ಕರ್ನಾಟಕ

karnataka

ETV Bharat / state

13 ಜನ ರಾಜೀನಾಮೆ ನೀಡಿದ್ರೆ ಏನಾಗುತ್ತೆ? ಇಲ್ಲಿದೆ ಬಲಾಬಲದ ಲೆಕ್ಕ!

ದೋಸ್ತಿ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದು ಕುಮಾರಸ್ವಾಮಿ ಸರ್ಕಾರ ಪತನವಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಇಲ್ಲಿದೆ ಬಲಾಬಲದ ಲೆಕ್ಕ

By

Published : Jul 6, 2019, 1:33 PM IST

ಬೆಂಗಳೂರು: ಸದ್ಯ ಮೈತ್ರಿ ಸರ್ಕಾರದ ಎಂಟು ಶಾಸಕರು, ಸ್ಪೀಕರ್​ ಕಚೇರಿ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಸ್ಪೀಕರ್​​ ಭೇಟಿಗಾಗಿ ಕಾಯುತ್ತಿದ್ದಾರೆ. ಇದಿಷ್ಟೇ ಅಲ್ಲ ಇನ್ನೂ ಐದು ಜನ ರಾಜೀನಾಮೆಗೆ ಸಿದ್ದರಾಗಿದ್ದಾರೆ ಎನ್ನಲಾಗುತ್ತಿದೆ.

8+5 ಸಾಸಕರು ರಾಜೀನಾಮೆ ನೀಡಿದರೆ ಒಟ್ಟು 13 ಮಂದಿ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್​ ಪಡೆದಂತಾಗುತ್ತದೆ. ಆಗ ಸರ್ಕಾರ ಅನಿವಾರ್ಯವಾಗಿ ಉರುಳುತ್ತದೆ. ಮೈತ್ರಿಯ ಬಲಾಬಲ ಹೀಗಿದೆ ನೋಡಿ.

ಸದನದ ಒಟ್ಟು ಬಲ: 224

ಬಿಜೆಪಿ: 105
ಕಾಂಗ್ರೆಸ್: 79
ಜೆಡಿಎಸ್ 38
ಪಕ್ಷೇತರರು: 2

ಒಟ್ಟು ರಾಜೀನಾಮೆ ಸಂಖ್ಯೆ: 13

ಬಿಜೆಪಿ: 105
ಕಾಂಗ್ರೆಸ್: 79-12= 67
ಜೆಡಿಎಸ್: 38-2=36
ಪಕ್ಷೇತರರು: 2

ರಾಜೀನಾಮೆ ಬಳಿಕ ಸದನದ ಬಲ: 210

ಬಹುಮತ ಸಾಬೀತಿಗೆ ಮ್ಯಾಜಿಕ್ ನಂಬರ್: 106

ಆಗ ಬಿಜೆಪಿ ಸದಸ್ಯರ ಸಂಖ್ಯೆ 105.. ಈ ವೇಳೆ ಪಕ್ಷೇತರರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದರೆ ಆಗ ಬಿಜೆಪಿ ಸುಲಭವಾಗಿ ಸರ್ಕಾರ ರಚನೆ ಮಾಡಬಹುದು. ಆ ಬಳಿಕ ಉಪ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 8 ಸ್ಥಾನಗಳನ್ನು ಗೆದ್ದರೆ ಸರ್ಕಾರ ಸುಭದ್ರ ಮಾಡಿಕೊಳ್ಳಬಹುದು. ಒಂದು ವೇಳೆ ಉಪ ಚುನಾವಣೆಯಲ್ಲಿ ಬಿಜೆಪಿ ಅಷ್ಟು ಸ್ಥಾನಗಳನ್ನು ಗೆಲ್ಲುವಲ್ಲಿ ವಿಫಲವಾದರೆ ಅಪಾಯ ತಪ್ಪಿದ್ದಲ್ಲ.

ABOUT THE AUTHOR

...view details