ಬೆಂಗಳೂರು:ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೆಂಗೇರಿ ಮತ್ತು ದಾಸರಹಳ್ಳಿಯಲ್ಲಿ ಇಂದು ರಾಮನವಮಿ ಉತ್ಸವದಲ್ಲಿ ಪಾಲ್ಗೊಂಡು ಪೂಜೆ ನೆರವೇರಿಸಿ, ಪಾನಕ, ಕೋಸಂಬರಿ ವಿತರಿಸಿದರು. ಇದೇ ವೇಳೆ ಕಲ್ಲಂಗಡಿಯನ್ನು ಕಳೆದುಕೊಂಡು ಬೀದಿಗೆ ಬಿದ್ದ ಹಿರಿಜೀವ, ನಬಿಸಾಬಿ ಅವರಿಗೆ ₹10 ಸಾವಿರ ಧನಸಹಾಯ ಮಾಡಿದರು. ಇದರ ವಿಡಿಯೋವನ್ನು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ರಾಮನವಮಿ: ಪಾನಕ, ಕೋಸಂಬರಿ ವಿತರಿಸಿದ ಹೆಚ್‌ಡಿಕೆ
'ನಬಿಸಾಬಿಯ ವೇದನೆಯನ್ನೊಮ್ಮೆ ಕೇಳಿ. ಅವರ ಸಂಕಟದಲ್ಲಿ ನಾವೆಲ್ಲರೂ ಭಾಗಿಯಾಗಿ ಒಟ್ಟಾಗಿ ಅವರಿಗೆ ಬದುಕು ಕಟ್ಟಿಕೊಡೋಣ' ಎಂದು ಹೆಚ್‌ಡಿಕೆ ಮನವಿ ಮಾಡಿದ್ದಾರೆ.
ರಾಮನವಮಿ ಹಿನ್ನೆಲೆ ಪಾನಕ, ಕೋಸಂಬರಿ ವಿತರಿಸಿದ ಹೆಚ್‌ಡಿಕೆ
'ನಬಿಸಾಬಿಯ ವೇದನೆಯನ್ನೊಮ್ಮೆ ಕೇಳಿ. ಅವರ ಸಂಕಟದಲ್ಲಿ ನಾವೆಲ್ಲರೂ ಭಾಗಿಯಾಗಿ ಒಟ್ಟಾಗಿ ಅವರಿಗೆ ಬದುಕು ಕಟ್ಟಿಕೊಡೋಣ' ಎಂದು ಮನವಿ ಅವರು ಮಾಡಿದ್ದಾರೆ. ಧಾರವಾಡದ ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ಹಿಂದೂಯೇತರ ವ್ಯಾಪಾರಿಗಳ 4 ಅಂಗಡಿಗಳ ಮೇಲೆ ದಾಳಿ ಮಾಡಲಾಗಿತ್ತು. ಇದರಲ್ಲಿ ಕಳೆದ 15 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ನಬಿಸಾಬ್ ಎಂಬುವರ ಅಂಗಡಿಯಲ್ಲಿದ್ದ ಕಲ್ಲಂಗಡಿ ಹಣ್ಣುಗಳಿಗೆ ಹಾನಿ ಮಾಡಲಾಗಿತ್ತು.
ಇದನ್ನೂಓದಿ:ಯುವ ಕಾಂಗ್ರೆಸ್ನಿಂದ ಗ್ಯಾಸ್ ಸಿಲಿಂಡರ್ಗೆ ಶ್ರದ್ಧಾಂಜಲಿ.. ನಡುರಸ್ತೆಯಲ್ಲಿ ಚಿತ್ರಾನ್ನ ತಯಾರಿಸಿ ಜನರಿಗೆ ಹಂಚಿಕೆ..