ಕರ್ನಾಟಕ

karnataka

ETV Bharat / state

‘ಪಾಪದ ಹಣದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿಲ್ಲ’: ಬಿಜೆಪಿ - ಪಾಪದ ಸಂಪಾದನೆಯಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿಲ್ಲ

ಸಂಕಷ್ಟದ ಸಮಯದಲ್ಲಿ ಬಿಟ್ಟಿ ಸಲಹೆ ನೀಡುವುದು, ಜನರ ದಾರಿ ತಪ್ಪಿಸುವುದು. ಇದು ಕಾಂಗ್ರೆಸ್ ಜನರಿಗೆ ಮಾಡುತ್ತಿರುವ ದ್ರೋಹ. ಭ್ರಷ್ಟಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ, ನಿಮಗೆ ನಿಜಕ್ಕೂ ಸಹಾಯ ಮಾಡುವ ಮನಸಿದ್ದರೆ ಪೊಳ್ಳು ಆರೋಪ ಮಾಡುವುದನ್ನು ಬಿಟ್ಟು ಒಂದಿಷ್ಟು ಸುಮ್ಮನಿದ್ದು ಬಿಡಿ ಎಂದು ಸಲಹೆ ನೀಡಿದೆ.

BJP
BJP

By

Published : May 14, 2021, 5:37 PM IST

Updated : May 14, 2021, 6:24 PM IST

ಬೆಂಗಳೂರು: ಜನರಿಗೆ ಉಚಿತ ಲಸಿಕೆ ಕೊಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಹೇಳಲಿ, ನಾವು ಸಹಾಯ ಮಾಡುತ್ತೇವೆ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​ಗೆ ಬಿಜೆಪಿ ತಿರುಗೇಟು ನೀಡಿದೆ.

ಡಿಕೆಶಿಯವರೇ ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದಷ್ಟು ಸುಲಭವಾಗಿ ಸಹಾಯ ಮಾಡಲು ಸಾಧ್ಯವಿಲ್ಲ. ಅಷ್ಟಕ್ಕೂ ನಿಮ್ಮ ಪಾಪದ ಸಂಪಾದನೆಯಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ರಾಜ್ಯದ ಜನತೆಗೆ ಬಂದಿಲ್ಲ. ಉಚಿತ ಲಸಿಕೆ‌ ನೀಡಲು ನಿಮ್ಮ ಅಧಿನಾಯಕಿ ಸೋನಿಯಾ ಗಾಂಧಿ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಯೋಜನೆ ರೂಪಿಸಿದ್ದೀರಾ?, ಜಗತ್ತಿನ ನಾಲ್ಕನೇ ಶ್ರೀಮಂತ ಮಹಿಳೆ ಇದುವರೆಗೂ ಕೋವಿಡ್ ಸಹಾಯ ಹಸ್ತ ಚಾಚಿಲ್ಲವೇಕೆ?, ದೆಹಲಿಯಿಂದ ಗೋವಾಕ್ಕೆ ಬಂದದ್ದಾಯಿತು, ಗೋವಾದಿಂದ ಇಟಲಿಗೋ? ಎಂದು ಟ್ವೀಟ್ ಮೂಲಕ ಹರಿಹಾಯ್ದಿದ್ದಾರೆ.

ಸಂಕಷ್ಟದ ಸಮಯದಲ್ಲಿಬಿಟ್ಟಿ ಸಲಹೆ ನೀಡುವುದು, ಜನರ ದಾರಿ ತಪ್ಪಿಸುವುದು. ಇದು ಕಾಂಗ್ರೆಸ್ ಜನರಿಗೆ ಮಾಡುತ್ತಿರುವ ದ್ರೋಹ. ಭ್ರಷ್ಟಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ, ನಿಮಗೆ ನಿಜಕ್ಕೂ ಸಹಾಯ ಮಾಡುವ ಮನಸಿದ್ದರೆ ಪೊಳ್ಳು ಆರೋಪ ಮಾಡುವುದನ್ನು ಬಿಟ್ಟು ಒಂದಿಷ್ಟು ಸುಮ್ಮನಿದ್ದು ಬಿಡಿ ಎಂದು ಸಲಹೆ ನೀಡಿದೆ.

ಇದನ್ನೂ ಓದಿ:ಕೋವಿಡ್​​​​​​ ಲಸಿಕೆ ಖರೀದಿಗಾಗಿ 100 ಕೋಟಿ ರೂ. ನೀಡಲು ರಾಜ್ಯ ಕಾಂಗ್ರೆಸ್​​​ ನಿರ್ಧಾರ

ಸರ್ಕಾರಕ್ಕೆ ಸವಾಲೆಸೆಯುವ ನೀವು, ರಾಜೀವ್ ಗಾಂಧಿ ಫೌಂಡೇಶನ್ ಖಾತೆಯಲ್ಲಿ ಲಕ್ಷಾಂತರ ಕೋಟಿ ಹಣ ಕೊಳೆಯುತ್ತಿದೆ. ನಿಮ್ಮ ಆದಾಯ ಮೀರಿದ ಆಸ್ತಿಯ ತನಿಖೆ ನಡೆಯುತ್ತಿದೆ. ಇದ್ಯಾವುದೂ ನ್ಯಾಯ ಮಾರ್ಗದ ಗಳಿಕೆಯಲ್ಲ. ಸಹಾಯದ ಹೆಸರಿನಲ್ಲೂ ಕಪ್ಪು ಬಿಳುಪು ದಂಧೆಗೆ ಇಳಿದಿದ್ದೀರಾ?, ಉಚಿತ ಲಸಿಕೆಗೆ ನಾವು ಸಹಾಯ ಮಾಡುತ್ತೇವೆ ಎಂದು ನೀವು ಹೇಳಿದಾಗಲೇ ಅತ್ತೆಯ ದುಡ್ಡನ್ನು ಅಳಿಯನಿಗೆ ದಾನ ಮಾಡುವ ಚಿಲ್ಲರೆ ಯೋಜನೆ ರೂಪಿಸುತ್ತಿರಬಹುದೆಂಬ ಶಂಕೆಯಿತ್ತು. ಈಗ 100 ಕೋಟಿ ನೀಡುವ ಘೋಷಣೆ ಮಾಡಿದ್ದಾರೆ. ಇದು ಜನರ ದಾರಿ ತಪ್ಪಿಸುವ ಕಾಂಗ್ರೆಸ್​ನ ಮತ್ತೊಂದು ಯೋಜನೆಯಷ್ಟೇ ಎಂದು ಬಿಜೆಪಿ ಕಿಡಿಕಾರಿದೆ.

Last Updated : May 14, 2021, 6:24 PM IST

ABOUT THE AUTHOR

...view details