ಕರ್ನಾಟಕ

karnataka

ETV Bharat / state

ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿ... ಈಟಿವಿ ಭಾರತ ಇಂಪ್ಯಾಕ್ಟ್​ - KN_BNG_20_01_etvbharath_impact_script_sowmya_7202707

ಜನವರಿ ತಿಂಗಳಿಂದಲೂ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗೆ ಹಣ ಕೊಡದೆ ಉಳಿಸಿಕೊಂಡಿದ್ದ ಬಾಕಿ ಬಿಲ್ ಪಾವತಿಗೆ ಬಿಬಿಎಂಪಿ ಮುಂದಾಗಿದೆ. ಈಟಿವಿ ಭಾರತ ವರದಿಗೆ ಸ್ಪಂದಿಸಿರುವ ಬಿಬಿಎಂಪಿ ನಾಳೆ ಸಂಜೆಯೊಳಗೇ 18 ಕೋಟಿ ರೂಪಾಯಿ ಬಾಕಿ ಬಿಲ್ ಪಾವತಿಸಲಿದೆ.

ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರ ಬಾಕಿ ಬಿಲ್ ಪಾವತಿ

By

Published : May 20, 2019, 8:50 PM IST

Updated : May 20, 2019, 9:51 PM IST

ಬೆಂಗಳೂರು: ಜನವರಿ ತಿಂಗಳಿಂದಲೂ ಎರಡೂ ಗುತ್ತಿಗೆ ಸಂಸ್ಥೆಗಳಿಗೆ ಹಣ ಕೊಡದೆ ಸರ್ಕಾರ ಹಾಗೂ ಬಿಬಿಎಂಪಿ ನಿರ್ಲಕ್ಷ್ಯ ವಹಿಸಿದ್ದವು. ಈ ಕುರಿತು 'ಈಟಿವಿ ಭಾರತ' ಬಿತ್ತರಿಸಿದ್ದ ವಿಸ್ತೃತ ವರದಿಯಿಂದ ಬಿಬಿಎಂಪಿ ಎಚ್ಚೆತ್ತುಕೊಂಡಿದೆ.

ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿ

ಹೌದು, ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಗೆ ಬಿಬಿಎಂಪಿ ಮುಂದಾಗಿದ್ದು, ಗುತ್ತಿಗೆದಾರರು ನಿಟ್ಟುಸಿರು ಬಿಡುವಂತಾಗಿದೆ.

ದಾಖಲೆಗಳ ಸಮೇತ, ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗಿರುವ ಹಣದ ಬಿಕ್ಕಟ್ಟಿನ ಬಗ್ಗೆ ಹಾಗೂ ಇಂದಿರಾ ಕ್ಯಾಂಟೀನ್ ಮುಂದುವರಿಸಲು ಇರುವ ತೊಡಕುಗಳ ಬಗ್ಗೆ ವಿವರವಾದ ವರದಿಯನ್ನು ನಮ್ಮ 'ಈಟಿವಿ ಭಾರತ' ವೆಬ್​ ಚಾನಲ್​ನಲ್ಲಿ ವರದಿ ಬಿತ್ತರವಾಗಿತ್ತು. ಇದರಿಂದ ಎಚ್ಚೆತ್ತ ಬಿಬಿಎಂಪಿಯು ಗುತ್ತಿಗೆದಾರರ ಬಿಲ್ ಪಾವತಿಗೆ ಮುಂದಾಗಿದೆ. ನಾಳೆ ಸಂಜೆಯೊಳಗೆ 18 ಕೋಟಿ ರೂಪಾಯಿ ಬಾಕಿ ಬಿಲ್ ಪಾವತಿ ಮಾಡಲಾಗುವುದು. ಇಂದು ಪ್ರಕ್ರಿಯೆ ಆರಂಭವಾಗಿದೆ ಎಂದು ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ಈಟಿವಿ ಭಾರತ್ ಗೆ ತಿಳಿಸಿದ್ದಾರೆ.

ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರ ಬಾಕಿ ಬಿಲ್ ಪಾವತಿ

ಜನವರಿ, ಫೆಬ್ರವರಿ, ಮಾರ್ಚ್, ಎಪ್ರಿಲ್ ತಿಂಗಳ ಬಾಕಿ ಬಿಲ್​ನಲ್ಲಿ ಅರ್ಧದಷ್ಟು ಬಿಲ್ ಪಾವತಿಸಲು ಬಿಬಿಎಂಪಿ ನಿರ್ಧರಿಸಿದ್ದರಿಂದ ಗುತ್ತಿಗೆದಾರರು ನಿಟ್ಟುಸಿರು ಬಿಟ್ಟಿದ್ದಾರೆ. ಇಂದಿರಾ ಕ್ಯಾಂಟೀನ್ ವೆಚ್ಚದಲ್ಲಿ ಸರ್ಕಾರ ನೀಡಬೇಕಾದ ನಿರ್ವಹಣೆಯ ಅನುದಾನವನ್ನು ಬಿಬಿಎಂಪಿಯೇ ಭರಿಸುತ್ತಿದೆ. ಮೈತ್ರಿ ಸರ್ಕಾರದ ಬಜೆಟ್​ನಲ್ಲೂ ಅನುದಾನ ಇಟ್ಟಿಲ್ಲ. ಆದ್ರೆ ಸರ್ಕಾರದ ಯೋಜನೆಯನ್ನು ಮುಂದುವರಿಸುವಂತೆ, ಬಜೆಟ್​ನಲ್ಲಿ ಸೇರಿಸುವ ಬಗ್ಗೆ ಪತ್ರ ಬರೆದಿದ್ದೇವೆ. ಸರ್ಕಾರ ಸ್ಪಂದಿಸುವ ನಿರೀಕ್ಷೆಯಿದೆ ಎಂದು ಆಯುಕ್ತರು ತಿಳಿಸಿದರು. ಇನ್ನು ವರದಿಗೆ ಸ್ಪಂದಿಸಿರುವ ಬಿಬಿಎಂಪಿ ಆಯುಕ್ತರಿಗೆ ಈಟಿವಿ ಭಾರತ ಕಡೆಯಿಂದ ಧನ್ಯವಾದ.

ಇಂದಿರಾ ಕ್ಯಾಂಟೀನ್​ಗೆ ಹಣವಿಲ್ಲ... ನಿರ್ಲಕ್ಷ್ಯಕ್ಕೊಳಗಾಯ್ತಾ ಸಿದ್ದು ಮಹತ್ವಾಕಾಂಕ್ಷಿ ಯೋಜನೆ!?

Last Updated : May 20, 2019, 9:51 PM IST

For All Latest Updates

TAGGED:

ABOUT THE AUTHOR

...view details