ಕರ್ನಾಟಕ

karnataka

ETV Bharat / state

ಗ್ರಾಪಂ ಚುನಾವಣೆ; ನ.27 ರಿಂದ ಡಿ. 3 ರವರೆಗೆ ಗ್ರಾಮ ಸ್ವರಾಜ್ಯ ಸಮಾವೇಶ ಆಯೋಜಿಸಿದ ಬಿಜೆಪಿ..! - Grama Panchayat election

ಗ್ರಾಮ ಪಂಚಾಯತ ಚುನಾವಣೆಯ ಹಿನ್ನೆಲೆ ಬಿಜೆಪಿ ಗ್ರಾಮ ಸ್ವರಾಜ್ಯ ಎಂಬ ನೂತನ ಸಮಾವೇಶ ಎಂಬ ಆಯೋಜನೆ ಮಾಡಿದೆ. ಈ ಮೂಲಕ ಚುನಾವಣಾ ದಿನಾಂಕ ಘೋಷಣೆಗೂ ಮೊದಲೇ ಪ್ರಚಾರದ ಅಖಾಡಕ್ಕೆ ದುಮುಕುತ್ತಿದೆ.

Grama Swaraj Convention from BJP
ಗ್ರಾಪಂ ಚುನಾವಣೆ

By

Published : Nov 25, 2020, 11:34 PM IST

ಬೆಂಗಳೂರು: ಗ್ರಾಮ ಪಂಚಾಯತ ಚುನಾವಣೆಯ ಹಿನ್ನೆಲೆಯಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಎಂಬ ನೂತನ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ನವೆಂಬರ್ 27 ರಿಂದ ಬಿಜೆಪಿ ಆಯೋಜನೆ ಮಾಡಿದ್ದು ಚುನಾವಣಾ ದಿನಾಂಕ ಘೋಷಣೆಗೂ ಮೊದಲೇ ಪ್ರಚಾರದ ಅಖಾಡಕ್ಕೆ ದುಮುಕುತ್ತಿದೆ.

ನವೆಂಬರ್ 27 ರಂದು ಉಡುಪಿ, 28 ರಂದು ದಕ್ಷಿಣ ಕನ್ನಡ, 29 ರಂದು ಚಿಕ್ಕಬಳ್ಳಾಪುರ, 30 ರಂದು ಕೋಲಾರ, ಡಿಸೆಂಬರ್ 01 ರಂದು ರಾಮನಗರ, 02 ರಂದು ಬೆಂಗಳೂರು ಗ್ರಾಮಾಂತರ ಹಾಗು 03 ರಂದು ಬೆಂಗಳೂರು ನಗರದಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಆಯೋಜಿಸಲಾಗಿದೆ.

ಗ್ರಾಮ ಸ್ವರಾಜ್ಯ ಸಮಾವೇಶವನ್ನು ಯಶಸ್ವಿಗೊಳಿಸೋಣ, ಬಿಜೆಪಿ ಸಾಧನೆಗಳನ್ನು ಮನ-ಮನೆಗಳಿಗೆ ತಲುಪಿಸೋಣ - ಬಿಜೆಪಿ ಗೆಲ್ಲಿಸೋಣ ಎನ್ನುವ ಕರೆಯೊಂದಿಗೆ ಪ್ರತಿ ಗ್ರಾಮವನ್ನು ತಲುಪಲು ಬಿಜೆಪಿ ಸಜ್ಜಾಗಿದೆ. ಚುನಾವಣಾ ದಿನಾಂಕ ಪ್ರಕಟವಾಗಿಲ್ಲ, ದಿನಾಂಕಕ್ಕೆ ಕಾಯದೆ ಯಾವ ಕ್ಷಣದಲ್ಲಿ ಬೇಕಾದರೂ ಚುನಾವಣೆ ಘೋಷಣೆಯಾದರೂ ಸನ್ನದ್ದವಾಗಿರಬೇಕು ಎಂದು ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದೆ.

ಪಕ್ಷದ ಹೆಸರಿನಲ್ಲಿ ಚುನಾವಣೆ ನಡೆಯದೇ ಇದ್ದರು, ಪಕ್ಷದ ಬೆಂಬಲಿತ ಅಭ್ಯರ್ಥಿಗಳೇ ಅಖಾಡಕ್ಕೆ ಇಳಿಯಲಿರುವ ಕಾರಣ ಆಡಳಿತಾರೂಢ ಬಿಜೆಪಿ ಗ್ರಾಮ ಪಂಚಾಯತ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ನಂತರದ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲೂ ಸಮಾವೇಶ ನಡೆಯಲಿದ್ದು ಆಯಾ ಜಿಲ್ಲೆಯ ಸಂಸದರು, ಶಾಸಕರು, ಪರಿಷತ್ ಸದಸ್ಯರು, ಮುಖಂಡರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ABOUT THE AUTHOR

...view details