ಕರ್ನಾಟಕ

karnataka

ETV Bharat / state

ಹುಡುಗನ ನೋಡದೆ, ಅವರಪ್ಪನನ್ನು ನೋಡಿ ಹೆಣ್ಣು ಕೊಡೋಕೆ ಆಗುತ್ತಾ? ಮೋದಿ ನೋಡಿ ಮತಹಾಕಿ ಎಂದವರಿಗೆ ಇಬ್ರಾಹಿಂ ಟಾಂಗ್ - ಬಿಜೆಪಿ ಪ್ರಣಾಳಿಕೆ

ರಾಜ್ಯದೆಲ್ಲೆಡೆ ಕಾಂಗ್ರೆಸ್​ಗೆ ಅನುಕೂಲಕರವಾಗುವ ಸ್ಥಿತಿ ಇದೆ. ಕಳೆದ ಸಾರಿ ನಾವು ಕಳೆದುಕೊಂಡ ಶೇ. 70-80 ರಷ್ಟು ಮತ ಹೆಚ್ಚಾಗಿ ಬೀಳಲಿದೆ ಎಂದು ಮಾಜಿ ಸಚಿವ ಸಿ ಎಂ ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ.

ಸಿ ಎಂ ಇಬ್ರಾಹಿಂ

By

Published : Apr 9, 2019, 9:22 PM IST

Updated : Apr 10, 2019, 5:26 PM IST

ಬೆಂಗಳೂರು:ಈ ಬಾರಿರಾಜ್ಯದಲ್ಲಿ ಕಾಂಗ್ರೆಸ್​ಗೆ ಪೂರಕ ವಾತಾವರಣ ಇದೆ. ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆಗಿಂತ ಹೆಚ್ಚು ಸ್ಥಾನಗಳನ್ನು ಪಕ್ಷ ಗೆಲ್ಲಲಿದೆ ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಂ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಕಾಂಗ್ರೆಸ್​ಗೆ ಅನುಕೂಲಕರವಾಗುವ ಸ್ಥಿತಿ ಇದ್ದು, ಸಂತೋಶದಾಯಕ ವಾತಾವರಣ ಇದೆ. ಕಳೆದ ಸಾರಿ ನಾವು ಕಳೆದುಕೊಂಡ ಶೇ. 70-80 ರಷ್ಟು ಮತ ಹೆಚ್ಚಾಗಿ ಬೀಳಲಿದೆ. ಇದೇ ರಾಜಕೀಯ ವಿರೋಧಿಗಳನ್ನು ಟೀಕಿಸಿದ ಅವರು, ಬಿಜೆಪಿಯವರಿಗೆ ಅಂಬರೀಶ್ ಪತ್ನಿ ಮೇಲಿರುವ ಅನುಕಂಪ ಅನಂತ್​ ಕುಮಾರ್ ಪತ್ನಿ ಏಕಿಲ್ಲ ಎಂದು ಪ್ರಶ್ನಿಸಿದರು. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಸುಮಲತಾರವರ ಹಿಂದೆ ಚಿತ್ರನಟರಿದ್ದಾರೆ. ಯಾವುದೇ ಸಿನಿಮಾ ಆದರೂ ಎರಡು ವಾರ ಮೂರು ವಾರ ಓಡುತ್ತದೆ ಎಂದು ವ್ಯಂಗ್ಯವಾಡಿದರು.

ಸಾಧನೆ ಹೇಳಿಲ್ಲ
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಆ ಪಕ್ಷದ ಸಾಧನೆ ಬಗ್ಗೆ ಏನೂ ಹೇಳಿಲ್ಲ. ಯಾವುದೇ ಮಾಹಿತಿ, ಲೆಕ್ಕ ಕೊಡದೇ ಕೇವಲ ಕಾಶ್ಮೀರ ವಿಚಾರ ಪ್ರಸ್ತಾಪಿಸಿ ಸುಮ್ಮನಾಗಿದೆ. ಹಿಂದುತ್ವದ ವಿಚಾರದ ಬದಲು ಭಾರತೀಯತೆಯ ತತ್ವದ ಮೇಲೆ ಚುನಾವಣೆ ಎದುರಿಸಿ. ಸೈನಿಕರ ತ್ಯಾಗ, ಬಲಿದಾನದ ಹೆಸರಿನ ಮೇಲೆ ಮತ ಪಡೆಯುವುದು ಸರಿಯಲ್ಲ. ಸೀಟು ಪಡೆಯಲು ನೀವು ಏನು ಮಾಡುವುದಕ್ಕೂ ಸಿದ್ಧವಿದ್ದೀರಿ ಎಂದು ಅವರು ಬಿಜೆಪಿ ನಾಯಕರನ್ನು ಟೀಕಿಸಿದರು. ಕರ್ನಾಟಕದ ಪ್ರಬುದ್ಧ ಜನ ಇದನ್ನೆಲ್ಲಾ ಅರ್ಥ ಮಾಡಿಕೊಂಡು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಾರೆ ಎಂದು ಇದೇ ವೇಳೆ ಅವರು ಹೇಳಿದರು.

ಮೋದಿ, ದೇವೇಗೌಡರಿಗೆ ಸಮವೇ?
ನರೇಂದ್ರ ಮೋದಿಯವರು ಆಚಾರ, ವಿಚಾರ, ನಡವಳಿಕೆ ಸೇರಿದಂತೆ ಯಾವುದಕ್ಕೆ ದೇವೇಗೌಡರಿಗೆ ಸಮ. ಮೋದಿ ನಾಲ್ಕುವರೆ ವರ್ಷದ ಅಧಿಕಾರಕ್ಕೂ, ದೇವೇಗೌಡರ 11 ತಿಂಗಳ ಅಧಿಕಾರದಲ್ಲಿ ಹೋಲಿಸಿದರೆ ಮೋದಿ ನಗಣ್ಯ. ಬಿಜೆಪಿಯವರು ದೇವೇಗೌಡರದ್ದು ಅಪ್ಪ, ಮಕ್ಕಳ ಪಕ್ಷ ಅಂತ ಹೇಳುತ್ತಿದ್ದಾರೆ. ಮಾವಿನ ಮರದಿಂದ ಮಾವೇ ಬರಬೇಕು, ಬೇವು ಬರಬಾರದು ಎಂದರು.

ಮಡಿವಾಳರಿಗೆ ಕ್ಷಮೆ ಕೋರುತ್ತೇನೆ :
ಸಮಾರಂಭವೊಂದರಲ್ಲಿ ಮಡಿವಾಳ ಸಮಾಜಕ್ಕೆ ಅಗಸ ಅಂತಾ ಪದಬಳಕೆಗೆ ಮಾಡಿರುವುದಕ್ಕೆ ಇಬ್ರಾಹಿಂ ಬೇಷರತ್ ಕ್ಷಮೆಯಾಚಿಸಿದರು.

ಕೋಲಾರದಲ್ಲಿ ಕಾಂಗ್ರೆಸ್ ಗೆಲ್ಲುತ್ತೆ :
ಕೋಲಾರದಲ್ಲಿ ಕೆ.ಹೆಚ್ ಮುನಿಯಪ್ಪ ಅದೃಷ್ಟವಿದೆ. ಅವರು ಅಲ್ಲಿ ಏಳು ಸಲ ಗೆದ್ದಿದ್ದಾರೆ. ಎಂಟನೇ ಸಾರಿ ಗೆದ್ದರೆ ದೇಶದಲ್ಲೇ ದಾಖಲೆಯಾಗುತ್ತದೆ ಎಂದು ಹೇಳಿದರು. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿ.ಕೆ ಹರಿಪ್ರಸಾದ್ ಪರಕಾಣದ ಕೈಗಳು ಕೆಲಸ ಮಾಡುತ್ತಿವೆ. ಬಿಜೆಪಿಯವರು ಅಭ್ಯರ್ಥಿ ನೋಡಬೇಡಿ ಮೋದಿ ನೋಡಿ ಮತ ಕೊಡಿ ಎನ್ನುತ್ತಿದ್ದಾರೆ. ಹುಡುಗನನ್ನು ನೋಡದೇ ಹೆಣ್ಣು ಕೊಡೊ ಬದಲು ಅವರಪ್ಪನನ್ನು ನೋಡಿ ಹೆಣ್ಣು ಕೊಡೋಕೆ ಆಗುತ್ತಾ ಎಂದು ವ್ಯಂಗ್ಯವಾಡಿದರು. ಅಡ್ವಾಣಿ ಎಂಥ ದೊಡ್ಡ ನಾಯಕ, ಅಂಥವರನ್ನೇ ಮೂಲೆ ಗುಂಪಾಗಿಸಿದ್ದಾರೆ. ಅವರು ಬಿಜೆಪಿಯವರಾಗಿದ್ರೂ ಗುಣಕ್ಕೆ ಮತ್ಸರವಿಲ್ಲ. ಅವರ ಜತೆ 18 ತಿಂಗಳು ಜೈಲಲ್ಲಿದ್ದೆ ನನಗೆ ಗೊತ್ತು ಅವರೇನು ಅಂತಾ? ಆದರೆ ಮೋದಿ ಅಹಂ ಬ್ರಹ್ಮಾಸ್ಮಿ ಅನ್ನೋ ರೀತಿ ಆಡುತ್ತಿದ್ದಾರೆ. ತುರ್ತು ಪರಿಸ್ಥಿತಿ ಇಲ್ಲದಿದ್ದರೂ ಅಂತಹ ವಾತಾವರಣ ದೇಶದಲ್ಲಿದೆ ಎಂದು ಕೇಂದ್ರ ಸರ್ಕಾರ ಹಾಗು ನಾಯಕರನ್ನು ಟೀಕಿಸಿದರು.

Last Updated : Apr 10, 2019, 5:26 PM IST

ABOUT THE AUTHOR

...view details