ಕರ್ನಾಟಕ

karnataka

ETV Bharat / state

22 ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಶೂನ್ಯ - ರಾಜ್ಯದಲ್ಲಿ ಗುರುವಾರ ಕೊರೊನಾ ಸೋಂಕಿಗೆ ಓರ್ವ ವ್ಯಕ್ತಿ ಬಲಿ

ರಾಜ್ಯದಲ್ಲಿ ಗುರುವಾರ ಕೊರೊನಾ ಸೋಂಕಿಗೆ ಓರ್ವ ವ್ಯಕ್ತಿ ಬಲಿಯಾಗಿದ್ದಾನೆ. ಒಟ್ಟು 78 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 93 ಜನ ಗುಣಮುಖರಾಗಿದ್ದಾರೆ.

ಕೊರೊನಾ
ಕೊರೊನಾ

By

Published : Mar 31, 2022, 9:16 PM IST

ಬೆಂಗಳೂರು:ರಾಜ್ಯದಲ್ಲಿ ಕೋವಿಡ್ ಸೋಂಕು ಸಕ್ರಿಯ ಪ್ರಕರಣಗಳ ಸಂಖ್ಯೆ 1,569ಕ್ಕೆ ಇಳಿಕೆಯಾಗಿದೆ. ಗುರುವಾರ 24,031 ಜನರಿಗೆ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 78 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಓರ್ವ ಸೋಂಕಿಗೆ ಬಲಿಯಾಗಿದ್ದಾನೆ.

ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಶೇ. 0.32ರಷ್ಟಿದೆ. ಸಾವಿನ ಪ್ರಮಾಣ ಶೇ.1.28ರಷ್ಟಿದೆ. ಇದುವರೆಗೆ 39.45 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ. 40,054 ಜನರು ಮೃತಪಟ್ಟಿದ್ದಾರೆ. ಮಾರ್ಚ್ 31ರಂದು 93 ಜನರು ಗುಣಮುಖರಾಗಿದ್ದಾರೆ. ಒಟ್ಟು ಗುಣಮುಖರಾದವರ ಸಂಖ್ಯೆ 39.03 ಲಕ್ಷ ತಲುಪಿದೆ.

ಇದನ್ನೂ ಓದಿ:ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಲು ಬಿಡಲ್ಲ ಎಂದಿದ್ದ ಬಿಜೆಪಿ ಶಾಸಕ ಬೆನಕೆ ಯೂಟರ್ನ್

ಬೆಂಗಳೂರು ನಗರದಲ್ಲಿ 67 ಜನರು ಸೋಂಕಿಗೆ ತುತ್ತಾಗಿದ್ದಾರೆ. 22 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಶೂನ್ಯ. 8 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಒಂದಂಕಿಗೆ ತಗ್ಗಿದೆ. ಚಿಕ್ಕಬಳ್ಳಾಪುರದಲ್ಲಿ ಸೋಂಕಿಗೆ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.

ABOUT THE AUTHOR

...view details