ಕರ್ನಾಟಕ

karnataka

ETV Bharat / state

'ಜಾಗತಿಕ ಉನ್ನತ ಉದ್ಯೋಗದಾತ' ಎಂದು ಗುರುತಿಸಲ್ಪಟ್ಟ ಇನ್ಫೋಸಿಸ್!

ಇನ್ಫೋಸಿಸ್ ಸಂಸ್ಥೆಯನ್ನು ಯುರೋಪ್, ಮಧ್ಯಪ್ರಾಚ್ಯ, ಏಷ್ಯಾ ಪೆಸಿಫಿಕ್ ಮತ್ತು ಉತ್ತರ ಅಮೆರಿಕಾದ್ಯಂತ 'ಉನ್ನತ ಉದ್ಯೋಗದಾತ 2021' ಎಂದು ಗುರುತಿಸಲಾಗಿದೆ..

infosys
infosys

By

Published : Jan 29, 2021, 8:31 PM IST

ಬೆಂಗಳೂರು :ಉದ್ಯೋಗ ಉತ್ಕೃಷ್ಟತೆಯನ್ನು ಗುರುತಿಸಿ ಇನ್ಫೋಸಿಸ್ ಸಂಸ್ಥೆಯನ್ನು ಯುರೋಪ್, ಮಧ್ಯಪ್ರಾಚ್ಯ, ಏಷ್ಯಾ ಪೆಸಿಫಿಕ್ ಮತ್ತು ಉತ್ತರ ಅಮೆರಿಕಾದ್ಯಂತ 'ಉನ್ನತ ಉದ್ಯೋಗದಾತ 2021' ಎಂದು ಉನ್ನತ ಉದ್ಯೋಗದಾತ ಸಂಸ್ಥೆ (Top Employers Institute) ಗುರುತಿಸಿದೆ.

ಕೆಳಗಿನ ಪ್ರದೇಶಗಳಲ್ಲಿ ಉನ್ನತ ಉದ್ಯೋಗದಾತ ಜಾಗತಿಕ ಪ್ರಮಾಣೀಕರಣದೊಂದಿಗೆ ಇನ್ಫೋಸಿಸ್ ಗುರುತಿಸಲಾಗಿದೆ:

1. ಉತ್ತರ ಅಮೆರಿಕ - ಯುಎಸ್ಎ, ಕೆನಡಾ, ಮೆಕ್ಸಿಕೊ

2. ಏಷ್ಯಾ ಪೆಸಿಫಿಕ್ - ಭಾರತ, ಸಿಂಗಾಪುರ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಜಪಾನ್

3. ಮಧ್ಯಪ್ರಾಚ್ಯ - ಯುಎಇ, ಬಹ್ರೇನ್ ಮತ್ತು ಓಮನ್

4. ಯುರೋಪ್ - ಬೆಲ್ಜಿಯಂ, ನೆದರ್‌ಲ್ಯಾಂಡ್ಸ್, ಜರ್ಮನಿ, ಸ್ವೀಡನ್, ಸ್ವಿಟ್ಜರ್ಲೆಂಡ್, ರೊಮೇನಿಯಾ, ಫ್ರಾನ್ಸ್, ಐರ್ಲೆಂಡ್ ಮತ್ತು ಯುನೈಟೆಡ್ ಕಿಂಗ್‌ಡಮ್​

"ಈ ವರ್ಷದ ಪ್ರಮಾಣೀಕರಣವು ನಮ್ಮ ಜನರನ್ನು ಬೆಂಬಲಿಸುವ ನಮ್ಮ ಸಮರ್ಪಣೆ ಬಲಪಡಿಸುತ್ತದೆ. ನ್ಯಾಯಸಮ್ಮತತೆ, ಸಮಗ್ರತೆ, ಪಾರದರ್ಶಕತೆ ಮತ್ತು ನಾಯಕತ್ವವನ್ನು ಉದಾಹರಣೆಯಾಗಿ ಮುನ್ನಡೆಸುವ ಕೆಲಸದ ಸ್ಥಳ ಪೋಷಿಸುವುದು ನಮ್ಮ ಗುರಿ. ಇನ್ಫೋಸಿಸ್ ನಿರಂತರ ಪರಾನುಭೂತಿಯೊಂದಿಗೆ ನೌಕರರಿಗೆ ಅನುಭವಗಳನ್ನು ಸೃಷ್ಟಿಸುತ್ತಿದೆ. ಅದು ವ್ಯಕ್ತಿಯ ಸಾಮರ್ಥ್ಯ ತಲುಪಲು ಸಹಾಯ ಮಾಡುತ್ತದೆ" ಎಂದು ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ರಾವ್ ಹೇಳಿದರು.

ಈ ಪ್ರಮಾಣೀಕರಣವು ಇನ್ಫೊಸಿಸ್ ಪರಿಸರ, ಸಾಮಾಜಿಕ ಮತ್ತು ಆಡಳಿತ (ಇಎಸ್​ಜಿ) ದೃಷ್ಟಿಗೆ ಉತ್ತಮ ದರ್ಜೆಯ ಉದ್ಯೋಗಿ ಅನುಭವವನ್ನು ಒದಗಿಸುವುದಾಗಿ ದೃಢಪಡಿಸಿದೆ.

"ಸವಾಲಿನ ವರ್ಷದ ಹೊರತಾಗಿಯೂ, ನಮ್ಮ ಜಾಗತಿಕ ಉನ್ನತ ಉದ್ಯೋಗದಾತರು ತಮ್ಮ ಶಕ್ತಿ ಪ್ರದರ್ಶಿಸುತ್ತಲೇ ಇದ್ದಾರೆ. ಜಾಗತಿಕ ಉನ್ನತ ಉದ್ಯೋಗದಾತರಾಗಿ, ಇನ್ಫೋಸಿಸ್ ಹಲವಾರು ದೇಶಗಳಲ್ಲಿ ತಮ್ಮ ಉದ್ಯೋಗಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಮರ್ಪಣೆ ತೋರಿಸಿದೆ ಮತ್ತು ಅವರ ಜಾಗತಿಕ ಪ್ರಮಾಣೀಕರಣಕ್ಕಾಗಿ ನಾವು ಅವರನ್ನು ಅಭಿನಂದಿಸುತ್ತೇವೆ." ಎಂದು ಉನ್ನತ ಉದ್ಯೋಗದಾತ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವಿಡ್ ಪ್ಲಿಂಕ್ ತಿಳಿಸಿದ್ದಾರೆ.

ಉನ್ನತ ಉದ್ಯೋಗದಾತ ಸಂಸ್ಥೆಯು 120 ದೇಶಗಳ ಸುಮಾರು 1700 ಸಂಸ್ಥೆಗಳನ್ನು ಪ್ರಮಾಣೀಕರಿಸಿದೆ. ಈ ಪ್ರಮಾಣೀಕೃತ ಉನ್ನತ ಉದ್ಯೋಗದಾತರು ಜಾಗತಿಕವಾಗಿ 7 ಮಿಲಿಯನ್ ಉದ್ಯೋಗಿಗಳ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತಾರೆ.

ABOUT THE AUTHOR

...view details