ಕರ್ನಾಟಕ

karnataka

ETV Bharat / state

ಸರ್ಕಾರದ ಪೊಳ್ಳು ಭರವಸೆ.. ಆರು ತಿಂಗಳು ಕಳೆದರೂ ಕೈ ಸೇರದ ‘ಕೋವಿಡ್ ಅಪಾಯ ಭತ್ಯೆ’ - ಸರ್ಕಾರಿ ಸೀಟು ಪಡೆದವರಿಗೆ ತಾರತಮ್ಯ

ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಸರ್ಕಾರ ನಡೆದುಕೊಂಡಿಲ್ಲ ಎಂದು ರೆಸಿಡೆನ್ಸಿ ಡಾಕ್ಟರ್ಸ್ ಅಸೋಸಿಯೇಷನ್ ಆರೋಪಿಸಿದೆ.

ರೆಸಿಡೆನ್ಸಿ ಡಾಕ್ಟರ್ಸ್
ರೆಸಿಡೆನ್ಸಿ ಡಾಕ್ಟರ್ಸ್

By

Published : Sep 21, 2021, 2:21 PM IST

ಬೆಂಗಳೂರು: ಕೋವಿಡ್​​ನ ಕಠಿಣ ಪರಿಸ್ಥಿತಿಯಲ್ಲಿ ಸರ್ಕಾರವು ರೆಸಿಡೆನ್ಸಿ ವೈದ್ಯರಿಗೆ ಕೋವಿಡ್ ಅಪಾಯ ಭತ್ಯೆ ನೀಡುವುದಾಗಿ 6 ತಿಂಗಳ ಹಿಂದೆ ಆದೇಶ ಹೊರಡಿಸಿತ್ತು. ಆದರೆ, ಈ ಆದೇಶ ಕೇವಲ ಹಾಳೆಗಳಿಗೆ ಮೀಸಲಾಗಿದೆಯೇ ಹೊರತು ಒಂದು ರೂಪಾಯಿ ಕೂಡ ನಮ್ಮ ಕೈ ಸೇರಿಲ್ಲ. ನಿವಾಸಿ ವೈದ್ಯರನ್ನು ಸರ್ಕಾರವು ಬಂಧಿತ ಕಾರ್ಮಿಕರಿಗಿಂತ ಕೀಳಾಗಿ ಬಳಸಿಕೊಂಡಿದ್ದು, ಈಗ ನಿವಾಸಿ ವೈದ್ಯರ ಕಡೆಗೆ ನಿರ್ಲಕ್ಷ್ಯ ತೋರಿದೆ ಅಂತಾ ರೆಸಿಡೆನ್ಸಿ ಡಾಕ್ಟರ್ಸ್ ಅಸೋಸಿಯೇಷನ್ ಆರೋಪಿಸಿದೆ.

ಕರ್ನಾಟಕವು ಕೋವಿಡ್​​ ಎರಡನೇ ಅಲೆಯಿಂದ ಬಹಳಷ್ಟು ಕಠಿಣ ಸಮಸ್ಯೆಗಳನ್ನು ಅನುಭವಿಸಿದೆ. ಆಸ್ಪತ್ರೆಗಳು ಕೋವಿಡ್ ರೋಗಿಗಳಿಂದ ಸಂಪೂರ್ಣವಾಗಿ ಭರ್ತಿಯಾಗಿದ್ದು, ಅದ್ರಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಹೆಚ್ಚಿನ ಕೋವಿಡ್ ರೋಗಿಗಳಿಂದ ತುಂಬಿ ಹೋಗಿತ್ತು. ಇಂತಹ ಪರಿಸ್ಥಿತಿಯಲ್ಲಿ ನಿವಾಸಿ ವೈದ್ಯರು ಆಸ್ಪತ್ರೆಗಳ ಆಧಾರ ಸ್ತಂಭದಂತೆ ನಿಂತು ರಾಜ್ಯದ ನಾಗರಿಕರನ್ನು ಹಾಗೂ ರಾಜ್ಯ ಸರ್ಕಾರವನ್ನು ಭೀಕರ ಬಿಕ್ಕಟ್ಟಿನಿಂದ ಪಾರು ಮಾಡಲು ಹಗಲಿರುಳು ಶ್ರಮಿಸಿದ್ದಾರೆ.

ಪರಿಸ್ಥಿತಿಯು ವಿಪರೀತ ಕೆಟ್ಟಿರುವ ಸಮಯದಲ್ಲೂ ಅನೇಕ ಸವಾಲು ಹಾಗೂ ಸಮಸ್ಯೆಗಳ ಜೊತೆಗೆ ನಾವೂ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದೇವೆ. ರಾಜ್ಯದಲ್ಲಿ ಕೋವಿಡ್​ ಅನ್ನು ನಿಭಾಯಿಸುವಲ್ಲಿ ನಿವಾಸಿ ವೈದ್ಯರ ಕೊಡುಗೆ ಅಪಾರವಾಗಿದೆ ಅಂತಾ ಪ್ರಕಟಣೆ ಹೊರಡಿಸಿದ್ದಾರೆ.

ಸರ್ಕಾರಿ ಸೀಟು ಪಡೆದವರಿಗೆ ತಾರತಮ್ಯ

ಶೈಕ್ಷಣಿಕ ಶುಲ್ಕ ಪರಿಷ್ಕರಣೆ ಕುರಿತಂತೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಪಡೆದವರಿಗೆ ತುಂಬಾ ತಾರತಮ್ಯ ಮಾಡಲಾಗುತ್ತಿದೆ. ರಾಜ್ಯವು ಅತಿ ಹೆಚ್ಚು ಶೈಕ್ಷಣಿಕ ಶುಲ್ಕವನ್ನು ಪಡೆಯುತ್ತಿದೆ. ಹಾಗಾಗಿ ಇಂತಹ ಕೋವಿಡ್ ಪರಿಸ್ಥಿತಿಯಲ್ಲಿ ಹಗಲಿರುಳು ಶ್ರಮಿಸಿದ ನಿವಾಸಿ ವೈದ್ಯರುಗಳ (PG /SS) ಸೇವೆಯನ್ನು ಪರಿಗಣಿಸಬೇಕು. ಈ ಮೂಲಕ ಶೈಕ್ಷಣಿಕ ಶುಲ್ಕವನ್ನು 2018ರ ಶೈಕ್ಷಣಿಕ ಸಾಲಿನ ಶುಲ್ಕದಂತೆ ಪುನರ್​ ರಚನೆ ಮಾಡುವಂತೆ ಅನೇಕ ಬಾರಿ ಸರ್ಕಾರಕ್ಕೆ ಮನವಿ ಮಾಡಿಕೊಂಡರೂ ಸರ್ಕಾರ ಜಾಣ ಕಿವುಡು ತೋರುತ್ತಿದೆ ಅಂತಾ ಆರೋಪಿಸಿದ್ದಾರೆ.

ಅಳಲು ತೋಡಿಕೊಂಡ ವೈದ್ಯರು

MD/MS pg ವಿದ್ಯಾರ್ಥಿಗಳು ಅಂತಿಮ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸುಮಾರು 1.5 ತಿಂಗಳು ಕಳೆದರೂ ಕಡ್ಡಾಯ ಸೇವೆಯ ಕುರಿತಾಗಿ ಮೆರಿಟ್ ಆಧಾರದ ಮೇಲೆ ಅರ್ಹತಾ ಪಟ್ಟಿ, ಲಭ್ಯವಿರುವ ಖಾಲಿ ಹುದ್ದೆ ಪಟ್ಟಿ ಇತರ ಅಧಿಸೂಚನೆಯನ್ನು ನೀಡಿಲ್ಲ ಅಂತಾ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಪ್ರತಿ ವರ್ಷ ಸರ್ಕಾರ ಸಮಯ ವ್ಯರ್ಥ ಮಾಡುತ್ತಿದ್ದು, ಇದಕ್ಕೆ ಸರಿಯಾಗಿ ಯಾವುದೇ ರೀತಿಯ ಶಾಶ್ವತ ಕ್ರಮಗಳನ್ನು ತೆಗೆದುಕೊಳ್ಳದೇ ಬೇಜವಾಬ್ದಾರಿ ತೋರುತ್ತಿದೆ. MBBS ಮುಗಿಸಿ ಕಡ್ಡಾಯ ಗ್ರಾಮೀಣ ಸೇವೆಯಲ್ಲಿ ತೊಡಗಿಸಿಕೊಂಡಿರುವ ವೈದ್ಯರಿಗೆ 3 ತಿಂಗಳು ಕಳೆದರೂ ಸರ್ಕಾರ ಬಿಡಿಗಾಡು ನೀಡಿಲ್ಲ.

ವೈದ್ಯರು ಯಾವ ಕಾರಣಕ್ಕಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಹಿಂಜರಿಯುತ್ತಾರೆ ಎಂಬುದಕ್ಕೆ ಸರ್ಕಾರದ ಕಿರಿಯ ನಿವಾಸಿ ವೈದ್ಯರ ಮೇಲೆ ತೋರುತ್ತಿರುವ ನಿರ್ಲಕ್ಷ್ಯವೇ ಮುಖ್ಯ ಕಾರಣ ಅಂತಾ ದೂರಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ABOUT THE AUTHOR

...view details