ಕರ್ನಾಟಕ

karnataka

ETV Bharat / state

ತುಳುವರ ಹೆಸರಿನ ಟ್ರೋಲ್ ಪೇಜಲ್ಲಿ ಅಸಭ್ಯ ಪೋಸ್ಟ್... ಕರವೇಯಿಂದ ಸೈಬರ್​ ಕ್ರೈಂ ಠಾಣೆಗೆ ದೂರು

ತುಳುವರ ಹೆಸರಲ್ಲಿ ಪೇಜ್ ಆರಂಭಿಸಿ ಅಸಭ್ಯವಾಗಿ ಪೋಸ್ಟ್ ಮಾಡುವ ಟ್ರೋಲ್ ಪೇಜ್​ಗಳ ವಿರುದ್ಧ ಕನ್ನಡ ಸಂಘಟನೆ ಸೈಬರ್ ಕ್ರೈಂನಲ್ಲಿ ದೂರು ದಾಖಲಿಸಿದೆ.

ಸೈಬರ್ ಕ್ರೈಂ

By

Published : Oct 31, 2019, 2:47 AM IST

ಬೆಂಗಳೂರು:ತುಳುವರ ಹೆಸರಿನಲ್ಲಿ ಟ್ರೋಲ್ ಪೇಜ್ ತೆರೆದು ಅವಹೇಳಕಾರಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಕನ್ನಡ ಸಂಘಟನೆ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿ ಆರೋಪಿಗಳ ಪತ್ತೆಗೆ ಒತ್ತಾಯಿಸಿದ್ದಾರೆ.

ತುಳುವರ ಹೆಸರಲ್ಲಿ ನಕಲಿ ಟ್ರೋಲ್ ಪೇಜ್ ಆರಂಭಿಸಿದ ಕಿಡಿಗೇಡಿಗಳು ಆ ಪೇಜ್‌ನಲ್ಲಿ ಕರ್ನಾಟಕ ಬಾವುಟವನ್ನು ಟಾಯ್ಲೆಟ್ ಪೇಪರ್‌ಗೆ ಹೋಲಿಕೆ, ಕುವೆಂಪುರವರ ಕೇಶವಿನ್ಯಾಸವನ್ನು ಅಶ್ಲೀಲವಾಗಿ ಬಿಂಬಿಸುವುದು ಮತ್ತು ಸುಧಾ ಮೂರ್ತಿಯವರ ಬಗ್ಗೆ ಕೀಳು ಪದಪ್ರಯೋಗ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದ್ದು. ಸೈಬರ್ ಕ್ರೈಂ ಠಾಣೆಯಲ್ಲಿ ಕರವೇ ಅಧ್ಯಕ್ಷ ಜಯರಾಜ್ ನಾಯ್ಡು ತಂಡ ದೂರು ನೀಡಿದ್ದಾರೆ.

ABOUT THE AUTHOR

...view details