ಕರ್ನಾಟಕ

karnataka

ETV Bharat / state

ನಾಮಫಲಕ ವಿಚಾರ: ನಾವಿರೋದು ಕನ್ನಡ ನಾಡಿನಲ್ಲಿ, ಇಲ್ಲಿನ ಭಾಷೆ-ಸಂಸ್ಕೃತಿ ಗೌರವಿಸಬೇಕು ಎಂದ ಹೈಕೋರ್ಟ್​ - bangalore latest news

ನಾವಿರೋದು ಕನ್ನಡ ನಾಡಿನಲ್ಲಿ. ಇಲ್ಲಿನ ಭಾಷೆ ಹಾಗೂ ಸಂಸ್ಕೃತಿಯನ್ನು ಗೌರವಿಸಬೇಕು ಎಂದು ಹೈಕೋರ್ಟ್ ಕಿವಿಮಾತು ಹೇಳಿದೆ.

High Court told that respect Kannada language
ನಾವಿರೋದು ಕನ್ನಡ ನಾಡಿನಲ್ಲಿ, ಇಲ್ಲಿನ ಭಾಷೆ &ಸಂಸ್ಕೃತಿಯನ್ನು ಗೌರವಿಸಬೇಕು: ಹೈಕೋರ್ಟ್​

By

Published : Dec 27, 2019, 10:53 PM IST

ಬೆಂಗಳೂರು:ನಾವಿರೋದು ಕನ್ನಡ ನಾಡಿನಲ್ಲಿ. ಇಲ್ಲಿನ ಭಾಷೆ ಹಾಗೂ ಸಂಸ್ಕೃತಿಯನ್ನು ಗೌರವಿಸಬೇಕು ಎಂದು ಹೈಕೋರ್ಟ್ ಕಿವಿಮಾತು ಹೇಳಿದೆ.

ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕೆಂಬ ಆದೇಶವನ್ನು ಪ್ರಶ್ನಿಸಿ ಮೆಟ್ರೋ ಕ್ಯಾಶ್ ಆ್ಯಂಡ್ ಕ್ಯಾರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆಯಿತು.

ಅರ್ಜಿ ವಿಚಾರಣೆ ವೇಳೆ ನ್ಯಾಯಾಧೀಶರು, ಅರ್ಜಿದಾರರಿಗೆ ಕಿವಿಮಾತು ಹೇಳಿದರು. ಕರ್ನಾಟಕದಲ್ಲಿ ವಾಸ ಹಾಗೂ ವ್ಯಾಪಾರ ಮಾಡುತ್ತೇವೆ ಎಂದ ಮೇಲೆ ಇಲ್ಲಿನ ಭಾಷೆ ಹಾಗೂ ಸಂಸ್ಕೃತಿಯನ್ನು ಗೌರವಿಸಬೇಕು ಎಂದು ಸೂಚಿಸಿದರು. ಈಗಾಗಲೇ ‌ಭಾರತೀಯ ಚಿಲ್ಲರೆ ಮಾರಾಟಗಾರರ ಸಂಘ ಸಲ್ಲಿಸಿರುವ ಅರ್ಜಿಯೊಂದಿಗೆ ಈ ಅರ್ಜಿಯನ್ನು ಸೇರಿಸಲು ನಿರ್ದೇಶನ ನೀಡಿ ವಿಚಾರಣೆ ಮುಂದೂಡಿಕೆ ಮಾಡಿದರು.

ABOUT THE AUTHOR

...view details