ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸುಮ್ಮನಹಳ್ಳಿ ಹಾಗೂ ಕೆಂಗೇರಿಯಲ್ಲಿರುವ ವಿದ್ಯುತ್ ಚಿತಾಗಾರಗಳ ಕಾರ್ಯನಿರ್ವಹಣೆ ಕುರಿತು ಪಾಲಿಕೆ ಆಡಳಿತಾಧಿಕಾರಿ ತಪಾಸಣೆ ನಡೆಸಿದರು.
ಬಿಬಿಎಂಪಿ ವ್ಯಾಪ್ತಿಯ ಸುಮ್ಮನಹಳ್ಳಿಯಲ್ಲಿರುವ ವಿದ್ಯುತ್ ಚಿತಾಗಾರಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ ಅವರು, 3 ಎಕರೆ ಪ್ರದೇಶದಲ್ಲಿ ಶವಗಳ ದಹನ ಕಾರ್ಯಕ್ಕೆ 2 ಫರ್ನೆಸ್(ಯಂತ್ರ) ಗಳಿದ್ದು, ಈ ಪ್ರದೇಶದಲ್ಲಿ ಇನ್ನೂ ಸ್ಥಳಾವಕಾಶ ಇರುವುದಿಂದ ಇನ್ನೊಂದು ಫರ್ನೆಸ್‌ಅನ್ನು ನಿರ್ಮಾಣ ಮಾಡಲು ಸೂಚನೆ ನೀಡಿದರು. ಜೊತೆಗೆ ಇಲ್ಲಿ ಬರುವ ಸ್ಥಳೀಯರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿದ್ಯುತ್ ಚಿತಾಗಾರದ ಕಾರ್ಯನಿರ್ವಹಣೆ, ಪ್ರತಿನಿತ್ಯ ಎಷ್ಟು ಶವಗಳನ್ನು ದಹನ ಮಾಡಲಾಗುತ್ತಿದೆ ಹಾಗೂ ಏನೇನು ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಅಧಿಕಾರಿಯನ್ನು ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಅಭಿಯಂತರರು, ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರಕ್ಕೆ ಸಾಮಾನ್ಯ ಹಾಗೂ ಕೋವಿಡ್ ಸೇರಿ ಪ್ರತಿನಿತ್ಯ 20 ರಿಂದ 25 ಶವಗಳು ಬರುತ್ತಿತ್ತು. ಇತ್ತೀಚಿಗೆ 10 ರಿಂದ 12 ಶವಗಳು ಬರುತ್ತಿವೆ. ಶವಗಳನ್ನು ದಹನ ಮಾಡಲು 2 ಫರ್ನೆಸ್ ಗಳಿದ್ದು, ಒಂದು ಶವ ದಹನ ಮಾಡಲು 2 ಗಂಟೆ ಸಮಯಾವಕಾಶ ಬೇಕಿದೆ. ಶವಗಳನ್ನು ತಂದವರಿಗೆ ಶವಗಳನ್ನಿರಿಸಿ ಪೂಜೆ/ವಿಧಿ-ವಿಧಾನ ಮಾಡಲು ಸ್ಥಳಾವಕಾಶವಿದೆ. ಕೈ-ಕಾಲು ತೊಳೆಯಲು ನೀರಿನ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಬಂದ ಬಳಿಕ ಹೆಚ್ಚು ಶವಗಳನ್ನು ಸುಡಲಾಗುತ್ತಿದ್ದು, ಸೆಪ್ಟೆಂಬರ್ ತಿಂಗಳಲ್ಲಿ 506, ಅಕ್ಟೋಬರ್ ನಲ್ಲಿ 380, ನವೆಂಬರ್ 9 ರವರೆಗೆ 85 ಶವಗಳನ್ನು ದಹನ ಮಾಡಲಾಗಿದೆ. ಅಲ್ಲದೆ ವಿದ್ಯುತ್ ಚಿತಾಗಾರದಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಆರ್ಸಿಸಿ ಡ್ರೆನ್, ಕೂರಲು ಕುರ್ಚಿ ವ್ಯವಸ್ಥೆ, ಚಿತಾಗಾರದ ಗ್ರಿಲ್, ಬೋರ್ ವೆಲ್, ಸ್ನಾನದ ಕೊಠಡಿ, ಶೌಚಾಲಯ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಪುನರ್ ನವೀಕರಣಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಾಣಿ ಚಿತಾಗಾರ ತಪಾಸಣೆ: