ಕರ್ನಾಟಕ

karnataka

ETV Bharat / state

ಇಂದಿನಿಂದ‌ ನೈಟ್ ಕರ್ಫ್ಯೂ ಜಾರಿ: ಯಾವ ಸೇವೆ ಇರುತ್ತೆ, ಯಾವುದು ಇರೋದಿಲ್ಲ?

ಇಂದಿನಿಂದ ಏಪ್ರಿಲ್ 20ವರಗೆ ಬೆಂಗಳೂರು ನಗರ, ಮೈಸೂರು, ಮಂಗಳೂರು, ಉಡುಪಿ, ಮಣಿಪಾಲ್, ಬೀದರ್, ಕಲಬುರಗಿ ಮತ್ತು ತುಮಕೂರಿನಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ.

Karnataka Govt releases night curfew guidelines
ಇಂದಿನಿಂದ‌ ನೈಟ್ ಕರ್ಫ್ಯೂ ಜಾರಿ

By

Published : Apr 10, 2021, 6:05 PM IST

ಬೆಂಗಳೂರು:ಕೊರೊನಾ‌ ಅಟ್ಟಹಾಸ ನಿಯಂತ್ರಿಸಲು ರಾಜ್ಯ ಸರ್ಕಾರ ಇಂದಿನಿಂದ‌ ನೈಟ್ ಕರ್ಫ್ಯೂ ಜಾರಿ ಮಾಡಿದ್ದು, ಅಡ್ಡಾದಿಡ್ಡಿ ಓಡಾಟಕ್ಕೆ ಬ್ರೇಕ್ ಹಾಕಿದೆ. ಬೆಂಗಳೂರಿನಲ್ಲಿ ಇಂದಿನಿಂದ 10 ದಿನ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಫ್ಲೈ ಓವರ್​ಗಳು ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರಿಗೆ ಬಂದ್ ಆಗಲಿವೆ.

ಯಾವ ಸೇವೆ ಇರೋದಿಲ್ಲ?

  • ವಾಣಿಜ್ಯ ಚಟುವಟಿಕೆಗಳು ಬಂದ್
  • ಪಬ್, ಬಾರ್ ಅಂಡ್ ರೆಸ್ಟೋರೆಂಟ್
  • ಫುಡ್ ಕೋರ್ಟ್, ಮೊಬೈಲ್ ಕ್ಯಾಂಟೀನ್
  • ಮಾಲ್, ಹೋಟೆಲ್, ನೈಟ್ ಕ್ಲಬ್, ಥಿಯೇಟರ್, ನೈಟ್ ಪಾರ್ಟಿ ಹಾಗೂ ಜನರ ಸಂಚಾರ ಬಂದ್ ಇರಲಿದೆ.

ಯಾವುದಕ್ಕೆ ಅನುಮತಿ?

  • ವೈದ್ಯಕೀಯ ಸೇವೆ ಮತ್ತು ತುರ್ತು ಚಟುವಟಿಕೆಗಳಿಗೆ ಅನುಮತಿ.
  • ‌ಹೋಮ್ ಡೆಲಿವರಿ, ಇ ಕಾಮರ್ಸ್ ಸಂಚಾರಕ್ಕೆ ಅನುಮತಿ.
  • ಆಟೋ, ಕ್ಯಾಬ್ ಸಂಚಾರ ಇದ್ದು, ಅದು ಕೂಡ ಷರತ್ತುಬದ್ಧ.
  • ಬಸ್​​ಗಳ ಸಂಚಾರ, ರೈಲು ಹಾಗೂ ವಿಮಾನ ಹಾರಾಟ ಇರಲಿದೆ.

ಇಂದಿನಿಂದ ಏಪ್ರಿಲ್ 20ವರಗೆ ಬೆಂಗಳೂರು ನಗರ, ಮೈಸೂರು, ಮಂಗಳೂರು, ಉಡುಪಿ, ಮಣಿಪಾಲ್, ಬೀದರ್, ಕಲಬುರಗಿ ಮತ್ತು ತುಮಕೂರಿನಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ.

ಓದಿ:ಕೊರೊನಾ ಕರ್ಫ್ಯೂ: ಅನವಶ್ಯಕವಾಗಿ ಓಡಾಡುವವರ‌ ‌ಮೇಲೆ ಪೊಲೀಸರ ಹದ್ದಿನ ಕಣ್ಣು!‌‌

ABOUT THE AUTHOR

...view details