ಬೆಂಗಳೂರು:ವಿಶ್ವೇಶ ತೀರ್ಥ ಪೇಜಾವರ ಶ್ರೀಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವ ಸಲ್ಲಿಸಲಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮುಖದಲ್ಲಿ ಶ್ರೀಗಳಿಗೆ ಸಕಲ ಸರ್ಕಾರಿ ಗೌರವ ಸಲ್ಲಿಕೆ
ವಿಶ್ವೇಶ ತೀರ್ಥ ಪೇಜಾವರ ಶ್ರೀಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವ ಸಲ್ಲಿಸಲಾಗಿದೆ.
ಶ್ರೀಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ, ಈಶ್ವರಪ್ಪ, ಆರ್.ಅಶೋಕ್, ಸಂಸದೆ ಶೋಭ ಕರಂದ್ಲಾಜೆ, ತೇಜಸ್ವಿ ಸೂರ್ಯ, ಶಾಸಕರಾದ ರವಿ ಸುಬ್ರಮಣ್ಯ, ರಾಮದಾಸ್ ಉಮೇಶ್ ಕತ್ತಿ, ಹಾಗೂ ಎಚ್ ವಿಶ್ವನಾಥ್ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದರು.
ಅಲ್ಲ್ದೇ, ಮಠದ ಆವರಣದಲ್ಲೇ ಮಧ್ವ ಬ್ರಾಹಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ಸಲ್ಲಿಸಿ, ಬೃಂದಾವನ ನಿರ್ಮಾಣ ಮಾಡಲಿದ್ದಾರೆ. ಶ್ರೀಗಳ ಅಂತಿಮ ವಿಧಿವಿಧಾನ ಕಾರ್ಯವನ್ನು ವಿದ್ಯಾಪೀಠ ಮಠದ ವಿಷ್ಣು ಮೂರ್ತಿ ಆಚಾರ್ಯ ನಡೆಸಲಿದ್ದು ಸುಮಾರು ಎರಡು ಗಂಟೆಗಳ ಕಾಲ ಅಂತಿಮ ವಿಧಿ ವಿಧಾನ ಕಾರ್ಯ ನಡೆಯಲಿದೆ.