ಕರ್ನಾಟಕ

karnataka

ETV Bharat / state

ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಆಸ್ತಿ ಘೋಷಣೆ - ವಿಧಾನ ಪರಿಷತ್​ನ ಚುನಾವಣೆಗೆ

ವಿಧಾನ ಪರಿಷತ್​ನ ಚುನಾವಣೆಗೆ ಟಿಕೆಟ್​ ಪಡೆದ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ತಮ್ಮ ಆಸ್ತಿ ಘೋಷಣೆ ಮಾಡಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಆಸ್ತಿ ಘೋಷಣೆ
ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಆಸ್ತಿ ಘೋಷಣೆ

By

Published : Jun 19, 2020, 7:30 AM IST

ಬೆಂಗಳೂರು : ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅವರು ತಮ್ಮ ಆಸ್ತಿ ಘೋಷಣೆ ಮಾಡಿದ್ದು, ತಮ್ಮ ಮತ್ತು ಪತ್ನಿ ಹೆಸರಲ್ಲಿ 14.17 ಕೋಟಿ ರೂ. ಮೌಲ್ಯದ ಚರಾಸ್ತಿ, 29 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ ಅವಿಭಕ್ತ ಕುಟುಂಬದ ಹೆಸರಲ್ಲಿ 13.34 ಕೋಟಿ ರೂ. ಚರಾಸ್ತಿ ಮತ್ತು 23.11 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ತಮ್ಮ ಕೈಯಲ್ಲಿ 41 ಲಕ್ಷ ರೂ. ನಗದು, ಬ್ಯಾಂಕಿನಲ್ಲಿ 5.78 ಲಕ್ಷ ರೂ. ಠೇವಣಿ, 11.32 ಕೋಟಿ ರೂ. ಸಾಲ ನೀಡಿಕೆ, 46.32 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿ ಒಟ್ಟು 11.89 ಕೋಟಿ ರೂ. ಮೌಲ್ಯದ ಚರಾಸ್ತಿಯಿದೆ. ಇನ್ನು ಪತ್ನಿ ಬಳಿ 1.46 ಲಕ್ಷ ರೂ. ನಗದು, 54 ಸಾವಿರ ರೂ. ಠೇವಣಿ, 1.94 ಕೋಟಿ ರೂ. ಸಾಲ ನೀಡಿಕೆ, 31.84 ಲಕ್ಷ ರೂ. ಮೌಲ್ಯದ ಆಭರಣ ಸೇರಿ ಒಟ್ಟು 2.28 ಕೋಟಿ ರೂ. ಮೌಲ್ಯದ ಚರಾಸ್ತಿಯಿದೆ.

ಕೂಡು ಕುಟುಂಬದ ಹೆಸರಲ್ಲಿ 5.27 ಕೋಟಿ ರೂ ನಗದು, 92 ಸಾವಿರ ರೂ. ಠೇವಣಿ, 10.67 ಕೋಟಿ ರೂ. ಸಾಲ, 2.13 ಕೋಟಿ ರೂ. ಮೌಲ್ಯದ ವಾಹನ, 47 ಲಕ್ಷ ರೂ. ಮೌಲ್ಯದ ಆಭರಣ ಸೇರಿ ಒಟ್ಟು 13.34 ಕೋಟಿ ರೂ. ಚರಾಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.

ಚರಾಸ್ತಿ ಭಾಗದಲ್ಲಿ ತಮ್ಮ ಹೆಸರಲ್ಲಿ 2.86 ಕೋಟಿ ರೂ. ಮೌಲ್ಯದ 34.24 ಎಕರೆ ಕೃಷಿ ಜಮೀನು, 6 ಕೋಟಿ ರೂ. ಮೌಲ್ಯದ ಕೃಷಿಯೇತರ ಜಮೀನು, 6.61 ಕೋಟಿ ರೂ. ಮೌಲ್ಯದ ವಾಣಿಜ್ಯ ಕಟ್ಟಡ, 15 ಲಕ್ಷ ರೂ. ಮೌಲ್ಯದ ವಾಸದ ಮನೆ, ಪತ್ನಿ ಹೆಸರಲ್ಲಿ 1.59 ಕೋಟಿ ರೂ. ಮೌಲ್ಯದ 20.7 ಎಕರೆ ಕೃಷಿ ಭೂಮಿ, 3 ಕೋಟಿ ರೂ. ಮೌಲ್ಯದ ಕೃಷಿಯೇತರ, 6.61 ಕೋಟಿ ರೂ. ಮೌಲ್ಯದ ವಾಣಿಜ್ಯ ಕಟ್ಟಡ, 1.75 ಕೋಟಿ ರೂ. ಮೌಲ್ಯದ ಮನೆ ಇದೆ.

ಅಲ್ಲದೆ, ಒಟ್ಟು ಕುಟುಂಬದ ಹೆಸರಲ್ಲಿ 5.70 ಕೋಟಿ ರೂ. ಮೌಲ್ಯದ 2.23 ಎಕರೆ ಕೃಷಿ ಭೂಮಿ, 2.75 ಕೋಟಿ ರೂ. ಮೌಲ್ಯದ 5.25 ಎಕರೆ ಕೃಷಿಯೇತರ ಜಮೀನು, 5.50 ಕೋಟಿ ರೂ. ಮೌಲ್ಯದ 4.37 ಎಕರೆ ವಾಣಿಜ್ಯ ಪ್ರದೇಶ, 5 ಕೋಟಿ ರೂ. ಮೌಲ್ಯದ ವಾಸದ ಮನೆ ಇದೆ. ಉಳಿದಂತೆ ತಾವು 3.47 ಕೋಟಿ ರೂ. ಸಾಲ, ಅವಿಭಕ್ತ ಕುಟುಂಬದ ಹೆಸರಲ್ಲಿ 16 ಲಕ್ಷ ರೂ. ಸಾಲ ಹೊಂದಿರುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details