ಬೆಂಗಳೂರು :ಹೈಕೋರ್ಟ್ ಕಾನೂನು ಸೇವಾ ಸಮಿತಿ ಇದೇ ಮೊಟ್ಟ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವರ್ಚ್ಯುಯಲ್ ಲೋಕ ಅದಾಲತ್ ನಡೆಸಿದ್ದು, ಎರಡು ವಿಮಾ ಕಂಪನಿಗಳಿಗೆ ಸಂಬಂಧಿಸಿದ 31 ಪ್ರಕರಣಗಳನ್ನು ಇತ್ಯರ್ಥಪಡಿಸಿದೆ. ಮೋಟಾರು ವಾಹನ ಅಪಘಾತ ಪ್ರಕರಣಗಳ ಸಂತ್ರಸ್ತರಿಗೆ ಒಟ್ಟು 62.95 ಲಕ್ಷ ರೂಪಾಯಿ ಪರಿಹಾರ ಕೊಡಿಸಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಲೋಕ ಅದಾಲತ್ : 31 ಪ್ರಕರಣಗಳ ಇತ್ಯರ್ಥ
ಸರ್ಕಾರಿ ವಕೀಲರಾದ ವಿಜಯ ಕುಮಾರ್ ಪಾಟೀಲ್ ಅವರು, ಈ ಲೋಕ ಅದಾಲತ್ನಲ್ಲಿ ಸಮಾಲೋಚಕರಾಗಿ ಭಾಗವಹಿಸಿ, ರಾಜಿ ಸಂಧಾನದ ಮೂಲಕ 31 ಪ್ರಕರಣಗಳನ್ನು ಇತ್ಯರ್ಥಪಡಿಸಲು ನೆರವು ನೀಡಿದ್ದಾರೆ..
ಕೋವಿಡ್-19 ಹಿನ್ನೆಲೆ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಲೋಕ ಅದಾಲತ್ ನಡೆಸಲಾಗಿದೆ. ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯ ಪೋಷಕರೂ ಆದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ, ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷರಾದ ನ್ಯಾಯಮೂರ್ತಿ ಅರವಿಂದ ಕುಮಾರ್ ಮತ್ತು ಹೈಕೋರ್ಟ್ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ಅಲೋಕ ಆರಾಧೆ ಅವರ ಮಾರ್ಗದರ್ಶನದಲ್ಲಿ ಜುಲೈ14ರಂದು ವರ್ಚ್ಯುಯಲ್ ಲೋಕ ಅದಾಲತ್ ನಡೆಸಲಾಗಿದೆ.
ಸರ್ಕಾರಿ ವಕೀಲರಾದ ವಿಜಯ ಕುಮಾರ್ ಪಾಟೀಲ್ ಅವರು, ಈ ಲೋಕ ಅದಾಲತ್ನಲ್ಲಿ ಸಮಾಲೋಚಕರಾಗಿ ಭಾಗವಹಿಸಿ, ರಾಜಿ ಸಂಧಾನದ ಮೂಲಕ 31 ಪ್ರಕರಣಗಳನ್ನು ಇತ್ಯರ್ಥಪಡಿಸಲು ನೆರವು ನೀಡಿದ್ದಾರೆ. ಕೋವಿಡ್-19 ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ವಕೀಲರು, ವ್ಯಾಜ್ಯದಾರರು ಮತ್ತು ಸಾರ್ವಜನಿಕರು ವರ್ಚ್ಯುಯಲ್ ಲೋಕ ಅದಾಲತ್ ವ್ಯವಸ್ಥೆ ಸದ್ಬಳಕೆ ಮಾಡಿಕೊಂಡು ಹೆಚ್ಚಿನ ಪ್ರಕರಣಗಳ ಇತ್ಯರ್ಥಕ್ಕೆ ಸಹಕರಿಸಬೇಕು ಎಂದು ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ಮನವಿ ಮಾಡಿದೆ.