ಬೆಂಗಳೂರು:ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ಪರಿಸ್ಥಿತಿ ಹತೋಟಿಗೆ ತರಲು ಹೆಚ್ಚುವರಿ ತುಕಡಿ ನಿಯೋಜನೆ ಮಾಡಲಾಗಿದ್ದು, ಸದ್ಯ ಹೈದರಾಬಾದ್ನಿಂದ ಆರ್ಎಎಫ್ (ರ್ಯಾಪಿಡ್ ಆ್ಯಕ್ಷನ್ ಫೋರ್ಸ್) ತುಕಡಿ ಆಗಮನವಾಗಿದೆ.
ಡಿ.ಜೆ ಹಳ್ಳಿ ಘಟನೆ: ಪರಿಸ್ಥಿತಿ ನಿಯಂತ್ರಿಸಲು ಹೈದರಾಬಾದ್ನ RAF ಪಡೆ ಆಗಮನ
ಸುಮಾರು 120 ಸಿಬ್ಬಂದಿಯುಳ್ಳ RAF ತುಕಡಿ ಘಟನೆ ನಡೆದ ಸ್ಥಳದಲ್ಲಿ ಕಟ್ಟೆಚ್ಚರ ವಹಿಸಲಿದೆ. ಸದ್ಯ ಈ ಪಡೆ ಜೊತೆಗೆ ರಾಜ್ಯ ಪೊಲೀಸ್ ತಂಡಗಳು ಕಾರ್ಯಾಚರಣೆ ಕೈಗೊಳ್ಳಲಿವೆ.
ಬೆಂಗಳೂರು ಗಲಭೆ ಪ್ರಕರಣ: ಪರಿಸ್ಥಿತಿ ನಿಯಂತ್ರಿಸಲು ನಗರಕ್ಕೆ ಬಂದಿಳಿದ ಹೈದರಾಬಾದ್ನ ಆರ್ಎಎಫ್
ಗಲಭೆ ಪ್ರಕರಣದಲ್ಲಿ ಪೊಲೀಸರ ಗುಂಡಿಗೆ ಮೂವರು ಸಾವನ್ನಪ್ಪಿದ್ದಾರೆ. ಇವರ ಪೈಕಿ ಇಬ್ಬರಿಗೆ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬಿಬಿಎಂಪಿ ನಿಯಮದ ಪ್ರಕಾರ, ಅಂತ್ಯಸಂಸ್ಕಾರ ನೆರವೇರಿಸಲಿದ್ದಾರೆ. ಇನ್ನು ಕೊರೊನಾ ಸೋಂಕಿತರ ಕುಟುಂಬಸ್ಥರು ಪಿಪಿಇ ಕಿಟ್ ಧರಿಸಿ ಠಾಣೆಗೆ ಆಗಮಿಸಿದ್ದು, ಪೊಲೀಸರು ಮೊದಲೇ ನಿಯೋಜನೆ ಮಾಡಿದ ಬಿಎಂಟಿಸಿ ಬಸ್ನಲ್ಲಿ ಸ್ಮಶಾನಕ್ಕೆ ಕರೆದೊಯ್ದಿದ್ದಾರೆ.