ಬೆಂಗಳೂರು:ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದ ಮುಂದೆ ವ್ಯಕ್ತಿಯೊಬ್ಬ ಬ್ಯಾನರ್ ಕಟ್ಟಿ ಸಿಎಂ ಅವರನ್ನು ಭೇಟಿಯಾಗಲು ಧರಣಿ ನಡೆಸಲು ಮುಂದಾದ ವೇಳೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಬ್ಯಾನರ್ ಕಟ್ಟಿ ಬಿಎಸ್ವೈ ಭೇಟಿಗೆ ಪಟ್ಟು: ಸಿಎಂ ಮನೆ ಮುಂದೆ ವ್ಯಕ್ತಿಯಿಂದ ಹೈಡ್ರಾಮಾ!
ಮಂಜುನಾಥ್ ಎಂಬ ವ್ಯಕ್ತಿ ಬ್ಯಾನರ್ ಕಟ್ಟಿ ಸಿಎಂ ಭೇಟಿಗೆ ಪಟ್ಟು ಹಿಡಿದ ವ್ಯಕ್ತಿ. ಈತ ಗೃಹ ಕಚೇರಿ ಕೃಷ್ಣಾದ ಮುಂದೆ ಸಿಎಂ ಬಿಎಸ್ವೈಗೆ ವಾರ್ನಿಂಗ್ ಇರುವ ಬ್ಯಾನರ್ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಮಂಜುನಾಥ್ ಎಂಬ ವ್ಯಕ್ತಿ ಬ್ಯಾನರ್ ಕಟ್ಟಿ ಸಿಎಂ ಭೇಟಿಗೆ ಪಟ್ಟು ಹಿಡಿದ ವ್ಯಕ್ತಿ. ಈತ ಗೃಹ ಕಚೇರಿ ಕೃಷ್ಣಾದ ಮುಂದೆ ಸಿಎಂ ಬಿಎಸ್ವೈಗೆ ವಾರ್ನಿಂಗ್ ಇರುವ ಬ್ಯಾನರ್ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಯೇಸು ಕಡೆಯಿಂದ ನಾನು ಬಿಎಸ್ವೈರನ್ನು ಸಿಎಂ ಮಾಡಿದ್ದೇನೆ. ನನ್ನ ಪ್ರಾರ್ಥನೆಯಿಂದಲೇ ಬಿಜೆಪಿ ಸರ್ಕಾರ ರಚನೆಯಾಗಿದೆ. ಸಿಎಂ ಅವರನ್ನು ಭೇಟಿಯಾಗಲು ಅವಕಾಶ ಕಲ್ಪಿಸಬೇಕು ಎಂದು ಪಟ್ಟು ಹಿಡಿದು ಧರಣಿ ನಡೆಸಲು ಮುಂದಾಗಿದ್ದಾನೆ.
ಯಾವುದೇ ಅನುಮತಿ ಇಲ್ಲದೆ ಸಿಎಂ ಮನೆ ಮುಂದೆ ಬ್ಯಾನರ್ ಕಟ್ಟುವ ಹಾಗಿಲ್ಲ ಎಂದು ಸ್ಥಳಕ್ಕೆ ಬಂದ ಸಿಎಂ ಗೃಹ ಕಚೇರಿಯ ಪೊಲೀಸರು ಮಂಜುನಾಥ್ ಕಟ್ಟಿರುವ ಬ್ಯಾನರ್ ತೆರವುಗೊಳಿಸಿದರು. ಸಿಎಂ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಲು ನಿಯಮ ಇದೆ. ಹೀಗೆಲ್ಲಾ ಬ್ಯಾನೆರ್ ಕಟ್ಟಬಾರದು ಎಂದು ಬುದ್ಧಿ ಹೇಳಿದರು. ಆದರೂ ಮಾತು ಕೇಳದ ಮಂಜುನಾಥನನ್ನು ಪೊಲೀಸರು ವಶಕ್ಕೆ ಪಡೆದರು.