ಕರ್ನಾಟಕ

karnataka

ETV Bharat / state

ಗ್ರಾಮಸ್ಥರೊಂದಿಗೆ ಕಂದಾಯ ನಿರೀಕ್ಷಕ ಅನುಚಿತ ವರ್ತನೆ ಆರೋಪ : ಕ್ರಮ ಜರುಗಿಸಲು ಡಿಸಿಗೆ ಹೈಕೋರ್ಟ್ ಸೂಚನೆ

ರಾಮನಗರ ತಾಲೂಕಿನ ಕಸಬ ಹೋಬಳಿಯಲ್ಲಿ ರೆವಿನ್ಯೂ ಇನ್ಸಪೆಕ್ಟರ್ ಆಗಿದ್ದ ಬಿ.ಎನ್ ನರೇಶ್ ನಿತ್ಯವೂ ಮದ್ಯ ಸೇವಿಸಿ ಕಚೇರಿಗೆ ಬರುತ್ತಿದ್ದರು. ಕಚೇರಿಗೆ ಭೇಟಿ ನೀಡುವ ಗ್ರಾಮಸ್ಥರು, ರೈತರೊಂದಿಗೆ ದುರ್ವತನೆ ತೋರುತ್ತಿದ್ದರಲ್ಲದೇ, ಪಾನಮತ್ತರಾಗಿಯೇ ರೈತರ ಜಮೀನುಗಳಿಗೆ ಭೇಟಿ ನೀಡುತ್ತಿದ್ದರು. ಲಂಚ ವಸೂಲಿಗೆ ಗೂಂಡಾಗಳನ್ನು ನೇಮಿಸಿಕೊಂಡಿರುವ ಅಧಿಕಾರಿಯ ವಿರುದ್ಧ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದರು.

ಹೈಕೋರ್ಟ್
ಹೈಕೋರ್ಟ್

By

Published : Jan 20, 2022, 9:05 PM IST

ಬೆಂಗಳೂರು: ಕರ್ತವ್ಯದ ವೇಳೆ ಮದ್ಯ ಸೇವಿಸಿ ಗ್ರಾಮಸ್ಥರೊಂದಿಗೆ ಅನುಚಿತ ವರ್ತನೆ ತೋರಿದ ಆರೋಪಕ್ಕೆ ಸಂಬಂಧಿಸಿದಂತೆ ಕಂದಾಯ ನಿರೀಕ್ಷಕ ಬಿ.ಎನ್ ನರೇಶ್ ವಿರುದ್ಧ ಸೂಕ್ತ ಜರುಗಿಸುವಂತೆ ಹೈಕೋರ್ಟ್ ರಾಮನಗರ ಜಿಲ್ಲಾಧಿಕಾರಿಗೆ ಸೂಚಿಸಿದೆ.

ಕಂದಾಯ ನಿರೀಕ್ಷಕ ಬಿ.ಎನ್ ನರೇಶ್ ವಿರುದ್ಧ ರಾಮನಗರ ತಾಲೂಕಿನ ವೆಂಕಟೇಶ್ ಹಾಗೂ ಇತರೆ 12 ಮಂದಿ ಸ್ಥಳೀಯರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ರೆವಿನ್ಯೂ ಇನ್ಸಪೆಕ್ಟರ್ ನರೇಶ್ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂಂತೆ ಅರ್ಜಿದಾರರು 2 ವಾರದಲ್ಲಿ ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ದೂರು ಸಲ್ಲಿಸಬೇಕು. ರಾಮನಗರ ಜಿಲ್ಲಾಧಿಕಾರಿ ದೂರು ಪರಿಗಣಿಸಿ ಆರ್.ಐ ವಿರುದ್ಧ ಕಾನೂನು ರೀತಿ ಸೂಕ್ತ ಕ್ರಮ ಜರುಗಿಸಬೇಕು ಎಂದು ನಿರ್ದೇಶಿಸಿ, ಅರ್ಜಿ ಇತ್ಯರ್ಥಪಡಿಸಿತು.

ಗ್ರಾಮಸ್ಥರ ಆರೋಪ: ರಾಮನಗರ ತಾಲೂಕಿನ ಕಸಬ ಹೋಬಳಿಯಲ್ಲಿ ರೆವಿನ್ಯೂ ಇನ್ಸಪೆಕ್ಟರ್ ಆಗಿದ್ದ ಬಿ.ಎನ್ ನರೇಶ್ ನಿತ್ಯವೂ ಮದ್ಯ ಸೇವಿಸಿ ಕಚೇರಿಗೆ ಬರುತ್ತಿದ್ದರು. ಕಚೇರಿಗೆ ಭೇಟಿ ನೀಡುವ ಗ್ರಾಮಸ್ಥರು, ರೈತರೊಂದಿಗೆ ದುರ್ವತನೆ ತೋರುತ್ತಿದ್ದರಲ್ಲದೇ, ಪಾನಮತ್ತರಾಗಿಯೇ ರೈತರ ಜಮೀನುಗಳಿಗೆ ಭೇಟಿ ನೀಡುತ್ತಿದ್ದರು. ಲಂಚ ವಸೂಲಿಗೆ ಗೂಂಡಾಗಳನ್ನು ನೇಮಿಸಿಕೊಂಡಿರುವ ಅಧಿಕಾರಿಯ ವಿರುದ್ಧ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದರು.

ಅಲ್ಲದೇ, ದೂರು ನೀಡಿದ ಬಳಿಕ ಅಧಿಕಾರಿಯನ್ನು ಉಯ್ಯಂಬಳ್ಳಿ ಹೋಬಳಿ ಕಂದಾಯ ನಿರೀಕ್ಷಕರಾಗಿ ವರ್ಗಾವಣೆ ಮಾಡಿದ್ದು ಬಿಟ್ಟರೆ, ಯಾವುದೇ ಶಿಸ್ತು ಕ್ರಮ ಜರುಗಿಸಿಲ್ಲ. ಆದ್ದರಿಂದ, ಆರ್.ಐ ನರೇಶ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಜಿಲ್ಲಾಧಿಕಾರಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.

ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ABOUT THE AUTHOR

...view details