ಕರ್ನಾಟಕ

karnataka

ETV Bharat / state

KPSC ನೇಮಕಾತಿ: ಸಹಕಾರ ಸಂಘಗಳಲ್ಲಿ ನಿರೀಕ್ಷಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ - ಸಹಕಾರ ಇಲಾಖೆಯಲ್ಲಿನ ಸಹಕಾರ ಸಂಘಗಳ

ಸಹಕಾರ ಇಲಾಖೆಯಲ್ಲಿ ಖಾಲಿ ಇರುವ 100 ಹುದ್ದೆಗಳ ಭರ್ತಿಗೆ ಕೆಪಿಎಸ್ಸಿ ಅರ್ಜಿ ಆಹ್ವಾನಿಸಿದೆ.

Karnataka Government job KPSC Latest Job Notification
Karnataka Government job KPSC Latest Job Notification

By

Published : Apr 13, 2023, 3:51 PM IST

ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ಕರ್ನಾಟಕ ಸಹಕಾರ ಇಲಾಖೆಯಲ್ಲಿನ ಸಹಕಾರ ಸಂಘಗಳ ನಿರೀಕ್ಷಕರ ಗ್ರೂಪ್​ ಸಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 100 ಹುದ್ದೆಗಳ ಭರ್ತಿ ನಡೆಯಲಿದೆ. ಕರ್ನಾಟಕ ಉಳಿಕೆ ಮೂಲ ವೃಂದದ 47 ಹುದ್ದೆಗಳು ಹಾಗೂ ಕರ್ನಾಟಕ ವೃಂದದ 53 ಹುದ್ದೆಗಳಿವೆ.

ಅಧಿಸೂಚನೆ

ವಿದ್ಯಾರ್ಹತೆ: ಬಿಎಸ್ಸಿ (ಕೃಷಿ), ಬಿಎಸ್ಸಿ (ಮಾರ್ಕೆಟಿಂಗ್​), ಬಿಎಸ್ಸಿ ಕೋ ಆಪರೇಟಿವ್​, ಬಿಕಾಂ, ಬಿಬಿಎ/ ಬಿಬಿಎಂ ಪದವಿ ಹೊಂದಿರಬೇಕು.

ವಯೋಮಿತಿ: ಕನಿಷ್ಟ 18 ವರ್ಷ, ಗರಿಷ್ಟ 35 ವರ್ಷ. 2ಎ, 2ಬಿ, 3ಎ ಮತ್ತು 3ಬಿ ವರ್ಗದ ಅಭ್ಯರ್ಥಿಗಳು 3 ವರ್ಷ ಮತ್ತು ಪ.ಜಾ, ಪ. ಪಂ, ವಿಕಲಚೇತನ ಮತ್ತು ಪ್ರವರ್ಗ 1 ಅಭ್ಯರ್ಥಿಗಳು 5 ವರ್ಷ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಸಲ್ಲಿಕೆ ವಿವರ: ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಸಾಮಾನ್ಯ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ 600 ರೂ ಅರ್ಜಿ ಶುಲ್ಕ ಭರ್ತಿ ಮಾಡಬೇಕು. ಪ್ರವರ್ಗ 2 ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 300 ರೂ. ಪ.ಜಾ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ ಶುಲ್ಕ ಪಾವತಿ ವಿನಾಯಿತಿ ನೀಡಲಾಗಿದೆ.

ವೇತನ: 27, 650- 52,650 ರೂ ವೇತನ ನಿಗದಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಮೊದಲ ಪತ್ರಿಕೆ- ಸಾಮಾನ್ಯ ಜ್ಞಾನ ಮತ್ತು ಎರಡನೇ ಪತ್ರಿಕೆ- ಸಾಮಾನ್ಯ ಕನ್ನಡ. ಇಂಗ್ಲಿಷ್​ ಮತ್ತು ಕಂಪ್ಯೂಟರ್​ ಜ್ಞಾನ ಹೊಂದಿರಬೇಕು.

ಅರ್ಜಿ ಸಲ್ಲಿಕೆಯ ಲಿಂಕ್​ ಅನ್ನು ಈಗಾಗಲೇ ಅಧಿಕೃತ ವೆಬ್‌ತಾಣದಲ್ಲಿ ನೀಡಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಉಳಿಕೆ ಮೂಲ ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಏಪ್ರಿಲ್​ 30 ಕಡೆಯ ದಿನ. ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಮೇ 2 ಕಡೆಯ ದಿನ.

ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ವೀಕ್ಷಣೆಗೆ ಕೆಪಿಎಸ್​ಸಿ ಅಧಿಕೃತ ಜಾಲತಾಣಕ್ಕೆ ಅಭ್ಯರ್ಥಿಗಳು kpsc.kar.nic.in ಭೇಟಿ ನೀಡಬಹುದು.

ಇದನ್ನೂ ಓದಿ: ಕೆಪಿಎಸ್​ಸಿ ನೇಮಕಾತಿ: 242 ಲೆಕ್ಕ ಸಹಾಯಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ABOUT THE AUTHOR

...view details