ಬೆಂಗಳೂರು:ಕೆಫೆ ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ ಸಾವಿನ ಬಗ್ಗೆ ಒಂದಷ್ಟು ಅನುಮಾನಗಳು ಮೂಡಿದ್ದು ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.
ಉದ್ಯಮಿ ಸಿದ್ಧಾರ್ಥ, ದೇವದರ್ಶಿನಿ ಇನ್ಫೋ ಟೆಕ್ನಾಲಜೀಸ್, ಗೋಣಿಬೀಡು ಕಾಫಿ ಎಸ್ಟೇಟ್, ಕಾಫಿ ಡೇ ಕನ್ಸಾಲಿಡೇಷನ್ ಹಾಗೂ ಸಿವನ್ ಸೆಕ್ಯುರಿಟೀಸ್ ಎಂಬ ಕಂಪನಿಗಳು ಸೇರಿದಂತೆ ಇನ್ನಷ್ಟು ಸಂಸ್ಥೆಗಳನ್ನ ಹೊಂದಿದ್ದಾರೆ
ಸಿದ್ಧಾರ್ಥರವರು, ಉಲ್ಲೇಖಿಸಿರುವ ನಾಲ್ಕೂ ಕಂಪನಿಗಳ ಬಹುತೇಕ ಷೇರುಗಳನ್ನು ಅಡಿವಿಟ್ಟು ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದರು.
ಕಾಫಿ ಡೇ ಸುಮಾರು 6,547 ಕೋಟಿ ರೂಪಾಯಿ ಸಾಲ ಹೊಂದಿತ್ತು. ಕಾಫಿ ಡೇಯ ಶೇ.76ರಷ್ಟು ಷೇರುಗಳನ್ನ ಸಿದ್ಧಾರ್ಥ ಅಡವಿಟ್ಟು ಸಾಲ ಪಡೆದಿದ್ದರು. ಆದರೆ, ಸಿದ್ಧಾರ್ಥ ಅವರು ವೈಯಕ್ತಿಕವಾಗಿ ಹತ್ತು ಸಾವಿರ ಕೋಟಿ ಸಾಲ ಮಾಡಿಕೊಂಡಿದ್ದರು ಎನ್ನುವ ವಿಚಾರ ತಿಳಿದುಬಂದಿದೆ. ಸಾಲದ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಸಹಜವಾಗಿಯೇ ಉದ್ಯಮಿಯ ಮೇಲೆ ಒತ್ತಡ ಹೆಚ್ಚಾಗಿತ್ತು.
2018ರಿಂದ 2019ರ ತ್ರೈಮಾಸಿಕ ಅವಧಿಯಲ್ಲಿ ಕಾಫಿ ಡೇ ಮೇಲಿನ ಸಾಲ ಗಮನಾರ್ಹ ಏರಿಕೆ ಕಂಡಿತ್ತು. ಹಂತ ಹಂತವಾಗಿ ಸಾಲದ ಪ್ರಮಾಣ ಏರಿಕೆಯಾಗುತ್ತಿದ್ದಂತೆ ಸಿದ್ಧಾರ್ಥರ ವ್ಯವಹಾರ ಮತ್ತಷ್ಟು ಕಠಿಣವಾಗತೊಡಗಿತ್ತು ಎನ್ನಲಾಗಿದೆ. ಇದೇ ಕಾರಣದಿಂದಲೇ ಅವರು ಈ ರೀತಿ ಸಾವಿಗೆ ಶರಣಾದರಾ ಎಂಬ ಅನುಮಾನಗಳು ವ್ಯಕ್ತವಾಗಿವೆ.