ಕರ್ನಾಟಕ

karnataka

ETV Bharat / state

ಸ್ವಚ್ಛ ಕನ್ನಡನಾಡು ಆಶಯದೊಂದಿಗೆ ಬಿಬಿಎಂಪಿ ಕನ್ನಡ ರಾಜ್ಯೋತ್ಸವ ಆಚರಣೆ

ನಾವು ಪ್ರತಿಯೊಬ್ಬರೂ ಮಾತನಾಡಿದಾಗ ಭಾಷೆ ಬೆಳೆಯುತ್ತದೆ. ವೈಶಿಷ್ಟ್ಯ ಪೂರ್ಣ ನಾಡನ್ನು ನಾವು ಹೊಂದಿದ್ದು, ಇದನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ..

Kannada Rajyotsava Celebration by BBMP
ಸ್ವಚ್ಛ ಕನ್ನಡನಾಡು ಆಶಯದಲ್ಲಿ ಬಿಬಿಎಂಪಿ ಕನ್ನಡ ರಾಜ್ಯೋತ್ಸವ ಆಚರಣೆ

By

Published : Nov 1, 2020, 1:11 PM IST

ಬೆಂಗಳೂರು : ಬಿಬಿಎಂಪಿ ವತಿಯಿಂದ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿಶೇಷ ಆಯುಕ್ತರಾದ ಡಿ. ರಂದೀಪ್, ಮನೋಜ್ ಜೈನ್, ಜೆ. ಮಂಜುನಾಥ್ ಭಾಗಿಯಾಗಿದ್ದರು.

ಧ್ವಜಾರೋಹಣದ ಬಳಿಕ ಮಾತನಾಡಿದ ಆಡಳಿತಗಾರರಾದ ಗೌರವ್ ಗುಪ್ತಾ, ಕನ್ನಡ ನಾಡು 65 ವರ್ಷಗಳ ಹಿಂದೆ ಉದಯವಾಗಿ ಬಹಳ‌ಗಟ್ಟಿಯಾಗಿ ಬೆಳೆದಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ, ಕನ್ನಡ ನಾಡಿನೊಂದಿಗಿನ ನನ್ನ ಭಾವನೆ ವಿಶೇಷವಾಗಿದೆ. ರಾಜ್ಯವನ್ನು ಇನ್ನಷ್ಟು ಗಟ್ಟಿಯಾಗಿ ಕಟ್ಟೋಣ. ನಮ್ಮ ನಗರವನ್ನು ಸ್ವಚ್ಛವಾಗಿ, ಸುಂದರವಾಗಿಡಲು ಪಣ ತೊಡೋಣ ಎಂದರು.

ಕಾರ್ಯಕ್ರಮದಲ್ಲಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಇವತ್ತು ನಾಡಹಬ್ಬ. ಕರ್ನಾಟಕ ಏಕೀಕರಣವಾಗಿ 65ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದೇವೆ. 2,200 ವರ್ಷಗಳ ಇತಿಹಾಸವಿರುವ ನಮ್ಮ ಭಾಷೆ, ನಾಡು, ನುಡಿ, ಸಂಸ್ಕೃತಿ ಬಗ್ಗೆ ನಮಗೆ ಹೆಮ್ಮೆಯಿರಬೇಕು.

ನಾವು ಪ್ರತಿಯೊಬ್ಬರೂ ಮಾತನಾಡಿದಾಗ ಭಾಷೆ ಬೆಳೆಯುತ್ತದೆ. ವೈಶಿಷ್ಟ್ಯ ಪೂರ್ಣ ನಾಡನ್ನು ನಾವು ಹೊಂದಿದ್ದು, ಇದನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಕೋವಿಡ್ ಸಂದರ್ಭದಲ್ಲಿ ಬಿಬಿಎಂಪಿಯ ಹನ್ನೆರಡು ಸಿಬ್ಬಂದಿಯನ್ನು ಕಳೆದುಕೊಂಡಿದ್ದೇವೆ. ನಮ್ಮ ಕುಟುಂಬದವರನ್ನೇ ಕಳೆದುಕೊಂಡಷ್ಟೇ ನೋವಾಗಿದೆ. ಅವರ ಕುಟುಂಬಕ್ಕೆ ಬೇಕಾದ ಸಹಕಾರವನ್ನು ತ್ವರಿತಗತಿಯಲ್ಲಿ ಮಾಡುತ್ತೇವೆ ಎಂದರು.

ABOUT THE AUTHOR

...view details