ಬೆಂಗಳೂರು:ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಪೇದೆಗಳನ್ನು ಪೊಲೀಸ್ ಪೇದೆ ಎಂಬುದಾಗಿ ಕರೆಯಲಾಗುತ್ತಿದೆ. ಆದರೆ ಇದೀಗ ಪೊಲೀಸ್ ಇಲಾಖೆಯಲ್ಲಿ ಪೇದೆ ಎಂಬ ಪದ ಬಳಕೆಗೆ ವ್ಯಾಪಕವಾಗಿ ವಿರೋಧ ವ್ಯಕ್ತವಾಗಿದೆ. ಪೇದೆ ಬದಲಾಗಿ ಕಾನ್ಸ್‌ಟೆಬಲ್ ಪದವನ್ನು ಬಳಸುವಂತೆ ಹಲವು ಪೊಲೀಸರು ಆಗ್ರಹಿಸಿದ್ದಾರೆ.
ಪೊಲೀಸ್ 'ಪೇದೆ' ಎಂದು ಕರೆಯುವಂತಿಲ್ಲ: ಕಾನ್ಸ್‌ಟೆಬಲ್ ಪದ ಕಡ್ಡಾಯ..!
2009 ರಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ಮಹಾ ನಿರ್ದೇಶಕರಾಗಿದ್ದ ಅಜಯ ಕುಮಾರ ಸಿಂಹ ಅವರು, ಪೇದೆ ಎಂಬ ಪದವನ್ನು ಯಾರು ಬಳಕೆ ಮಾಡುವಂತಿಲ್ಲ. ಕಾನ್ಸ್‌ಟೆಬಲ್, ಹೆಡ್ ಕಾನ್ಸ್‌ಟೆಬಲ್ ಪದ ಬಳಸುವಂತೆ ಸೂಚನೆ ನೀಡಿದ್ದರು. ಈಗ ಡಿಜಿಪಿ ಪ್ರವೀಣ್ ಸೂದ್ ಸಹ ಈ ಆದೇಶವನ್ನು ಹೊರಡಿಸಿದ್ದಾರೆ.
2009 ರಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ಮಹಾ ನಿರ್ದೇಶಕರಾಗಿದ್ದ ಅಜಯಕುಮಾರ್ ಸಿಂಹ ಅವರು, ಪೇದೆ ಎಂಬ ಈ ಪದವನ್ನು ಯಾರು ಬಳಕೆ ಮಾಡುವಂತಿಲ್ಲ. ಕಾನ್ಸ್‌ಟೆಬಲ್, ಹೆಡ್ ಕಾನ್ಸ್‌ಟೆಬಲ್ ಪದ ಬಳಸುವಂತೆ ಸೂಚನೆ ನೀಡಿದ್ದರು. ಆದರೆ ಕೊರೊನಾ ಬಂದಾಗಿನಿಂದ, ಪೇದೆ ಪೇದೆ ಅನ್ನೋ ಪದ ಬಳಸಿ ಬಹುತೇಕರು ಹಿಯಾಳಿಸಿದ್ದಾರೆ. ಪೇದೆ ಅನ್ನುವ ಪದ ಬಳಕೆ ಮಾಡಬಾರದೆಂದು ಕರ್ತವ್ಯನಿರತ ಸಿಬ್ಬಂದಿ ಆಕ್ರೋಶ ಹೊರಹಾಕಿದ್ರು.
ಹೀಗಾಗಿ 2009 ರಲ್ಲಿ ಅಜಯಕುಮಾರ್ ಸಿಂಹ ಅವರು ತಂದ ನಿಯಮದಂತೆ, ಸದ್ಯ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರು ಇನ್ಮುಂದೆ ಯಾರನ್ನೂ ಸಹ ಪೇದೆ ಎಂದು ಕರೆಯುವಂತಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಪೇದೆ, ಮುಖ್ಯ ಪೇದೆ ಎಂಬ ಪದ ಬಳಕೆ ಮಾಡದೇ ಕಾನ್ಸ್‌ಟೆಬಲ್, ಹೆಡ್ ಕಾನ್ಸ್‌ಟೆಬಲ್ ಪದ ಬಳಕೆ ಮಾಡುವುದು ಕಡ್ಡಾಯವಾಗಿದೆ.