ಕರ್ನಾಟಕ

karnataka

ETV Bharat / state

₹5 ಭಿಕ್ಷೆ ಕೊಡ್ತೀನಿ ಅಂದಿದ್ದಕ್ಕೆ ಯುವಕನ ಮೇಲೆ ಮಂಗಳಮುಖಿಯರಿಂದ ಹಲ್ಲೆ - Hijras Assaulted on a Young man in Bengaluru

ಹಣ ಕೊಡಲು ನಿರಾಕರಿಸಿದ ಯುವಕನಿಗೆ ಚಪ್ಪಲಿಯಿಂದ ಹೊಡೆದು, ನಂತರ ಕೈಗಳಿಂದ ಮನ ಬಂದಂತೆ ಥಳಿಸಿದ್ದಾರೆ‌‌. ಪೊಲೀಸರಿಗೆ ದೂರು ನೀಡಿದ್ರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತ ಯುವಕ ಆರೋಪಿಸಿದ್ದಾನೆ..

Representative Image
ಸಾಂದರ್ಭಿಕ ಚಿತ್ರ

By

Published : Sep 30, 2020, 7:49 PM IST

ಬೆಂಗಳೂರು :ಭಿಕ್ಷೆ ಕೊಡಲಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡ ಮೂವರು ಮಂಗಳಮುಖಿಯರು ಯುವಕನೋರ್ವನಮೇಲೆ‌ ಹಲ್ಲೆ ನಡೆಸಿರುವ ಘಟನೆ ಕೋಣನಕುಂಟೆಯಲ್ಲಿ ನಡೆದಿದೆ.

ಕೆಲ ದಿನಗಳ ಹಿಂದೆ ಕೋಣನಕುಂಟೆಯ ವೀವರ್ಸ್ ಕಾಲೋನಿ ಬಳಿ ಹಾಲು, ಪೇಪರ್​ ತರಲು ನಡೆದುಕೊಂಡ ತೆರಳುತ್ತಿದ್ದ ನಾಗರಾಜ್​​(ಹೆಸರು ಬದಲಿಸಲಾಗಿದೆ) ಎಂಬಾತನ ಬಳಿ ಆಟೋದಲ್ಲಿ ಬಂದಂತಹ ತೃತೀಯ ಲಿಂಗಿಗಳಾದ ಸುಶುತ್ವ, ಜಯಂತ್​​ ಹಾಗೂ ಬೋರೇಗೌಡ 10 ರೂಪಾಯಿ ಭಿಕ್ಷೆ‌ ನೀಡುವಂತೆ ಕೇಳಿದ್ದಾರೆ. ನನ್ನ ಬಳಿ 10 ರೂಪಾಯಿ ಇಲ್ಲ, 5 ರೂ‌‌ಪಾಯಿ ಕೊಡುತ್ತೇನೆ ಎಂದು ಯುವಕ ಹೇಳಿದ್ದಾನೆ.

ಈ ಮಾತಿಗೆ ಕುಪಿತಗೊಂಡ ಮಂಗಳಮುಖಿಯರು, ನಿನ್ನದೆ ಮೊದಲ ಬೋಣಿ 10 ರೂ. ಕೊಡು ಎಂದು ಒತ್ತಾಯಿಸಿದ್ದಾರೆ‌‌. ಹಣ ಕೊಡಲು ನಿರಾಕರಿಸಿದ ಯುವಕನಿಗೆ ಚಪ್ಪಲಿಯಿಂದ ಹೊಡೆದು, ನಂತರ ಕೈಗಳಿಂದ ಮನ ಬಂದಂತೆ ಥಳಿಸಿದ್ದಾರೆ‌‌. ಪೊಲೀಸರಿಗೆ ದೂರು ನೀಡಿದ್ರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಯುವಕ ಆರೋಪಿಸಿದ್ದಾನೆ.

ಗಲಾಟೆ ಜೋರಾಗುತ್ತಿದ್ದಂತೆ ಸ್ಥಳೀಯರು ಯುವಕನ ನೆರವಿಗೆ ಬಂದಿದ್ದಾರೆ. ನಂತರ ಈ ಸಂಬಂಧ‌ ಕೋಣನಕುಂಟೆ ಪೊಲೀಸರಿಗೆ ಯುವಕ ದೂರು ನೀಡಿದ್ದು, ದೂರಿನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇದೀಗ ಮೂವರು ಆರೋಪಿತ ಮಂಗಳಮುಖಿಯರನ್ನು ಬಂಧಿಸಿ‌ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ABOUT THE AUTHOR

...view details