ಬೆಂಗಳೂರು:ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಪ್ರಕರಣ ಸಂಬಂಧಿಸಿದಂತೆ ಮುನೇಶ್ವರ ವಾರ್ಡ್ನ ಕಾರ್ಪೊರೇಟರ್ ಸಾಜೀದ ಪತಿ ನಾಸೀರ್ ಅವರನ್ನ ಇಂದು ವಿಚಾರಣೆಗೆ ಸಿಸಿಬಿ ಒಳಪಡಿಸಿ ತದ ನಂತರ ಬಿಟ್ಟು ಕಳುಹಿಸಿದ್ದಾರೆ.
ಸಿಸಿಬಿ ವಿಚಾರಣೆಗೆ ಮುನೇಶ್ವರ ವಾರ್ಡ್ನ ಕಾರ್ಪೊರೇಟರ್ ಪತಿ ಹಾಜರು..!
ಮುಜಾಮಿಲ್ ಪಾಷಾಗೂ ನಮಗೂ ಯಾವುದೇ ಸಂಬಂಧ ಇಲ್ಲ. ಸಗಾಯ್ಪುರ ವಾರ್ಡ್ನ ಬೈ ಎಲೆಕ್ಷನ್ ವೇಳೆ ಆತನನ್ನ ನೋಡಿದ್ದು, ಎಂದು ಸಿಸಿಬಿ ವಿಚಾರಣೆಯಲ್ಲಿ ನಾಸೀರ್ ತಿಳಿಸಿದ್ದಾರೆ.
ವಿಚಾರಣೆ ಮುಗಿಸಿ ಹೊರಗಡೆ ಬಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿಸಿಬಿ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗೆ ಉತ್ತರ ನೀಡಿದ್ದೇನೆ. ನಮ್ಮ ಮೊಬೈಲ್ ಸೀಜ್ ಮಾಡಿ ಪರಿಶೀಲನೆ ಮಾಡಿದ್ದಾರೆ. ಈಗಾಗಲೇ ಬಂಧಿತನಾದ ಮುಜಾಮಿಲ್ ಪಾಷಾಗೂ ನಮಗೂ ಯಾವುದೇ ಸಂಬಂಧ ಇಲ್ಲ. ಸಗಾಯ್ಪುರ ವಾರ್ಡ್ನ ಬೈ ಎಲೆಕ್ಷನ್ ವೇಳೆ ಆತನನ್ನ ನೋಡಿದ್ದು, ಮತ್ತೆ ಮುಜಾಮಿಲ್ ಪಾಷಾನನ್ನ ಭೇಟಿ ಮಾಡಿಯೇ ಇಲ್ಲ. ಮತ್ತೆ ವಿಚಾರಣೆಗೆ ಫೋನ್ ಮಾಡಿ ಕರೆಯುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಫೋನ್ ಮಾಡಿದ್ರೆ ಮತ್ತೆ ವಿಚಾರಣೆಗೆ ಬರ್ತೀವಿ ಎಂದು ವಿಚಾರಣೆ ಮುಗಿದ ಬಳಿಕ ಕಾರ್ಪೋರೇಟರ್ ಪತಿ ತಿಳಿಸಿದ್ದಾರೆ.
ಈಗಾಗಲೇ ಬಂಧಿತನಾಗಿರುವ ಮುಜಾಮಿಲ್ ಪಾಷಾ ಹಲವಾರು ಕಾರ್ಪೊರೇಟರ್ ಜೊತೆ ಸಂಪರ್ಕ ಹೊಂದಿದ ಆರೋಪ ಇತ್ತು. ಹೀಗಾಗಿ ಆರೋಪಿಗಳ ಜೊತೆ ಯಾರೆಲ್ಲಾ ಸಂಪರ್ಕ ಹೊಂದಿದ್ರು ಅವರನ್ನೆಲ್ಲ ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.