ಬೆಂಗಳೂರು: ಗೃಹ ಸಚಿವ ಬಸವರಾಜ ಬೊಮ್ಮಾಯಿವರಿಗೆ ಶ್ವಾನ ಎಂದರೆ ಎಲ್ಲಿಲ್ಲದ ಪ್ರೀತಿ. ಹಾಗಾಗಿಯೇ ಮನೆಯಲ್ಲಿ ನಾಯಿಯೊಂದನ್ನು ಬಲು ಪ್ರೀತಿಯಿಂದ ಸಾಕಿದ್ದರು. 'ಸನ್ನಿ' ಎಂಬ ಹೆಸರಿನ ಶ್ವಾನ ಕುಟುಂಬ ಸದಸ್ಯರಂತೆ ಗೃಹ ಸಚಿವರ ಮನೆಯಲ್ಲಿತ್ತು. ಆದರೆ, ಇಷ್ಟು ದಿನ ಮನೆಯವರೊಂದಿಗೆ ಬೆರೆತು ತುಂಟಾಟ ಆಡುತ್ತಿದ್ದ ಸನ್ನಿ ಇಂದು ಮೃತಪಟ್ಟಿದೆ.
ಗೃಹ ಸಚಿವರ ಪ್ರೀತಿಯ ಶ್ವಾನ ಸಾವು.. 'ಸನ್ನಿ'ಗೆ ಬೊಮ್ಮಾಯಿ ಕುಟುಂಬದಿಂದ ಕಣ್ಣೀರ ವಿದಾಯ - ಬಸವರಾಜ ಬೊಮ್ಮಾಯಿ ನಾಯಿ ಸಾವು
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಮನೆಯ ಶ್ವಾನ ಇಂದು ಮೃತಪಟ್ಟಿದ್ದು, ಮನೆಯವರು ಕಣ್ಣೀರಿನೊಂದಿಗೆ ವಿದಾಯ ಹೇಳಿದರು.
ಗೃಹ ಸಚಿವರ ಮನೆಯ ಶ್ವಾನ ಸಾವು
ವಯೋಸಹಜವಾಗಿ ಗೃಹ ಸಚಿವರ ಪ್ರೀತಿಯ ಶ್ವಾನ ಮೃತಪಟ್ಟಿದ್ದು, ಬೊಮ್ಮಾಯಿ ಕುಟುಂಬ ಕಣ್ಣೀರಿನೊಂದಿಗೆ ಪ್ರೀತಿಯ ಸನ್ನಿಗೆ ವಿದಾಯ ಹೇಳಿತು. ಈ ಕುರಿತು ಟ್ವೀಟ್ ಮಾಡಿ ಸಚಿವ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
"ಇಂದು ನಮ್ಮ ಮನೆಯ ಮುದ್ದಿನ ನಾಯಿ "ಸನ್ನಿ" ವಯೋಸಹಜದಿಂದ ಸಾವನ್ನಪ್ಪಿದ್ದು ತೀವ್ರ ದುಃಖ ತಂದಿದೆ. ಕುಟುಂಬದ ಓರ್ವ ಸದಸ್ಯನನ್ನು ಕಳೆದುಕೊಂಡಂತಾಗಿದೆ. ಮನೆಯ ಹಾಗೂ ಮನೆಗೆ ಬರುವ ಎಲ್ಲರೊಂದಿಗೆ ಅತ್ಯಂತ ಪ್ರೀತಿಯಿಂದ ಬೆರೆಯುತ್ತಿತ್ತು. ಓಂ ಶಾಂತಿಃ" ಎಂದು ಸಚಿವ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
Last Updated : Jul 12, 2021, 12:43 PM IST