ಬೆಂಗಳೂರು:ನಗರದ ಹೆಬ್ಬಾಳ ಫ್ಲೈ ಓವರ್ ಮೇಲೆ ವ್ಯಕ್ತಿಯೊಬ್ಬರಿಗೆ ಅಪಘಾತವಾಗಿ ಕೆಳಗೆ ಬಿದ್ದಾಗ ಸಹಾಯಕ್ಕೆಂದು ಬಂದ ಯುವಕರು ಮೊಬೈಲ್ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.
ಬೈಕ್ ಅಪಘಾತ: ಸಹಾಯ ಮಾಡಲು ಅಂತಾ ಬಂದವರು ಮೊಬೈಲ್ ಕದ್ದು ಪರಾರಿ! - ಬೈಕ್ ಡಿವೈಡರ್ ಗೆ ಡಿಕ್ಕಿ
ಬೆಂಗಳೂರಿನಲ್ಲಿ ಅಪಘಾತವೊಂದು ನಡೆದಾಗ ಸವಾರನಿಗೆ ಸಹಾಯ ಮಾಡುವ ನೆಪದಲ್ಲಿ ಬಂದ ಯುವಕರು ಮೊಬೈಲ್ ಕದ್ದು ಪರಾರಿಯಾಗಿದ್ದಾರೆ.
ಹೆಬ್ಬಾಳ ಫ್ಲೈ ಓವರ್ ಮೇಲೆ ಬೈಕ್ ಡಿವೈಡರ್ಗೆ ಡಿಕ್ಕಿ ಹೊಡೆದು ಸವಾರ ಜೈಶಂಕರ್ ಎಂಬಾತ ಕೆಳಗೆ ಬಿದ್ದಿದ್ದ. ಡಿವೈಡರ್ಗೆ ರಭಸವಾಗಿ ಗುದ್ದಿದ ಪರಿಣಾಮ ಪ್ರಜ್ಞೆ ತಪ್ಪಿದ್ದ ಸ್ಥಿತಿಯಲ್ಲಿ ಸವಾರ ಇದ್ದ. ಈ ವೇಳೆ ಐ ಫೋನ್ ರಸ್ತೆ ಮೇಲೆ ಬಿದಿದ್ದನ್ನು ಕಂಡು ಯುವಕರ ಗುಂಪೊಂದು ಸಹಾಯಕ್ಕೆ ಬಂದಿದೆ. ಕೆಲ ಹೊತ್ತು ಸಹಾಯ ಮಾಡುವ ರೀತಿ ನಟಿಸಿ, ಜೈಶಂಕರ್ನ ಅಲ್ಲೇ ಬಿಟ್ಟು ಮೊಬೈಲ್ನೊಂದಿಗೆ ಪರಾರಿಯಾಗಿದ್ದಾರೆ.
ವಿಷಯ ತಿಳಿದ ಸಂಚಾರಿ ಪೊಲೀಸರು ಜೈಶಂಕರ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಇನ್ನು ಈ ಸಂಬಂಧ ಹೆಬ್ಬಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.