ಶಿವಮೊಗ್ಗ:ಜ್ಯೋತಿರಾಜ್ ಅಂದ್ರೆ ಅನೇಕರಿಗೆ ತಕ್ಷಣ ಯಾರೆಂದು ಗೊತ್ತಾಗುವುದಿಲ್ಲ. ಅದೇ ಕೋತಿರಾಜ್ ಅಂದ್ರೆ, ಎಲ್ಲರಿಗೂ ಚಿರಪರಿಚಿತ. ಇದೀಗ ಈ ಕೋತಿರಾಜ್ ಅವರ ಬಯೋಪಿಕ್ ಚಿತ್ರೀಕರಣವನ್ನು ಜೋಗದಲ್ಲಿ ಚಿತ್ರೀಕರಿಸಲಾಗುತ್ತಿದೆ.
'ದಿ ಇನ್ ಕ್ರೆಡಿಬಲ್ ಮಂಕಿ ಮ್ಯಾನ್' ಎಂಬ ಸಾಕ್ಷ್ಯಚಿತ್ರದ ನಿರ್ಮಾಣದ ಹೊಣೆಯನ್ನು ಅನಿವಾಸಿ ಭಾರತೀಯ ಸ್ಟಾನ್ಲಿ ಹೊತ್ತಿದ್ದಾರೆ. ಇದಕ್ಕಾಗಿ ಕೋತಿರಾಜ್ ಅವರ ಸಾಹಸವನ್ನು ಚಿತ್ರೀಕರಣ ತಂಡ ಜೋಗದಲ್ಲಿ ಸೆರೆ ಹಿಡಿಯುತ್ತಿದೆ. ಕಳೆದ ನಾಲ್ಕು ದಿನಗಳಿಂದ ಜಲಪಾತವನ್ನು ಅವರು ಹೇಗೆ ಏರುತ್ತಾರೆ?, ಹೇಗೆ ಕೆಳಗಿಳಿಯುತ್ತಾರೆ? ಎಂಬುದನ್ನು ಶೂಟ್ ಮಾಡಲಾಗುತ್ತಿದೆ.