ಕರ್ನಾಟಕ

karnataka

ETV Bharat / state

ಚೇತರಿಸಿಕೊಂಡ ಸಿದ್ದರಾಮಯ್ಯ.. ನಾಳೆಯಿಂದ ಮತ್ತೆ ಪಾದಯಾತ್ರೆಗೆ ಸಜ್ಜು

ಜ್ವರ ಜಾಸ್ತಿ ಆಗಿದ್ದರಿಂದ ಬೆಂಗಳೂರಿಗೆ ವಾಪಸ್ ಬಂದಿದ್ದೆ. ಈಗ ಟ್ರೀಟ್ಮೆಂಟ್ ಪಡೆದಿದ್ದೇನೆ. ನಾಳೆಯಿಂದ ಮತ್ತೆ ಪಾದಯಾತ್ರೆಗೆ ಹೋಗುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ನಾಳೆ ಬೆಳಗ್ಗೆ ಪಾದಯಾತ್ರೆಗೆ ಹೋಗುತ್ತೇನೆ
ನಾಳೆ ಬೆಳಗ್ಗೆ ಪಾದಯಾತ್ರೆಗೆ ಹೋಗುತ್ತೇನೆ

By

Published : Jan 10, 2022, 7:26 PM IST

Updated : Jan 10, 2022, 7:47 PM IST

ಬೆಂಗಳೂರು: ಅನಾರೋಗ್ಯದಿಂದಾಗಿ ಮೇಕೆದಾಟು ಪಾದಯಾತ್ರೆಯನ್ನು ಅರ್ಧದಲ್ಲೇ ಬಿಟ್ಟು ಬೆಂಗಳೂರಿಗೆ ವಾಪಸಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದು ಸಾಹಿತಿ ಚಂಪಾ ಅಂತಿಮ ದರ್ಶನ ಪಡೆಯಲು ಸಾಹಿತ್ಯ ಪರಿಷತ್ತಿಗೆ ಆಗಮಿಸಿದ್ದರು.

ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಈ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಜ್ವರ ಜಾಸ್ತಿ ಆಗಿದ್ದರಿಂದ ಬೆಂಗಳೂರಿಗೆ ನಿನ್ನೆ ವಾಪಸ್ ಬಂದಿದ್ದೆ. ಈಗ ಟ್ರೀಟ್ಮೆಂಟ್ ಪಡೆದಿದ್ದೇನೆ. ನನಗೆ ಅಂತ ಎಲ್ಲರೂ ಕಾಯ್ತಾ ಇದಾರೆ. ನಾನು ಪಾದಯಾತ್ರೆಗೆ ಹೋಗ್ಬೇಕು ಅಂತ ಅನ್ಕೊಂಡಿದೀನಿ. ಆದ್ರೆ ಈಗ ಆಗೋದಿಲ್ಲ. ನಾಳೆ ಪಾದಯಾತ್ರೆಗೆ ಹೋಗ್ತೇನೆ ಎಂದು ತಿಳಿಸಿದರು.

ನಾಳೆಯಿಂದ ಮತ್ತೆ ಪಾದಯಾತ್ರೆಗೆ ಸಜ್ಜು

ಇದನ್ನೂ ಓದಿ: ಕಲಬುರಗಿಯಲ್ಲಿ ಬೆಚ್ಚಿಬೀಳಿಸುವ ಘಟನೆ.. ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ!

ನಮ್ಮ ಮೇಲೆ ಎಫ್​ಐಆರ್​ ಹಾಕಿದ್ದಾರೆ. ಅವರು ಏನೇನು ಕ್ರಮ ಕೈಗೊಳ್ತಾರೋ ಅದನ್ನ ಮಾಡ್ಲಿ. ಕೋವಿಡ್​​ಗೆ ನಾವ್ಯಾಕೆ ಕಾರಣ ಆಗ್ತಿವಿ? ನಾವು ಎಲ್ಲಾ ಮುಂಜಾಗ್ರತ ಕ್ರಮ ತೆಗೆದುಕೊಳ್ತಾ ಇದ್ದೀವಿ. ಲಾಕ್​ಡೌನ್ ಮಾಡೋದು ಸರ್ಕಾರದ ತೀರ್ಮಾನ. ಅದು ನಮ್ಮ ತೀರ್ಮಾನ ಅಲ್ಲ. ಲಾಕ್ ಡೌನ್ ಮಾಡಿದ್ರೆ ಅವರೇ ಜವಾಬ್ದಾರಿ ಆಗ್ತಾರೆ. ಕಾರ್ಮಿಕರಿಗೆ, ಬಡವರಿಗೆ ಎಲ್ಲಾ ಬದುಕೋಕೆ ದಾರಿ ಮಾಡಿ ಕೊಟ್ಟು, ಆಗ ಬೇಕಿದ್ರೆ ಲಾಕ್​ಡೌನ್​ ಮಾಡ್ಲಿ. ಎಷ್ಟೋ ಜನ ಡ್ರೈವರ್ಸ್ ಇದ್ದಾರೆ, ಬೀದಿ ವ್ಯಾಪಾರಿಗಳು ಇದ್ದಾರೆ. ಹೀಗೆ ಎಲ್ಲಾ ದುಡಿಯುವ ವರ್ಗಕ್ಕೆ ದಾರಿ ಮಾಡಿಕೊಡ್ಲಿ. ಇವರೆಲ್ಲರಿಗೂ ಒಂದು ದಾರಿ ಮಾಡ್ಕೊಟ್ಟು ಲಾಕ್ ಡೌನ್ ಮಾಡ್ಲಿ, ಇಲ್ಲಾ ಅಂದ್ರೆ ಲಾಕ್ ಡೌನ್ ಮಾಡಬಾರ್ದು ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದರು.

Last Updated : Jan 10, 2022, 7:47 PM IST

For All Latest Updates

TAGGED:

ABOUT THE AUTHOR

...view details