ದೇವನಹಳ್ಳಿ: ಕೊಕೇನ್ ತುಂಬಿದ 64 ಕ್ಯಾಪ್ಸೂಲ್ಗಳನ್ನ ಹೊಟ್ಟೆಯೊಳಗೆ ಮರೆಮಾಚಿ ಕಳ್ಳಸಾಗಣೆಕೆಗೆ ಯತ್ನಸಿದ್ದ ಆಫ್ರಿಕಾ ಮೂಲದ ವ್ಯಕ್ತಿಯನ್ನು ದೇವನಹಳ್ಳಿ ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿಯ ಹೊಟ್ಟೆಯಲ್ಲಿ 11 ಕೋಟಿ ಮೌಲ್ಯದ 1 ಕೆಜಿ ತೂಕದ ಕೊಕೇನ್ ಪತ್ತೆಯಾಗಿದೆ. ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಥಿಯೋಪಿಯಾದಿಂದ ಪ್ರಯಾಣಿಕ ಬಂದಿದ್ದು, ಸಂಶಯದ ಮೇಲೆ ಆದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು (ಡಿಆರ್‌ಐ) ತಪಾಸಣೆ ನಡೆಸಿದ್ದಾಗ ಮಾದಕ ದ್ರವ್ಯ ಕಳ್ಳಸಾಗಣಿಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆರೋಪಿ ಆಫ್ರಿಕಾದ ನೈಜಿರಿಯನ್ ಪ್ರಜೆಯಾಗಿದ್ದು, ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆಗೆಂದು ವೀಸಾ ಪಡೆದುಕೊಂಡು ಬೆಂಗಳೂರಿಗೆ ಬಂದಿದ್ದ.
ಆಹಾರ ನೀರು ಸೇವಿಸಲು ನಿರಾಕರಿಸದ ಸ್ಮಗ್ಲರ್ :ಡಿಆರ್ಐನ ತನಿಖಾಧಿಕಾರಿಗಳು ವಿದೇಶಿ ಪ್ರಯಾಣಿಕರ ಪ್ರೊಫೈಲ್ ಅನ್ನು ಪರಿಶೀಲನೆ ನಡೆಸುವ ವೇಳೆ ಬಂಧಿತನ ಮೇಲೆ ಅನುಮಾನ ಬಂದಿದೆ, ಆತನ ನಡೆಯಿಂದ ಅನುಮಾನಗೊಂಡ ವಿಚಾರಣೆಗೆಂದು ಆತನನ್ನ ಕರೆದುಕೊಂಡು ಹೋದ ತನಿಖಾಧಿಕಾರಿಗಳು ಅವನಿಗೆ ತಿನ್ನಲು ಆಹಾರ ಕುಡಿಯಲು ನೀರು ಕೊಟ್ಟಿದ್ದಾರೆ. ಆದರೆ, ಆತ ನೀರು ಮತ್ತು ಆಹಾರವನ್ನು ಸೇವಿಸಲು ನಿರಾಕರಿಸಿದ್ದಾನೆ. ಆಹಾರ ಸೇವಿಸಿದರೆ ತನ್ನ ದೇಹದೊಳಗಿನ ಡ್ರಗ್ ಕ್ಯಾಪ್ಸೂಲ್‌ಗಳು ಸಿಡಿದು ಮಾರಣಾಂತಿಕ ಪರಿಣಾಮ ಉಂಟುಮಾಡಬಹುದು ಎಂದು ಭಯಪಟ್ಟು ಆತ ಊಟ ಮಾಡಲು ನಿರಾಕರಿಸಿದ್ದ ಎಂದು ತಿಳಿದು ಬಂದಿದೆ.
ಇದರಿಂದ ಸಂಶಯಗೊಂಡ ತನಿಖಾಧಿಕಾರಿಗಳು ಸ್ಮಗ್ಲಿಂಗ್ ಮಾಡುತ್ತಿದ್ದಾನೆಂದು ಖಚಿತ ಪಡಿಸಿಕೊಂಡು ಆಸ್ಪತ್ರೆಗೆ ಕರೆದೊಯ್ದು ಎಕ್ಸ್-ರೇ ಮಾಡಿಸಿದ್ದಾರೆ. ಬಳಿಕ ಅವನ ಹೊಟ್ಟೆಯಲ್ಲಿ 64 ಕ್ಯಾಪ್ಸೂಲ್‌ಗಳು ಇರುವುದು ಕಂಡು ಬಂದಿದೆ, ಆತನ ಹೊಟ್ಟೆಯಲ್ಲಿದ್ದ ಕ್ಯಾಪ್ಸೂಲ್ಗಳನ್ನ ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ. ಬೆಂಗಳೂರು ಡಿಆರ್‌ಐ ಅಧಿಕಾರಿಗಳು ಆರೋಪಿಯನ್ನ ಬಂಧಿಸಿ ಕೇಂದ್ರ ಕಾರಾಗೃಹಕ್ಕೆ ಕಳಿಸಿದ್ದಾರೆ.