ಬೆಂಗಳೂರು:ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಾನು ಕೂಡಾ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳಿದರು. ಕೇಂದ್ರದ ನಾಯಕರು ಏನೇ ತೀರ್ಮಾನ ಮಾಡಿದ್ರೂ, ಅದಕ್ಕೆ ನಾನು ಬದ್ಧನಿರ್ತೇನೆ, ಪಕ್ಷದ ಶಾಸಕರ ಅಭಿಪ್ರಾಯ ಸಂಗ್ರಹ ಸಂಪ್ರದಾಯ ಇದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲೆಕ್ಷನ್ ಅಗಲ್ಲ, ಸೆಲೆಕ್ಷನ್ ಅಗಲಿದೆ ಎಂದರು.
ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ: ಕೆ.ಎಸ್. ಈಶ್ವರಪ್ಪ - ಮುಖ್ಯಮಂತ್ರಿ ಬದಲಾವಣೆ,
ನಾನು ಕೂಡಾ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಮಂತ್ರಿ ಸ್ಥಾನ ಬಿಟ್ಟು, ಪಕ್ಷ ಸಂಘಟನೆ ಮಾಡು ಅಂದ್ರೆ ಸಂತೋಷದಿಂದ ಪಕ್ಷ ಸಂಘಟನೆ ಮಾಡ್ತೇನೆ. ಹೈಕಮಾಂಡ್ನಿಂದ ಏನೇ ತೀರ್ಮಾನ ಬಂದ್ರೂ ಅದಕ್ಕೆ ನಾನು ಬದ್ಧವಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಯಡಿಯೂರಪ್ಪ ಅವರಿಗೆ ಯಡಿಯೂರಪ್ಪರೇ ಸಾಟಿ. ಅವರನ್ನು ಮತ್ತೊಬ್ಬರಿಗೆ ಹೋಲಿಕೆ ಮಾಡೋಕೆ ಸಾಧ್ಯ ಇಲ್ಲ. ಸ್ವಾಮೀಜಿಗಳ ಮಾತು ಬೇಸರದಿಂದ ಬಂದ ನುಡಿಗಳು. ಬಿಎಸ್ವೈ ಭೇಟಿ ನಂತರ ನನ್ನ ಮನೆಗೂ ಬಂದಿದ್ದರು. ಆ ಸಂದರ್ಭದಲ್ಲಿ ಬಿಎಸ್ವೈ ಇಲ್ಲದಿದ್ದರೆ ಪಕ್ಷ ಸರ್ವನಾಶ ಎಂಬ ಸ್ವಾಮೀಜಿಗಳ ಮಾತನ್ನು ಪ್ರಶ್ನಿಸಿದೆ. ನಿಮ್ಮ ಪ್ರಕಾರ ಕಾಂಗ್ರೆಸ್ ಅಥವಾ ಜೆಡಿಎಸ್ ಅಧಿಕಾರಕ್ಕೆ ಬರಬೇಕೇ? ಇದೇ ನಿಮ್ಮ ಅಭಿಪ್ರಾಯವೇ ಎಂದು ಸ್ವಾಮೀಜಿಗಳಿಗೆ ನಾನು ಪ್ರಶ್ನಿಸಿದೆ. ಬಳಿಕ ಸರ್ವನಾಶ ಎಂಬ ಹೇಳಿಕೆ ವಾಪಸ್ ಪಡೆಯಲು ಸ್ವಾಮೀಜಿಗಳಿಗೆ ಹೇಳಿದ್ದೆ ಎಂದು ಈಶ್ವರಪ್ಪ ತಿಳಿಸಿದರು.
ಯುವಕರಿಗೆ ಆದ್ಯತೆ ಕೊಡಬೇಕು ಅನ್ನೋದು ಒಳ್ಳೆಯ ನಿರ್ಧಾರ. ಅದಕ್ಕೆ ನನ್ನ ಸಂಪೂರ್ಣ ಬೆಂಬಲ ಇರುತ್ತೆ ಎಂದರು. ಸಂಪುಟದಿಂದ ಹಿರಿಯರನ್ನು ಕೈ ಬಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಮಂತ್ರಿ ಸ್ಥಾನ ಬಿಟ್ಟು, ಪಕ್ಷ ಸಂಘಟನೆ ಮಾಡು ಅಂದ್ರೆ ನಾನು ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ. ಹೈಕಮಾಂಡ್ನಿಂದ ಏನೇ ತೀರ್ಮಾನ ಬಂದ್ರೂ ಅದಕ್ಕೆ ನಾನು ಬದ್ಧ ಎಂದು ಸ್ಪಷ್ಟಪಡಿಸಿದರು.