ಕರ್ನಾಟಕ

karnataka

ETV Bharat / state

ಅನ್ಯ ರಾಜ್ಯದಿಂದ ಕರ್ನಾಟಕಕ್ಕೆ ಬರುವವರಿಗೆ ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ!

ಬೇರೆ ರಾಜ್ಯಗಳಿಂದ ಅನ್​ಲಾಕ್​ ವೇಳೆ ಕರ್ನಾಟಕಕ್ಕೆ ಬರುವವರಿಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ.

Government
Government

By

Published : Jun 4, 2020, 3:30 AM IST

ಬೆಂಗಳೂರು:ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ವ್ಯಕ್ತಿಗಳ ಸಂಚಾರ ನಿಯಂತ್ರಣ ಕೈಗೊಳ್ಳುವ ಸಂಬಂಧ ರಾಜ್ಯ ಸರ್ಕಾರ ವಿಶೇಷ ಮಾರ್ಗಸೂಚಿ ಆದೇಶ ಹೊರಡಿಸಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗ ಹರಡುವುದನ್ನು ನಿಯಂತ್ರಿಸಲು, ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 24 (1) ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆ 1897ರ ಸೆಕ್ಷನ್ 2 (1) ರ ಅಡಿಯಲ್ಲಿ ಇತರ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವುದನ್ನು ನಿಯಂತ್ರಿಸಲು ಕೆಲವು ನಿರ್ದೇಶನಗಳನ್ನು ನೀಡಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ಇಂದು ಆದೇಶ ಹೊರಡಿಸಿದ್ದಾರೆ.

ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ!

ಮೊದಲ ಹಂತವಾಗಿ ಅನ್​ಲಾಕ್​​ ಅವಧಿಯಲ್ಲಿ ಕರ್ನಾಟಕಕ್ಕೆ ಹೊರರಾಜ್ಯದಿಂದ ಬರುವ ವ್ಯಕ್ತಿಗಳು ಪ್ರಯಾಣಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಪ್ರೋಟೋಕಾಲ್ ಅನ್ನು ಎಲ್ಲಾ ವ್ಯಕ್ತಿಗಳು, ಸಂಸ್ಥೆಗಳು, ಸಾರಿಗೆ ಸಂಸ್ಥೆಗಳು ಮತ್ತು ಸರ್ಕಾರಿ ಇಲಾಖೆಗಳು ಅನುಸರಿಸಬೇಕು. ಈ ಆದೇಶದ ಅನುಬಂಧದಲ್ಲಿ ವಿವರಿಸಿರುವಂತೆ ಪ್ರೋಟೋಕಾಲ್​ ಉಲ್ಲಂಘನೆಯ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಸೆಕ್ಷನ್ 51 (ಬಿ) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 ರ ಪ್ರಕಾರ ದಂಡದ ಕ್ರಮವನ್ನು ಸೂಚಿಸುತ್ತದೆ. ಸಾರ್ವಜನಿಕ, ನಿವಾಸಿ ಕಲ್ಯಾಣ ಸಂಘಗಳು ಮತ್ತು ವಾಣಿಜ್ಯ ಸಂಸ್ಥೆಗಳು, ಎಲ್ಲಾ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಚೇರಿಗಳು. ಕಾರ್ಖಾನೆಗಳು, ಮಾಲ್‌ಗಳು, ಧಾರ್ಮಿಕ ಸ್ಥಳಗಳು, ಹೋಟೆಲ್‌ಗಳು ಇತ್ಯಾದಿಗಳ ಕ್ವಾರಂಟೈನ್ ಹೊಂದಿರುವವರು ತಮ್ಮ ಕ್ವಾರಂಟೈನ್ ಅವಧಿ ಮುಗಿಸುವ ಮೊದಲು ಅಥವಾ ಪ್ರಸ್ತುತ ಕೋವಿಡ್ ನೆಗೆಟಿವ್ ಪರೀಕ್ಷಾ ವರದಿಯನ್ನು ಪಡೆಯುವವರೆಗೆ ಎಲ್ಲಿಯೂ ಪ್ರವೇಶಿಸಲು ಅನುಮತಿಸಬಾರದು. ಉಲ್ಲಂಘನೆಯಾದಲ್ಲಿ ಈ ಬಗ್ಗೆ ಅವರು ದೂರವಾಣಿ ಸಂಖ್ಯೆ 100ರಲ್ಲಿ ಪೊಲೀಸರಿಗೆ ತಿಳಿಸಬೇಕು.

ಸಾರ್ವಜನಿಕರು ಮತ್ತು ಸ್ಥಳೀಯ ಕ್ಷೇಮಾಭಿವೃದ್ಧಿ ಸಂಘಗಳು ತಮ್ಮ ನೆರೆಹೊರೆಯಲ್ಲಿರುವ ಯಾವುದೇ ಕ್ವಾರಂಟೈನ್ ಉಲ್ಲಂಘಿಸಿ ಬಂದು ವಾಸವಾಗಿರುವ ನಾಗರಿಕರ ವಿವರವನ್ನು ದೂರವಾಣಿ ಸಂಖ್ಯೆ 100ಕ್ಕೆ ಕರೆ ಮಾಡಿ ಪೊಲೀಸರಿಗೆ ವರದಿ ನೀಡಲು ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

ABOUT THE AUTHOR

...view details