ಕರ್ನಾಟಕ

karnataka

ETV Bharat / state

ಚಿತ್ರಕಲಾ ಪರಿಷತ್​ನಲ್ಲಿ ಕರಕುಶಲವಸ್ತುಗಳ ಮಾರಾಟ ಮೇಳಕ್ಕೆ ಚಾಲನೆ

10 ದಿನಗಳ ಕಾಲ ನಡೆಯುವ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ದೇಶದ ನಾನಾ ಕಡೆಯಿಂದ ಬಂದ ಕಲಾವಿದರು ತಮ್ಮ ವಸ್ತುಗಳನ್ನು ಪ್ರದರ್ಶಿಸುತ್ತಾರೆ.

fair launched at Chitrakala Parishad
ಚಿತ್ರಕಲಾ ಪರಿಷತ್​ನಲ್ಲಿ ಕರಕುಶಲವಸ್ತುಗಳ ಮಾರಾಟ ಮೇಳಕ್ಕೆ ಚಾಲನೆ

By

Published : Dec 16, 2022, 10:09 PM IST

ಬೆಂಗಳೂರು: ಗ್ರ್ಯಾಂಡ್ ಫ್ಲಿಯಾ ಮಾರ್ಕೆಟ್​ನಿಂದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ದ ಸೊಕ್ ಮಾರ್ಕೆಟ್ ಆಯೋಜಿಸಲಾಗಿದೆ. ಡಿಸೆಂಬರ್ 16ರಿಂದ ಡಿ 25ರವರೆಗೆ ನಡೆಯಲಿರುವ ಕರಕುಶಲವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ನಟಿ ಕಾರುಣ್ಯ ರಾಮ್, ಗ್ರಿಷ್ಮಾ ಗೌಡ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಟಿ ಕಾರುಣ್ಯ ರಾಮ್, ಕ್ರಿಸ್ಮಸ್ ಸಂದರ್ಭದಲ್ಲಿ ಚಿತ್ರಕಲಾ ಪರಿಷತ್‌ನಲ್ಲಿ ಮೇಳವನ್ನು ಆಯೋಜಿಸಿರುವುದು ಬಹಳ ಖುಷಿ ನೀಡಿದೆ. ಇಲ್ಲಿ ಸುಮಾರು ನೂರಕ್ಕೂ ಹೆಚ್ಚಿನ ಮಳಿಗೆಗಳಿವೆ. ಪ್ರತಿಯೊಂದು ವಸ್ತು ಕೂಡಾ ಅದ್ಭುತ ಹಾಗೂ ವಿಭಿನ್ನವಾಗಿದೆ. ಅದರಲ್ಲೂ ನನಗೆ ಮುಖ್ಯವಾಗಿ ಲೈಟ್ ಬಣ್ಣದ ಕಾಟನ್, ಕಲಂಕರಿ, ಆಭರಣಗಳು, ಪೇಂಟಿಂಗ್‌ಗಳು ಇಷ್ಟವಾಗುತ್ತವೆ. ಮನೆಯ ಅಲಂಕಾರಕ್ಕೆ ಬೇಕಾದ ಎಲ್ಲಾ ವಸ್ತುಗಳು ಇಲ್ಲಿವೆ. ಮಹಿಳೆಯರು ಹಾಗೂ ಕಲಾವಿದರು ಇಷ್ಟಪಡುವ ಸಾಕಷ್ಟು ವಸ್ತುಗಳಿವೆ. ತಯಾರಿಸಿದವರೇ ನೇರವಾಗಿ ವಸ್ತುಗಳನ್ನು ಮಾರುವುದರಿಂದ ಮಧ್ಯವರ್ತಿಗಳ ಕಾಟವಿಲ್ಲ. ಹಾಗಾಗಿ ದರಗಳು ವಿಪರೀತ ಹೆಚ್ಚಿಲ್ಲ. ಪ್ರತಿಯೊಬ್ಬರೂ ಇಲ್ಲಿಗೆ ಭೇಟಿ ನೀಡಿ ನಿಮಗಿಷ್ಟದ ವಸ್ತುಗಳನ್ನು ಕೊಳ್ಳಿ ಎಂದರು.

ಈ ಮೇಳದ ಕುರಿತು ಮಾತನಾಡಿದ ನಟಿ ಗ್ರಿಷ್ಮಾ ಗೌಡ, ಹತ್ತು ದಿನಗಳ ಕಾಲ ನಡೆಯಲಿರುವ ಮೇಳದಲ್ಲಿ ಎಲ್ಲಾ ಬಣ್ಣಗಳು ಮೇಳೈಸಿವೆ, ಗ್ರಾಹಕರಿಗೆ ಇಷ್ಟವಾಗುವ ಹಲವು ವಸ್ತುಗಳು ಇಲ್ಲಿವೆ. ಅದರಲ್ಲೂ ಮಹಿಳೆಯರು ವಿಶೇಷವಾಗಿ ಇಷ್ಟಪಡುವ ವಿವಿಧ ವಿನ್ಯಾಸದ ಬ್ಯಾಗ್​ಗಳು, ಕಾಟನ್ ಸೀರೆಗಳು, ಆಧುನಿಕ ಶೈಲಿಯ ಆಭರಣಗಳು ಮೇಳದಲ್ಲಿದೆ. ಪ್ರತಿಯೊಬ್ಬರೂ ಬಂದು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.

ದ ಸೊಕ್ ಮಾರ್ಕೆಟ್ ನಿಂದ ಸ್ಥಳೀಯ ಕಲಾವಿದರಿಗೆ ಬೆಂಬಲ:ದ ಸೊಕ್ ಮಾರ್ಕೆಟ್ ಆರ್ಟ್ಸ್ ಆಂಡ್ ಕ್ರಾಫ್ಟ್ ಮೇಳವು ಸಾರ್ವಜನಿಕರಿಗೆ ಸ್ಥಳೀಯ ಕಲಾವಿದರನ್ನು ಬೆಂಬಲಿಸಲು ಹಾಗೂ ವಿಭಿನ್ನ ವಸ್ತುಗಳನ್ನು ಹುಡುಕಲು ಒಂದು ಉತ್ತಮ ಅವಕಾಶವಾಗಿದೆ. 10 ದಿನಗಳ ಕಾಲ ನಡೆಯುವ ಈ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ದೇಶದ ನಾನಾ ಕಡೆಯಿಂದ ಬಂದ ಕಲಾವಿದರು ತಮ್ಮ ವಸ್ತುಗಳನ್ನು ಇಲ್ಲಿ ಪ್ರದರ್ಶಿಸುತ್ತಾರೆ.

ಇದನ್ನೂ ಓದಿ:ಪುನೀತ್‌ ಬಯೋಗ್ರಫಿ 'ನೀನೇ ರಾಜಕುಮಾರ' 4ನೇ ಆವೃತ್ತಿ ಬಿಡುಗಡೆ

ABOUT THE AUTHOR

...view details