ಬೆಂಗಳೂರು :ರಾಜ್ಯದಲ್ಲಿ ಮೊದಲ ಹಾಗೂ 2ನೇ ಅಲೆ ಎಲ್ಲರ ಆರೋಗ್ಯ ಹಾಗೂ ದೈನಂದಿನ ಬದುಕಿನ ಮೇಲೆ ದಾಳಿ ಮಾಡಿದೆ. ಇದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಕೋವಿಡ್ 2ನೇ ಅಲೆ ತೀವ್ರತೆ ಸದ್ಯ ಕಡಿಮೆ ಆಗ್ತಿದ್ದರೂ ಕೂಡ ಸೋಂಕಿನಿಂದ ಸಂಪೂರ್ಣ ಮುಕ್ತಿ ಸಿಕ್ಕಿಲ್ಲ. ಹೀಗಾಗಿ, ಕೊರೊನಾ ವಿರುದ್ಧದ ಹೋರಾಟಕ್ಕೆ ಲಸಿಕೆಯೇ ಪ್ರಾಥಮಿಕ ಮದ್ದಾಗಿದೆ. ಮೂರನೇ ಅಲೆ ಅಪ್ಪಳಿಸುವ ಮುನ್ನ ಲಸಿಕೆ ನೀಡಲು ಸರ್ಕಾರ ಹರಸಾಹಸ ಪಡುತ್ತಿದೆ.
ಈಗಾಗಲೇ ಲಸಿಕಾ ಉತ್ಸವ ಕಾರ್ಯಕ್ರಮದಲ್ಲಿ ಕಳೆದ ವಾರ ಒಂದೇ ದಿನ 10 ಲಕ್ಷ ಲಸಿಕೆ ನೀಡುವ ಗುರಿ ಇತ್ತು. ಆದರೆ, ಅದನ್ನೂ ಮೀರಿ 12 ಲಕ್ಷ ಲಸಿಕೆ ನೀಡಲಾಗಿತ್ತು. ನವೆಂಬರ್ನೊಳಗೆ ಲಸಿಕಾ ಅಭಿಯಾನ ಪೂರ್ಣ ಮಾಡುವತ್ತ ಸರ್ಕಾರ ಹೆಜ್ಜೆ ಇಟ್ಟಿದೆ. ದಿನಕ್ಕೆ 5 ಲಕ್ಷ ಲಸಿಕೆ ನೀಡುವ ಗುರಿ ಇದೆ. ಕಳೆದ ಆಗಸ್ಟ್ ತಿಂಗಳಲ್ಲಿ 1.12 ಕೋಟಿ ಡೋಸ್ ನೀಡಲಾಗಿದೆ.
ಲಸಿಕೆ ಪೂರ್ಣಗೊಳ್ಳದೆ ಹೋದರೆ ರೂಪಾಂತರಿ ಭೀತಿ
ಮೂರನೆ ಅಲೆಯೊಂದಿಗೆ ರೂಪಾಂತರಿ ಭೀತಿಯೂ ಇದೆ. ಇದನ್ನ ಎದುರಿಸಲು ಲಸಿಕೆ ಪೂರ್ಣಗೊಳ್ಳುವುದು ಅನಿವಾರ್ಯ. ಕೊರೊನಾ ಬರುವುದನ್ನ ತಡೆಯಲು ಅಸಾಧ್ಯವಾದರೂ ರೋಗದ ತೀವ್ರತೆ ಕಡಿಮೆ ಮಾಡುವ ನಿಟ್ಟಿನಲ್ಲಿ ಲಸಿಕೆ ಅತ್ಯಗತ್ಯ. ಈಗಾಗಲೇ ಡೆಲ್ಟಾ, ಅಲ್ಫಾ, ಕಪ್ಪಾ, ಬೇಟಾ, ಡೆಲ್ಟಾ ಪ್ಲಸ್, ಈಟಾ ದಂತಹ 6 ಬಗೆಯ ರೂಪಾಂತರಿ ಸೋಂಕು ಪತ್ತೆಯಾಗಿದೆ.
ರಾಜ್ಯದಲ್ಲಿ ಲಾಕ್ಡೌನ್ಗೆ ಮುಕ್ತಿ ನೀಡಲಾಗಿದೆ. ಆದರೆ, ಜನರು ತಮ್ಮ ನಿತ್ಯದ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಕೇರಳದಲ್ಲಿ ಸೋಂಕು ತೀವ್ರತೆ ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಓಡಾಟವೂ ಹೆಚ್ಚಾಗಿದೆ. ಹೀಗಾಗಿ, ಈ ಮೂಲಗಳಿಂದ ಕೊರೊನಾ ಹಾಗೂ ರೂಪಾಂತರಿ ಆವರಿಸುವ ಸಾಧ್ಯತೆ ಇರುವುದರಿಂದ ಮೂರನೇ ಅಲೆಗೆ ಇವುಗಳೇ ಕಾರಣವಾಗಬಹುದು. ಹೀಗಾಗಿ, ಅಷ್ಟರೊಳಗೆ ಪ್ರತಿಯೊಬ್ಬರಿಗೂ ಮೊದಲ ಡೋಸ್ ಲಸಿಕೆಯನ್ನಾದರೂ ನೀಡುವ ಪ್ರಯತ್ನವನ್ನ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಮಾಡುತ್ತಿದೆ.
ಲಸಿಕಾ ಮಾಹಿತಿ
ಫಸ್ಟ್ ಡೋಸ್