ಕರ್ನಾಟಕ

karnataka

ETV Bharat / state

ಜೆಡಿಎಸ್​​ನ ಎಲ್ಲ ಶಾಸಕರಿಗೆ ವಿಪ್ ಜಾರಿ... ಕಲಾಪಕ್ಕೆ ಗೈರಾದರೆ ಅನರ್ಹತೆಯ ಎಚ್ಚರಿಕೆ!

ರಾಜೀನಾಮೆ ನೀಡಿ ಮುಂಬೈ ಸೇರಿರುವ ಮೂವರು ಅತೃಪ್ತ ಶಾಸಕರು ಸೇರಿದಂತೆ ಎಲ್ಲ ಜೆಡಿಎಸ್ ಶಾಸಕರಿಗೂ ವಿಶ್ವಾಸಮತಕ್ಕೆ ಹಾಜರಾಗುವಂತೆ ವಿಪ್ ಜಾರಿ ಮಾಡಲಾಗಿದ್ದು, ನಿಯಮ ಉಲ್ಲಂಘಿಸಿದರೆ ಪಕ್ಷಾಂತರ ನಿಷೇಧ ಕಾಯ್ದೆಯ ಎಚ್ಚರಿಕೆಯನ್ನು ನೀಡಿಲಾಗಿದೆ.

ಸಿಎಂ ಕುಮಾರಸ್ವಾಮಿ

By

Published : Jul 18, 2019, 3:00 AM IST

ಬೆಂಗಳೂರು:ವಿಶ್ವಾಸಮತ ಮಂಡನೆ ವೇಳೆ ಜೆಡಿಎಸ್​ನ ಎಲ್ಲ ಶಾಸಕರು ಉಪಸ್ಥಿತರಿದ್ದು ಪಕ್ಷದ ಪರ ಮತದಾನ ಮಾಡಬೇಕು, ಗೈರು ಹಾಜರಾಗುವುದು ಅಥವಾ ಹಾಜರಾಗಿ ಮತ ಚಲಾಯಿಸದೇ ವಿಪ್ ಅನ್ನು ಉಲ್ಲಂಘಿಸಿದರೆ ಪಕ್ಷಾಂತರ ನಿಷೇಧ ಕಾಯ್ದೆಯ ಅಡಿ ಕ್ರಮ ಕೈಗೊಳ್ಳುವುದಾಗಿ ಸಿಎಂ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಈ ಸಂಬಂಧ ವಿಪ್​​ ಜಾರಿಗೊಳಿಸಿದ್ದು, "ಗುರುವಾರ ಬೆಳಿಗ್ಗೆ 11ಗಂಟೆಗೆ ವಿಧಾನಸೌಧದ ಮೊದಲನೇ ಮಹಡಿಯ ವಿಧಾನಸಭೆಯಲ್ಲಿ ನಾನು ವಿಶ್ವಾಸಮತ ಮಂಡಿಸಲಿದ್ದು ಜಾತ್ಯತೀತ ಜನತಾದಳದ ಸದಸ್ಯರಾಗಿರುವ ನೀವು ಕಡ್ಡಾಯವಾಗಿ ಹಾಜರಿರಬೇಕು. ವಿಶ್ವಾಸಮತ ಪ್ರಕ್ರಿಯೆ ಆರಂಭವಾದ ದಿನದಿಂದ ಮತದಾನ ಆಗುವವರೆಗಿನ ಎಲ್ಲಾ ಪ್ರಕ್ರಿಯೆಯಲ್ಲಿ ತಾವು ಉಪಸ್ಥಿತರಿರಬೇಕು ಎಂದು ಈ ಮೂಲಕ ಸಚೇತನ (ವಿಪ್) ನೀಡುತ್ತಿದ್ದೇನೆ" ಎಂದು ತಿಳಿಸಿದ್ದಾರೆ.

ಅತೃಪ್ತರಿಗೆ ಜೆಡಿಎಸ್​ ನಿಂದ ವಿಪ್ ಜಾರಿ

ಸಿಎಂ ಹೆಚ್​​.ಡಿ. ಕುಮಾರಸ್ವಾಮಿ ವಿಪ್ ಪ್ರತಿಯನ್ನು ಎಲ್ಲ ಶಾಸಕರಿಗೂ ರವಾನಿಸಿದ್ದು, ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕ ಎಚ್​​.ವಿಶ್ವನಾಥ್, ಗೋಪಾಲಯ್ಯ ಹಾಗೂ ನಾರಾಯಣಗೌಡರಿಗೂ ಕೂಡ ವಿಪ್ ನೀಡಲಾಗಿದೆ.

For All Latest Updates

TAGGED:

ABOUT THE AUTHOR

...view details