ಕರ್ನಾಟಕ

karnataka

ETV Bharat / state

ರಾಜ್ಯ ಸರ್ಕಾರ ತುಘಲಕ್ ಆಡಳಿತ ನಡೆಸುತ್ತಿದೆ: ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿ - ರಾಜ್ಯ ಸರ್ಕಾರದ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ

ಮುಖ್ಯಮಂತ್ರಿಗಳು ಜನಪರವಾಗಿದ್ದರೆ ನಿಮ್ಮ ನಡವಳಿಕೆ ಬದಲಾವಣೆ ಮಾಡಿಕೊಳ್ಳಿ. ಯಾರೋ ಒಬ್ಬರನ್ನು ಮೆಚ್ಚಿಸಲು ಕ್ಷಣ, ಕ್ಷಣಕ್ಕೂ ಮಾರ್ಗಸೂಚಿ ಬದಲಾವಣೆ ಮಾಡುವುದನ್ನು ಬಿಡಿ ಎಂದು ಸಿಎಂ ಯಡಿಯೂರಪ್ಪ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

H D Kumaraswamy Barrage Against State Government
ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

By

Published : Apr 22, 2021, 8:41 PM IST

ಬೆಂಗಳೂರು: ಸರ್ಕಾರ ಏಕಾಏಕಿ ರಾಜ್ಯದಲ್ಲಿ ಕೊರೊನಾ ತಡೆಗೆ ಇಂದು ಪ್ರಕಟಿಸಿರುವ ಮಾರ್ಗಸೂಚಿ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ. ರಾಜ್ಯ ಸರ್ಕಾರ ತುಘಲಕ್ ಆಡಳಿತ ನಡೆಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ಆಸ್ಪತ್ರೆಯಿಂದಲೇ ಮಾತನಾಡಿದ ಅವರು, ಏಕಾಏಕಿ ಅಂಗಡಿ-ಮುಂಗಟ್ಟು ಮುಚ್ಚಿಸಲು ಅಧಿಕಾರ ಕೊಟ್ಟವರು ಯಾರು. ಮುಖ್ಯಮಂತ್ರಿಗಳು ಆಸ್ಪತ್ರೆಯಿಂದ ಮಧ್ಯಾಹ್ನ ಡಿಸ್ಚಾರ್ಜ್ ಆದ ನಂತರ ಸಚಿವರ ಸಭೆ ನಡೆಸಿದ ಬಳಿಕ ಮಾರ್ಗಸೂಚಿಗಳನ್ನು ಘೋಷಣೆ ಮಾಡದೆ ಮದ್ಯದ ಅಂಗಡಿಗಳನ್ನು ಬಿಟ್ಟು ಇತರೆ ಅಂಗಡಿಗಳನ್ನು ಮುಚ್ಚಿಸಲಾಗಿದೆ. ಅವರಿಗೆ ಬದಲಿ ವ್ಯವಸ್ಥೆ ಏನು ಮಾಡಿದ್ದೀರಾ. ಅಂಗಡಿಗಳಲ್ಲಿ ಕೆಲಸ ಮಾಡುವವರ ಪಾಡೇನು ಎಂದು ಪ್ರಶ್ನಿಸಿದರು. ಮೊನ್ನೆ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲಾಕ್​ಡೌನ್ ಮಾಡುವುದು ಒಳ್ಳೆಯದು. ಇದರಿಂದ ಕೋವಿಡ್ ನಿಯಂತ್ರಣ ಮಾಡಲು ಸಹಕಾರಿಯಾಗುತ್ತದೆ ಎಂದು ಸಲಹೆ ಕೊಟ್ಟಿದ್ದೆ.

ಆದರೆ, ಪ್ರಧಾನಿಗಳ ಸಲಹೆ ಬಂದ ನಂತರ ಸರ್ಕಾರವೇ ಹಿಂದೆ ಸರಿದು ಈಗ ಅಂಗಡಿಗಳನ್ನು ಮುಚ್ಚಿಸಲಾಗಿದೆ. ಸರ್ಕಾರಕ್ಕೆ ದೂರದೃಷ್ಟಿ ಇಲ್ಲ. ತಿಳುವಳಿಕೆ, ಅನುಭವಸ್ಥರಿಂದ ಸಲಹೆ ಪಡೆಯದೇ, ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಯೋಚಿಸದೇ ಈ ಕ್ರಮ ಕೈಗೊಂಡಿರುವುದು ಸರಿಯಲ್ಲ. ಇದರಿಂದ ಹಲವಾರು ಕುಟುಂಬಗಳು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗುತ್ತದೆ. ಆಕ್ಸಿಜನ್ ಕೊರತೆಯಿದೆ‌. ಬೆಡ್ ಸಮಸ್ಯೆ ಇದೆ. ಉನ್ನತಮಟ್ಟದ ಸಮಿತಿ ಸಭೆ ತೀರ್ಮಾನದ ಬಗ್ಗೆ ತಿಳಿಸಿ. ಬಯಲು ಪ್ರದೇಶಗಳಲ್ಲಿ ಶೆಡ್​ಗಳನ್ನು ನಿರ್ಮಿಸಿ ವೈದ್ಯರ ತಂಡ ರಚಿಸುವ ಮೂಲಕ ಜನರ ಜೀವ ಉಳಿಸಬೇಕು ಎಂದು ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆಗಳನ್ನು ನೀಡಿದ್ದಾರೆ.

ABOUT THE AUTHOR

...view details