ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ 39 ನೇ ಪುಣ್ಯತಿಥಿ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸೌಧದಲ್ಲಿರುವ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ಡಾಲರ್ಸ್ ಕಾಲೋನಿ ನಿವಾಸದಿಂದ ಶಿವಾಜಿನಗರಕ್ಕೆ ಚುನಾವಣಾ ಪ್ರಚಾರ ಮಾಡಲು ತೆರಳುವ ಮುನ್ನ ಶಕ್ತಿ ಕೇಂದ್ರಕ್ಕೆ ಆಗಮಿಸಿದ ಸಿಎಂ, ಕೆಂಗಲ್ ಹನುಮಂತಯ್ಯನವರ ಪ್ರತಿಮೆಗೆ ವಿಶೇಷ ನಮನ ಸಲ್ಲಿಸಿದರು.
ಕೆಂಗಲ್ ಹನುಮಂತಯ್ಯ ಪುಣ್ಯತಿಥಿ: ಪುಷ್ಪನಮನ ಸಲ್ಲಿಸಿದ ಸಿಎಂ ಯಡಿಯೂರಪ್ಪ - ಸಿಎಂ ಯಡಿಯೂರಪ್ಪ
ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ 39ನೇ ಪುಣ್ಯತಿಥಿ. ವಿಧಾನಸೌಧದಲ್ಲಿರುವ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಸಿಎಂ ಬಿಎಸ್ ಯಡಿಯೂರಪ್ಪ.
ಕೆಂಗಲ್ ಹನುಮಂತಯ್ಯ ಪುಣ್ಯತಿಥಿ, ಪುಷ್ಪನಮನ ಸಲ್ಲಿಸಿದ ಸಿಎಂ ಯಡಿಯೂರಪ್ಪ
ಸಿಎಂ ಬಿಎಸ್ವೈಗೆ ಸಂಸದರಾದ ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ ಸಾಥ್ ನೀಡಿದರು. ಈ ವೇಳೆ ರಾಜ್ಯಕ್ಕೆ ಕೆಂಗಲ್ ಹನುಮಂತಯ್ಯ ನೀಡಿರುವ ಕೊಡುಗೆಯನ್ನು ಸಿಎಂ ಸ್ಮರಿಸಿದರು.