ ಅವರು ಸಾವಿರಾರು ಜನರಿಗೆ ಮೆಗಾ ಸಿಟಿ ಬಿಲ್ಡರ್ಸ್ ಕಂಪನಿ ಮೂಲಕ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಹಲವು ವಂಚನೆ ಆರೋಪಗಳನ್ನು ಎದುರಿಸುತ್ತಿರುವ ಸಿ.ಪಿ. ಯೋಗೇಶ್ವರ್ ತಮ್ಮನ್ನು ತಾವೇ ಸ್ವಚ್ಛ ವ್ಯಕ್ತಿ ಎಂದು ಬಿಂಬಿಸುವ ತವಕದಲ್ಲಿ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಸಾರ್ವಜನಿಕವಾಗಿ ಅಪಹಾಸ್ಯಕ್ಕೆ ಒಳಗಾಗುತ್ತಿದ್ದಾರೆ. ಬಹುಕೋಟಿ ಮೆಗಾ ಸಿಟಿ ಹಗರಣದಲ್ಲಿ ಆರೋಪಿಯಾಗಿರುವ ಯೋಗೇಶ್ವರ್ ಅವರು ಇಂದಿಗೂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಕಟಕಟೆಯಲ್ಲಿ ನಿಂತು ವಿಚಾರಣೆ ಎದುರಿಸುತ್ತಿದ್ದಾರೆ. ಅವರಿಗೆ ಮತ್ತೊಬ್ಬರ ಬಗ್ಗೆ ಮಾತನಾಡುವ ಯಾವುದೇ ರೀತಿಯ ನೈತಿಕತೆ ಇಲ್ಲವೆಂದು ಕಿಡಿಕಾರಿದ್ದಾರೆ.

ABOUT THE AUTHOR

...view details